ನವದೆಹಲಿ:ಬಾಲಿವುಡ್‌ ನಟ ಆಮೀರ್‌ ಖಾನ್‌ ತಮ್ಮ ಎರಡನೆಯ ಹಿಂದೂ ಪತ್ನಿಗೆ ವಿಚ್ಛೇದನ ನೀಡಿದ ದಿನದಿಂದಲೂ ಸಾಮಾಜಿಕ ಜಾಲತಾಣ ಸೇರಿದಂತೆ ರಾಜಕೀಯ ಧುರೀಣರ ಬಾಯಲ್ಲಿ ಇವರು ಆಹಾರವಾಗಿದ್ದಾರೆ. ಇದಾಗಲೇ ಇವರ ಕುರಿತು ಬಂದಿರುವ ಟೀಕೆಗಳು, ಮೀಮ್ಸ್‌ ಅಷ್ಟಿಷ್ಟಲ್ಲ.
ಇದೀಗ ಭಾರತದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೂ ಆಮೀರ್‌ ಖಾನ್‌ ಉದಾಹರಣೆಯಾಗಿದ್ದಾರೆ. ವಿಚ್ಛೇದನದ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಧ್ಯಪ್ರದೇಶದ ಬಿಜೆಪಿ ಸಂಸದ ಸುಧೀರ್ ಗುಪ್ತಾ ದೇಶದ ಜನಸಂಖ್ಯೆಯ ಅಸಮತೋಲನಕ್ಕೆ ನಟ ಅಮೀರ್ ಖಾನ್ ಅವರಂತಹ ಜನ ಹೊಣೆಗಾರರು ಎಂದು ನೇರವಾಗಿ ಆರೋಪಿಸಿದ್ದಾರೆ.
ವಿಶ್ವ ಜನಸಂಖ್ಯಾ ದಿನಾಚರಣೆಯ ಸಂದರ್ಭದಲ್ಲಿ ಮಾತನಾಡಿದ ಅವರು, ಅಮೀರ್ ಖಾನ್ ಇಬ್ಬರು ಮಕ್ಕಳು ಇರುವ ಮೊದಲ ಪತ್ನಿ ರೀನಾ ದತ್ತಾರನ್ನು ತೊರೆದರು. ಬಳಿಕ ಒಂದು ಮಗುವಿನೊಂದಿಗೆ ಕಿರಣ್ ರಾವ್ ಅವರನ್ನು ತೊರೆದರು. ಈಗ ಅಜ್ಜನಾಗುವ ವಯಸ್ಸಿನಲ್ಲಿ ಅವರು ಮೂರನೇ ಪತ್ನಿಯನ್ನು ಹುಡುಕುತ್ತಿದ್ದಾರೆ. ಇಂಥವರಿಂದಲೇ ಜನಸಂಖ್ಯೆ ಹೆಚ್ಚುತ್ತಿದೆ ಎಂದುದ ಆಕ್ರೋಶ ಹೊರಹಾಕಿದರು.
ಜನಸಂಖ್ಯೆ ಸ್ಫೋಟ ಹಾಗೂ ಭಾರತ- ಪಾಕಿಸ್ತಾನ ವಿಭಜನೆಯ ವಿಷಯವನ್ನೂ ಅವರು ಈ ಸಂದರ್ಭದಲ್ಲಿ ಹೇಳೀದರು. ವಿಭಜನೆಯ ವೇಖೆ ಅತಿ ಕಡಿಮೆ ಜನರು ಇರುವವರಿಗೆ ದೊಡ್ಡ ಪ್ರಮಾಣದಲ್ಲಿ ಭೂಮಿ ಸೇರಿತು. ಆದರೆ ಈ ವೇಳೆ ಭಾರೀ ಸಂಖ್ಯೆಯ ಜನ ಭಾರತಕ್ಕೆ ಮರಳಿದರು. ಭಾರತದಲ್ಲಿ ಭೂಮಿ ವಿಸ್ತರಣೆಯಾಗಲಿಲ್ಲ. ಆದರೆ ಜನಸಂಖ್ಯೆ ಈಗ 140 ಕೋಟಿಗೆ ಏರಿಕೆಯಾಗಿದೆ. ಅದಕ್ಕೆ ಇಂಥವರಲ್ಲದೇ ಇನ್ನಾರು ಕಾರಣ ಎಂದು ಪ್ರಶ್ನಿಸಿದರು.
ಮೂರು ತಿಂಗಳ ಮಗುವನ್ನು ಕಳೆದುಕೊಂಡು ಬಿಕ್ಕಿಬಿಕ್ಕಿ ಅತ್ತ ಅಮ್ಮ- ಸಿಸಿಟಿವಿ ನೋಡಿ ಸುಸ್ತಾದ ಪೊಲೀಸರು!

ನೌಕಾದಳದಲ್ಲಿ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಿಗೆ ಉದ್ಯೋಗ: 350 ಹುದ್ದೆಗಳಿಗೆ ಆಹ್ವಾನ

ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ಕನಸು ನುಚ್ಚುನೂರು: 8500 ಹುದ್ದೆ ರದ್ದು ಮಾಡಿದ ಎಸ್​ಬಿಐ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 8 =
Remember me
