ಲಾಸ್‌ ಏಂಜಲಿಸ್‌ (ಅಮೆರಿಕ):ನಾಯಿಗಳನ್ನು ಎಷ್ಟೋ ಮಂದಿ ತಮ್ಮ ಮಕ್ಕಳಂತೆಯೇ ಸಾಕುತ್ತಾರೆ. ಅದಕ್ಕೆ ಏನಾದರೂ ಆಯಿತೆಂದರೆ ಸ್ವಂತ ಮಕ್ಕಳಿಗೇ ಸಮಸ್ಯೆ ಆದಂತೆ ಭಾವಿಸುತ್ತಾರೆ. ಅದೇ ರೀತಿ ತಮ್ಮ ನಾಯಿಗಳ ಮೇಲೆ ಜೀವ ಇಟ್ಟುಕೊಂಡಿರುವ ಪಾಪ್‌ ಗಾಯಕಿ ಗಾಗಾ ಇದೀಗ ಕಳೆದು ಹೋಗಿರುವ ನಾಯಿಗಳಿಗಾಗಿ ರೋಧಿಸುತ್ತಿದ್ದಾಳೆ.
ಈಕೆಯ ಎರಡು ನಾಯಿಗಳನ್ನು ಯಾರೋ ಕಳುವು ಮಾಡಿಕೊಂಡು ಹೋಗಿದ್ದಾರೆ. ಗನ್ ತೋರಿಸಿ ಕಳುವು ಮಾಡಿದ್ದಾರೆ. ಈ ನಾಯಿಗಳಿಗಾಗಿ ಪರಿತಪಿಸುತ್ತಿರುವ ಅಮೆರಿಕದ ಲಾಸ್‌ ಏಂಜಲಿಸ್‌ನ ಈ ಗಾಯಕಿ ಇದೀಗ ಜಾಹೀರಾತು ಹಾಕಿದ್ದು, ತಮ್ಮ ಈ ಎರಡು ಸಾಕು ನಾಯಿಗಳನ್ನು ಸುರಕ್ಷಿತವಾಗಿ ಹಿಡಿದುಕೊಟ್ಟರೆ 5 ಲಕ್ಷ ಡಾಲರ್ (ಸುಮಾರು 3.8 ಕೋಟಿ ರೂಪಾಯಿ) . ಬಹುಮಾನ ನೀಡುವುದಾಗಿ ಘೋಷಿಸಿದ್ದಾಳೆ.

ಕೆಲವು ದಿನಗಳ ಹಿಂದೆ ನಾಯಿ ನೋಡಿಕೊಳ್ಳುತ್ತಿದ್ದ ವ್ಯಕ್ತಿಗಳ ಮೇಲೆ ಗುಂಡು ಹಾರಿಸಿ ಗಾಯಗೊಂಡಿದ್ದ ಕೆಲವು ಕಿಡಿಗೇಡಿಗಳು ಎರಡು ನಾಯಿಗಳನ್ನು ಅಪಹರಿಸಿದ್ದಾರೆ. ಇವು ಫ್ರಾನ್ಸ್ ಮೂಲದ ಬುಲ್ ಡಾಗ್‌ಗಳು. ಇವುಗಳ ಹೆಸರು ಕೋಜಿ ಮತ್ತು ಗುಸ್ಟವ್‌.ಇವುಗಳನ್ನು ಸುರಕ್ಷಿತವಾಗಿ ತಂದುಕೊಟ್ಟವರಿಗೆ ಬಹುಮಾನ ಇರುವ ಬಗ್ಗೆ ಗಾಗಾ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾಳೆ. ನಾಯಿಗಳು ಇಲ್ಲದೇ ಜ್ವರ ಬಂದಂತೆ ಆಗಿದೆ. ಆದ್ದರಿಂದ ತಂದುಕೊಡಲು ಸಾಧ್ಯವಿಲ್ಲದೇ ಹೋದರೆ ಇಂಥಲ್ಲಿ ನಾಯಿ ಇದೆ ಎಂದು ಮಾಹಿತಿ ಕೊಟ್ಟರೆ ಸಾಕು, ಬಹುಮಾನ ಕೊಡುತ್ತೇನೆ ಎಂದಿರುವ ಗಾಗಾ. ಸಂಪರ್ಕಿಸಲು ಇ-ಮೇಲ್ ವಿಳಾಸ ನೀಡಿದ್ದಾಳೆ.
ಮ್ಯಾಟ್ರಿಮೋನಿಯಲ್‌ ಸೈಟ್‌ನಲ್ಲಿ ಯುವತಿಯರ ನೋಡಿ ಮದುವೆ ಪ್ರಪೋಸಲ್‌ ಇಡೋ ಯುವಕರೇ… ಎಚ್ಚರ ಎಚ್ಚರ…

VIDEO: ಸಿಎಂ ನಿವಾಸದ ಮುಂದೆ ಘರ್ಜಿಸುತ್ತಿದೆ ಸಿಂಹ: ಇದು ಮೇಕ್‌ ಇನ್‌ ಇಂಡಿಯಾದ ಹೆಮ್ಮೆ

ಇವರಿಗೆ ತೆಳ್ಳಗೆ, ಬೆಳ್ಳಗೆ ಲುಕ್ ಇರೋ ಯುವತಿಯರೇ ‌ ಇರಬೇಕಂತೆ- ಮೂಗು, ಕೂದಲು ಉದ್ದವಿರಬೇಕಂತೆ!

ಕರ್ನಾಟಕ ವೆಡ್ಸ್‌ ಕೇರಳ- ಮದುವೆಗೆ ಅಡ್ಡಿಬಂತು ಕರೊನಾ ರಿಪೋರ್ಟ್‌: ಮದುಮಕ್ಕಳು ಹೈರಾಣ

ಯೂನಿಫಾರ್ಮ್‌ನಲ್ಲಿಯೇ ಎಂಟ್ರಿ ಕೊಟ್ಟ- ಮಾಡಬಾರದ್ದು ಮಾಡಿ ಪರಾರಿಯಾಗುವಾಗ ಸಿಕ್ಕಿಬಿದ್ದ! ಸಿಸಿಟಿವಿಯಲ್ಲಿ ಪೊಲೀಸನ ಕಳ್ಳಾಟ

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ ಮಾಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + twenty =
Remember me
