ಕಣ್ಣೂರು (ಕೇರಳ):ಜಾತಿ, ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಅನಾಚಾರಗಳು ಅಷ್ಟಿಷ್ಟಲ್ಲ. ಅಂಥದ್ದೇ ಒಂದು ದುರಂತ ಕಲಾವಿದನ ಬಾಳಲ್ಲಿಯೂ ನಡೆದಿದೆ. ಕೇರಳದ ಉತ್ತರ ಮಲಬಾರ್‌ನಲ್ಲಿನ ದೇವಸ್ಥಾನದಲ್ಲಿ ಕಲಾವಿದನಾಗಿರುವ ವ್ಯಕ್ತಿಯೊಬ್ಬರಿಗೆ ಈ ಧರ್ಮವೇ ಮುಳುವಾಗಿಬಿಟ್ಟಿದೆ. ಮಗ ಮದುವೆಯಾಗುತ್ತಿದ್ದಂತೆಯೇ ಸೊಸೆಯಿಂದಾಗಿ ಇವರು ಕೆಲಸ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ.
ಕಣ್ಣೂರಿನ ನಿವಾಸಿಯಾಗಿರುವ ವಿನೋದ್ ಪಣಿಕ್ಕರ್ ಪೂರಂಕಳಿ ನರ್ತಕರಾಗಿದ್ದಾರೆ. ಕುಣಿಯಾನ್ ಭಗವತಿ ದೇವಸ್ಥಾನದಲ್ಲಿ ಇವರು ಕಲಾವಿದರಾಗಿ ಕೆಲಸ ಮಾಡುತ್ತಿದ್ದರು. ಆದರೆ ಇವರ ಮಗ ಮುಸ್ಲಿಂ ಮಹಿಳೆಯನ್ನು ಮದುವೆಯಾಗಿರುವ ಕಾರಣ, ಅನ್ಯಧರ್ಮಿಯರು ಮನೆಯಲ್ಲಿ ಇರುವುದರಿಂದ ಕೆಲಸಕ್ಕೆ ಬರಬೇಡವೆಂದು ದೇವಸ್ಥಾನದ ಆಡಳಿತ ಮಂಡಳಿ ಹೇಳಿದೆ!
ಹಿಂದೂಯೇತರರು ತಂಗಿದ್ದಾರೆಂದು ಆರೋಪಿಸಿ ಕುಣಿಯಾನ್ ಭಗವತಿ ದೇವಸ್ಥಾನ ಸಮಿತಿಯು ಶಿಕ್ಷಾರ್ಹ ಕ್ರಮ ಕೈಗೊಂಡಿದೆ. ದೇವಾಲಯದಲ್ಲಿ ನಡೆಯಲಿರುವ ನೃತ್ಯ ಕಾರ್ಯಕ್ರಮಕ್ಕೆ ಇವರನ್ನು ತೆಗೆದು ಬೇರೆಯ ಕಲಾವಿದರನ್ನು ನೇಮಕ ಮಾಡಿಕೊಳ್ಳಲಾಗಿದೆ.
ಆದರೆ ಪಣಿಕ್ಕರ್​ ಮಾತ್ರ ತಮ್ಮ ಸೊಸೆಯ ಮೇಲೆ ಯಾವುದೇ ಆರೋಪ ಹೊರಿಸುತ್ತಿಲ್ಲ. ಬದಲಾಗಿ ಧರ್ಮದ ಹೆಸರಿನಲ್ಲಿ ತಮ್ಮ ಕೆಲಸ ತೆಗೆದಿರುವುದಕ್ಕೆ ವಿಷಾದಿಸುತ್ತಾ, ಒಂದು ವೇಳೆ ನನಗೆ ನಿಷೇಧ ಹೇರಿದರೂ ಸೊಸೆಯನ್ನು ತಿರಸ್ಕರಿಸುವುದಿಲ್ಲ ಎಂದಿದ್ದಾರೆ.
ನನ್ನ ಸೊಸೆ ನನ್ನ ಮನೆಯಲ್ಲಿದ್ದಾಗ ನಾನು ಧಾರ್ಮಿಕ ನೃತ್ಯ ಮಾಡಲು ಸಾಧ್ಯವಿಲ್ಲ ಎಂದು ದೇವಸ್ಥಾನದ ಸಮಿತಿಯ ಸದಸ್ಯರು ನನಗೆ ಹೇಳಿದರು. ಆಚರಣೆಯ ಸಮಯದಲ್ಲಿ ಅವಳನ್ನು ಬೇರೆ ಮನೆಗೆ ಸ್ಥಳಾಂತರಿಸಿ ಅಥವಾ ನನ್ನ ಸೊಸೆಯನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸಲು ಅವರು ನನಗೆ ಹೇಳಿದರು. ಆದರೆ ನಾನು ಈ ಪ್ರಸ್ತಾಪಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ದೇವಸ್ಥಾನದ ಅಧಿಕಾರಿಗಳು ದೇವಸ್ಥಾನದ ಆಚರಣೆಗಳನ್ನು ಮುರಿಯಲು ಸಾಧ್ಯವಿಲ್ಲ ಎಂದು ಸಮರ್ಥಿಸಿಕೊಂಡರು. ಹಿಂದೂಗಳಲ್ಲದವರು ವಾಸಿಸುವ ಮನೆಯಿಂದ ಆಚರಣೆಗಳನ್ನು ನಡೆಸಲಾಗುವುದಿಲ್ಲ. ಆತನ ಮೇಲೆ ಯಾವುದೇ ನಿಷೇಧ ಹೇರಿಲ್ಲ. ನಾವು ಮುಂದಿಟ್ಟ ಪ್ರಸ್ತಾವನೆಯನ್ನು ಸ್ವೀಕರಿಸಲು ಅವರು ನಿರಾಕರಿಸಿದರು ಎಂದು ದೇವಸ್ಥಾನ ಸಮಿತಿ ಸದಸ್ಯರೊಬ್ಬರು ತಿಳಿಸಿದರು.
ಅತ್ಯಾಚಾರದ ವಿಡಿಯೋ ಡಿಲೀಟ್​ ಮಾಡುವುದಾಗಿ ಹೇಳಿ ಬಾಲಕಿ ಮೇಲೆ ಗ್ಯಾಂಗ್​ರೇಪ್​: ಎನ್​ಕೌಂಟರ್​ನಲ್ಲಿ ಆರೋಪಿ ಸಾವು

ಅಮ್ಮಾ ಮಾರಿಕಾಂಬೆ… ತಿಂಗಳ ಸಂಬಳ ಬೇಗ ಆಗ್ಲಿ… ನಮ್​ ಇಲಾಖೆಗೆ ಜಾಸ್ತಿ ಶಕ್ತಿ ಕೊಡಿಸು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + nineteen =
Remember me
