ಸಾವೊಫ್ರಾನ್ಸಿಸ್ಕೊ (ಪೋರ್ಚುಗಲ್​): ಭಾರತ ಮೂಲದ ಗರ್ಭಿಣಿಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ, ಪೋರ್ಚುಗಲ್​ನ ಆರೋಗ್ಯ ಸಚಿವೆ ರಾಜೀನಾಮೆ ನೀಡಿರುವ ಘಟನೆ ನಡೆದಿದೆ. ಇದಕ್ಕೆ ಕಾರಣ, ಆಸ್ಪತ್ರೆಯಲ್ಲಿ ಸರಿಯಾದ ಹಾಸಿಗೆ ಲಭ್ಯತೆ ಇಲ್ಲದೇ ಗರ್ಭಿಣಿ ಮೃತಪಟ್ಟಿದ್ದಾರೆ ಎನ್ನುವ ಕಾರಣಕ್ಕೆ!
ಇದರ ನೈತಿಕ ಹೊಣೆ ಹೊತ್ತು ಆರೋಗ್ಯ ಸಚಿವೆ ಮಾರ್ತಾ ಟೆಮಿಡೊ ರಾಜೀನಾಮೆ ನೀಡಿದ್ದಾರೆ.
ಆಗಿದ್ದೇನು?ಪೋರ್ಚುಗಲ್​ಗೆ ಪ್ರವಾಸಕ್ಕೆಂದು ಹೋಗಿದ್ದ 31 ವಾರಗಳ ಭಾರತದ ಗರ್ಭಿಣಿಗೆ ಇದ್ದಕ್ಕಿದ್ದಂತೆಯೇ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಅತಿದೊಡ್ಡ ಆಸ್ಪತ್ರೆ ಎಂದು ಎನಿಸಿಕೊಂಡಿರುವ ಸಾಂಟಾ ಮಾರಿಯಾಗೆ ಕರೆದುಕೊಂಡು ಹೋಗಲಾಗಿತ್ತು. ಉಸಿರಾಟದ ಸಮಸ್ಯೆಯನ್ನು ತಕ್ಕಮಟ್ಟಿಗೆ ಅಲ್ಲಿ ಸರಿ ಮಾಡಲಾಯಿತು.
ಆದರೆ ಅಲ್ಲಿಯೇ ಆಕೆಯನ್ನು ಇರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಏಕೆಂದರೆ ನವಜಾತ ಶಿಶುಗಳ ವಿಭಾಗ ಭರ್ತಿಯಾಗಿತ್ತು. ತುರ್ತು ಪ್ರಸೂತಿ ಸೇವೆಗಳನ್ನು ತಾತ್ಕಾಲಿಕವಾಗಿ ಮುಚ್ಚಿದ್ದರಿಂದಾಗಿ ಹಾಸಿಗೆಯ ಕೊರತೆ ಉಂಟಾಗಿತ್ತು. ಕೂಡಲೇ ಅವರನ್ನು ಕ್ಸೇವಿಯರ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಆದರೆ ಮಾರ್ಗಮಧ್ಯೆಯೇ ಹೃದಯ ಸ್ತಂಭನದಿಂದ ಅವರು ಮೃತಪಟ್ಟರು.
ಈ ಘಟನೆ ಭಾರಿ ಸುದ್ದಿಯಾಯಿತು. ಘಟನೆಯ ನಂತರ ಸರ್ಕಾರವು ತೀವ್ರ ಟೀಕೆಗೆ ಒಳಗಾಯಿತು. ಆದ್ದರಿಂದ ಘಟನೆಯ ನೈತಿಕ ಹೊಣೆ ಹೊತ್ತು ಆರೋಗ್ಯ ಸಚಿವೆ ರಾಜೀನಾಮೆ ನೀಡಿದರು. ಇದಕ್ಕೆ ನಾನೇ ಜವಾಬ್ದಾರಿ ಹೊರುತ್ತೇನೆ ಎಂದ ಸಚಿವೆ ಘಟನೆ ಸಂಭಿವಿಸಿದ ಐದು ಗಂಟೆಯ ಒಳಗೇ ರಾಜೀನಾಮೆ ನೀಡಿದರು. ಅದನ್ನು ಪ್ರಧಾನಮಂತ್ರಿ ಅವರು ಅಂಗೀಕರಿಸಿದ್ದಾರೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)
VIDEO: ಏಷ್ಯಾಕಪ್​ ಮೈದಾನದಲ್ಲಿ ರೊಮಾನ್ಸ್​- ಪಂದ್ಯ ಸೋತರೂ ಗೆಳತಿ ಹೃದಯ ಕದ್ದ ಹಾಂಗ್​ಕಾಂಗ್​ ಆಟಗಾರ

ಕಿಡ್ನಾಪರ್​ಗೆ ಕಾನೂನು ಸಚಿವ ಸ್ಥಾನ? ಸಂಕಷ್ಟದಲ್ಲಿ ನಿತೀಶ್​ ಸರ್ಕಾರ! ಅಧಿಕಾರ ಸ್ವೀಕಾರದ ಬೆನ್ನಲ್ಲೇ ರಾಜೀನಾಮೆ

VIDEO: ಏಷ್ಯಾಕಪ್​ನಲ್ಲಿ ಹಾಂಗ್​ಕಾಂಗ್​ ಎದುರು ಭಾರತಕ್ಕೆ ಅಮೋಘ ಗೆಲುವು- ಸೂರ್ಯಕುಮಾರ್​ 6-6-6-0-6 ದಾಖಲೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 12 =
Remember me
