ಪಟ್ನಾ (ಬಿಹಾರ):ರಾಜಕೀಯದಲ್ಲಿ ಪಕ್ಷಾಂತರ ಮಾಮೂಲಿಯಾಗಿದ್ದರೂ, ಬಿಹಾರ ರಾಜಕೀಯದಲ್ಲಿ ಇದೀಗ ಕುತೂಹಲದ ಘಟನೆ ನಡೆದಿದೆ. ಬಿಜೆಪಿ ಜತೆಗಿನ ಮೈತ್ರಿ ಮುರಿದುಕೊಂಡು ಆರ್​ಜೆಡಿ, ಕಾಂಗ್ರೆಸ್ ಹಾಗೂ ಇತರ ಎಡಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ನಿತೀಶ್​ ಕುಮಾರ್​ ಸರ್ಕಾರದಲ್ಲಿ ದಿನೇ ದಿನೇ ಕುತೂಹಲದ ಬೆಳವಣಿಗೆ ನಡೆಯುತ್ತಿದೆ. ಒಂದೆಡೆ ಆರ್​ಜೆಡಿ ತೊರೆದು ಬಿಜೆಪಿಯ ಕೈ ಹಿಡಿಯುತ್ತಿರುವವರ ಸಂಖ್ಯೆ ಏರುತ್ತಿರುವ ನಡುವೆಯೇ, ಇನ್ನೊಂದೆಡೆ, ರಾಜಕೀಯ ಚಾಣಕ್ಯ ಪ್ರಶಾಂತ್ ಕಿಶೋರ್ ಅವರು ಸಿಎಂ ನಿತೀಶ್​ ಕುಮಾರ್​ ಅವರನ್ನು ಭೇಟಿಯಾಗಿದ್ದಾರೆ!ಚುನಾವಣಾ ತಂತ್ರಗಾರ ಎಂದು ಕರೆಸಿಕೊಳ್ಳುತ್ತಿರುವ ಪ್ರಶಾಂತ್ ಕಿಶೋರ್, ನಿನ್ನೆಯವರೆಗೂ ನಿತೀಶ್ ಕುಮಾರ್ ಮತ್ತು ಅವರ ನೀತಿಗಳ ವಿರುದ್ಧ ಧ್ವನಿ ಎತ್ತಿದ್ದರು. ನಿತೀಶ್​ ಕುಮಾರ್​ ಅವರ ಬಗ್ಗೆ ಟೀಕಿಸುತ್ತಲೇ ಬಂದಿದ್ದರು. ಅವರ ಜತೆ ತಾವು ಗುರುತಿಸಿಕೊಳ್ಳುವುದಿಲ್ಲ ಎಂದೂ ಹೇಳಿದ್ದರು. ಆದರೆ ಈಗ ಕುತೂಹಲದ ಬೆಳವಣಿಗೆಯಲ್ಲಿ ಅವರು ನಿತೀಶ್​ ಕುಮಾರ್​ ಅವರನ್ನು ಭೇಟಿ ಮಾಡಿದ್ದಾರೆ!
ಪಟ್ನಾದಲ್ಲಿರುವ ಮುಖ್ಯಮಂತ್ರಿಗಳ ಕಚೇರಿ ‘ಏಕ್ ಅಣ್ಣಾ ಮಾರ್ಗ್’ನಲ್ಲಿ ಇವರಿಬ್ಬರೂ ಭೇಟಿಯಾಗಿದ್ದು, ಎರಡು ಗಂಟೆಗೂ ಅಧಿಕ ಸಮಯದವರೆಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಆರ್​ಜೆಡಿ ಬಿಟ್ಟು ಬಿಜೆಪಿ ಜತೆ ನಿತೀಶ್​ಕುಮಾರ್​ ಮೈತ್ರಿ ಮಾಡಿಕೊಂಡಿದ್ದರಿಂದ ದೂರ ಸರಿದಿದ್ದ ನಾಯಕರು, ಈಗ ಮತ್ತೆ ನಿತೀಶ್​ ಅವರ ಬಳಿ ಬರುತ್ತಿರುವ ನಡುವೆಯೇ ಪ್ರಶಾಂತ್​ ಕಿಶೋರ್​ ಅವರ ಈ ನಡೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಇದಾಗಲೇ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳ ಜತೆಯಲ್ಲಿಯೂ ಕೆಲಸ ಮಾಡಿರುವ ಪ್ರಶಾಂತ್​ ಕಿಶೋರ್​, ಈಗ ಪುನಃ ಬಿಹಾರದಲ್ಲಿನ ಮಹಾಘಟಬಂಧನದ ಜತೆ ಸೇರಿ ಚುನಾವಣಾ ರಣತಂತ್ರ ರೂಪಿಸಬಹುದೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಜೆಡಿಯು ಸಂಸದರಾಗಿದ್ದ ಆರ್‌ಸಿಪಿ ಸಿಂಗ್‌ ಅವರ ಜತೆಗಿನ ಮುನಿಸಿನಿಂದಾಗಿ ಪ್ರಶಾಂತ್ ಕಿಶೋರ್ ಜೆಡಿಯುನಿಂದ ಹೊರನಡೆದಿದ್ದರು. ಆದರೆ ಈಗ ಆರ್‌ಸಿಪಿ ಸಿಂಗ್ ಜೆಡಿಯು ಬಿಟ್ಟ ಹಿನ್ನೆಲೆಯಲ್ಲಿ ಮತ್ತೊಮ್ಮೆ ಪ್ರಶಾಂತ್ ಕಿಶೋರ್ ಜೆಡಿಯು ಜತೆ ಸಂಪರ್ಕ ಸಾಧಿಸಿದ್ದಾರೆ ಎನ್ನಲಾಗುತ್ತಿದೆ.
ಈ ನಡುವೆಯೇ, ಜೆಡಿಯುನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಪವನ್ ವರ್ಮ ಕೂಡ ಪಟ್ನಾ ತಲುಪಿದ್ದು, ನಿತೀಶ್​ ಕುಮಾರ್​ ಜತೆ ಮಾತುಕತೆ ನಡೆಸಿದ್ದಾರೆ. ದೇಶಾದ್ಯಂತ ಎಲ್ಲ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ನಿತೀಶ್‌ ಕುಮಾರ್‌ ಅಭಿಯಾನದ ಕುರಿತು ಈ ಮೂವರೂ ಸೇರಿ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. (ಏಜೆನ್ಸೀಸ್​)
ನಮ್​ ಇಲಾಖೆಯಲ್ಲಿ ಹಲವಾರು ಕಳ್ಳರಿದ್ದಾರೆ, ನಾನೇ ಅವರ ನಾಯಕ! ಸಚಿವನ ಮಾತಿಗೆ ಸಿಎಂ ನಿತೀಶ್​ ಕಕ್ಕಾಬಿಕ್ಕಿ
ಗೋವಾ ಕಾಂಗ್ರೆಸ್​ನಲ್ಲಿ ಮತ್ತೆ ಕೋಲಾಹಲ! ಬಿಜೆಪಿಯ ಕೈ ಹಿಡಿಯಲಿದ್ದಾರಾ ಎಂಟು ಶಾಸಕರು?
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:5 × five =
Remember me
