ನವದೆಹಲಿ:ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರ ಪಂಚರಾಜ್ಯಗಳ ಚುನಾವಣೆ ಬಳಿಕ ಇದೀಗ ಎಲ್ಲರ ಕಣ್ಣು ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆ ಮೇಲೆ ನೆಟ್ಟಿದೆ. ಪಂಚರಾಜ್ಯಗಳಲ್ಲಿ ಕಾಂಗ್ರೆಸ್​ ಹೀನಾಯ ಸೋಲು ಕಂಡಿದ್ದು, ಇದೇ ವರ್ಷಾಂತ್ಯದಲ್ಲಿ ನಡೆಯಲಿರುವ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆಯಲ್ಲಿ ಗೆಲ್ಲಲು ಭಾರಿ ಕಸರತ್ತು ನಡೆಸಿದೆ.
ಇದೇ ವೇಳೆ, ರಾಜಕೀಯ ತಂತ್ರಜ್ಞ ಪ್ರಶಾಂತ್​ ಕಿಶೋರ್​, ಕಾಂಗ್ಎಸ್​ನ ಭವಿಷ್ಯವನ್ನು ಹೇಳಿದ್ದಾರೆ. ಈ ಎರಡು ರಾಜ್ಯಗಳಲ್ಲಿ ಕಾಂಗ್ರೆಸ್​ ಗೆಲ್ಲಲಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಅವರು ಹೇಳಿದ್ದಾರೆ. ಇವರು ಹೇಳಿದ್ದು ಏನೆಂದರೆ, ಪಂಚರಾಜ್ಯಗಳಂತೆ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಕೂಡ ಕಾಂಗ್ರೆಸ್‌ಗೆ ಭಾರಿ ಸೋಲು ಎದುರಾಗಲಿದೆ ಎಂದು!
ಈ ಕುರಿತು ಅವರು ಟ್ವೀಟ್‌ ಮಾಡಿದ್ದಾರೆ. ಕಾಂಗ್ರೆಸ್​ ಬಲವರ್ಧನೆ ಹಾಗೂ ಮುಂದಿನ ಯೋಜನೆ ರೂಪಿಸಲು ರಾಜಸ್ಥಾನದ ಉದಯಪುರದಲ್ಲಿ ಇತ್ತೀಚೆಗೆ ‘ಚಿಂತನ್ ಶಿಬಿರ್​’ ನಡೆಸಿತ್ತು. ಈ ಬಗ್ಗೆ ಕಮೆಂಟ್​ ಮಾಡಿರುವ ಪ್ರಶಾಂತ್​ ಕಿಶೋರ್​, ಈ ಶಿಬಿರದ ನಂತರ ಚುನಾವಣೆ ಫಲಿತಾಂಶದ ಕುರಿತು ಕಾಮೆಂಟ್ ಮಾಡಲು ನನ್ನನ್ನು ಪದೇ ಪದೇ ಕೇಳಲಾಗಿದೆ. ನನ್ನ ದೃಷ್ಟಿಯಲ್ಲಿ, ಯಥಾಸ್ಥಿತಿಯನ್ನು ವಿಸ್ತರಿಸುವುದು ಮತ್ತು ಕಾಂಗ್ರೆಸ್ ನಾಯಕತ್ವಕ್ಕೆ ಸ್ವಲ್ಪ ಸಮಯವನ್ನು ನೀಡುವುದನ್ನು ಹೊರತುಪಡಿಸಿ ಅರ್ಥಪೂರ್ಣವಾದ ಏನನ್ನೂ ಸಾಧಿಸಲು ವಿಫಲವಾಗಿದೆ. ಕನಿಷ್ಠ ಮುಂಬರುವ ಗುಜರಾತ್​, ಹಿಮಾಚಲ ಪ್ರದೇಶದಲ್ಲಿ ಸೋಲಲಿದೆ ಎಂದು ಹೇಳಿದ್ದಾರೆ.
ಇದಾಗಲೇ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳಲ್ಲಿಯೂ ಕೆಲಸ ಮಾಡಿ ರಾಜಕೀಯ ತಂತ್ರಜ್ಱ ಎನಿಸಿಕೊಂಡಿರುವ ಪ್ರಶಾಂತ್​ ಕಿಶೋರ್​, ತಾವು ಕೆಲಸ ನಿರ್ವಹಿಸುತ್ತಿದ್ದ ಬಹುತೇಕ ಎಲ್ಲಾ ಪಕ್ಷಗಳಲ್ಲಿಯೂ ಗೆಲುವನ್ನು ತಂದುಕೊಟ್ಟವರು. ಇತ್ತೀಚೆಗೆ ಕಾಂಗ್ರೆಸ್ ಸೇರುವ ಪ್ರಸ್ತಾಪ ಅವರಿಗೆ ಬಂದಿತ್ತು. ಆದರೆ ಅದನ್ನು ಅವರು ತಿರಸ್ಕರಿಸಿದ್ದರು.
I’ve been repeatedly asked to comment on the outcome of#UdaipurChintanShivirIn my view, it failed to achieve anything meaningful other than prolonging the status-quo and giving some time to the#Congressleadership, at least till the impending electoral rout in Gujarat and HP!— Prashant Kishor (@PrashantKishor)May 20, 2022
I’ve been repeatedly asked to comment on the outcome of#UdaipurChintanShivirIn my view, it failed to achieve anything meaningful other than prolonging the status-quo and giving some time to the#Congressleadership, at least till the impending electoral rout in Gujarat and HP!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
