ಹೈದರಾಬಾದ್:ಬಾಲಿವುಡ್​ ಹಾಗೂ ಟಾಲಿವುಡ್ ಖ್ಯಾತ ಫ್ಯಾಷನ್ ಡಿಸೈನರ್ ಪ್ರತ್ಯೂಷಾ ಗರಿಮೆಲ್ಲಾ (35) ಹೈದರಾಬಾದ್​ನ ಬಂಜಾರಾ ಹಿಲ್ಸ್‌ನಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಮೂಲಕ ಫ್ಯಾಷನ್​ ಜಗತ್ತಿನಲ್ಲಿ ಮತ್ತೊಂದು ತಲ್ಲಣ ಸೃಷ್ಟಿಯಾಗಿದೆ.
ಕಳೆದ ಎರಡೇ ವಾರಗಳಲ್ಲಿ ನಾಲ್ವರು ಮಾಡೆಲ್​​ಗಳು ಆತ್ಮಹತ್ಯೆಗೆ ಶರಣಾಗಿದ್ದರು. ಅವರೆಲ್ಲರೂ ಪಶ್ಚಿಮ ಬಂಗಾಳಕ್ಕೆ ಸೇರಿದವರು. ಆದರೆ ಇದೀಗ ಒಂದೇ ವಾರದಲ್ಲಿ ಹೈದರಾಬಾದ್​ನ ಫ್ಯಾಷನ್ ಡಿಸೈನರ್ ಸಾವಿಗೆ ಶರಣಾಗಿದ್ದು, ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ಕಂಡುಬಂದಿದೆ. ಅವರ ಕೋಣೆಯಲ್ಲಿ ಕಾರ್ಬನ್ ಮಾನಾಕ್ಸೈಡ್ ಬಾಟಲಿ ಪತ್ತೆಯಾಗಿದ್ದು, ಇದನ್ನು ಉಸಿರಾಟ ಮಾಡಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಆದರೂ ಈಕೆಯ ಸಾವಿನ ಹಿಂದೆ ಅನುಮಾನ ಮನೆಮಾಡಿದೆ.
ರವೀನಾ ಟಂಡನ್, ಪರಿಣಿತಿ ಚೋಪ್ರಾ, ಹುಮಾ ಖುರೇಷಿ, ಕಾಜೋಲ್, ಶ್ರೇಯಾ ಸರಣ್, ಕಾಜಲ್ ಅಗರ್ವಾಲ್, ಮಾಧುರಿ ದೀಕ್ಷಿತ್, ಜೂಹಿ ಚಾವ್ಲಾ, ಗೌಹರ್ ಖಾನ್, ನೇಹಾ ಧೂಪಿಯಾ, ಭೂಮಿ ಫಡ್ನೇಕರ್ ಸೇರಿದಂತೆ ಹಲವರ ಜೊತೆ ಪ್ರತ್ಯುಷಾ ಕೆಲಸ ಮಾಡಿದ್ದರು.
ಪ್ರತ್ಯೂಷಾ ಅವರು ಬಂಜಾರ ಹಿಲ್ಸ್ ಪೊಲೀಸ್ ಠಾಣೆ ವ್ಯಾಪ್ತಿಯ ಫಿಲಂ ನಗರದ ಮನೆಯೊಂದರಲ್ಲಿ ತಂಗಿದ್ದರು. ಶನಿವಾರ ಮಧ್ಯಾಹ್ನ, ಭದ್ರತಾ ತಪಾಸಣೆಗೆ ವೇಳೆ ಅವರು ಪ್ರತಿಕ್ರಿಯಿಸದ ಕಾರಣ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಮನೆಯ ಬಾಗಿಲು ಒಡೆದು ಪೊಲೀಸರು ಒಳ ನುಗ್ಗಿದ್ದಾಗ ಸ್ನಾನದಕೋಣೆಯಲ್ಲಿ ಶವ ಪತ್ತೆಯಾಗಿದೆ.
ಅಮೆರಿಕದಲ್ಲಿ ಫ್ಯಾಷನ್ ಡಿಸೈನಿಂಗ್ ವ್ಯಾಸಂಗ ಮಾಡಿದ್ದರು ಪ್ರತ್ಯುಷಾ, 2013ರಲ್ಲಿ ಹೈದರಾಬಾದ್​ಗೆ ಬಂದುವೃತ್ತಿ ಜೀವನ ಆರಂಭಿಸಿದ್ದ ಇವರು ತಮ್ಮದೇ ಹೆಸರಿನಲ್ಲಿ ಫ್ಯಾಷನ್ ಲೇಬಲ್ ಪ್ರಾರಂಭ ಮಾಡಿದ್ದರು. ಫ್ಯಾಷನ್​ ಜಗತ್ತಿನಲ್ಲಿ ಇವರು ಟಾಪ್​ ಸ್ಥಾನದಲ್ಲಿದ್ದರು. ಅವರ ಕೃತಿಗಳು ಪ್ರತ್ಯುಷಾ ಗರಿಮೆಲ್ಲಾ ಎಂಬ ಬ್ರಾಂಡ್ ಹೆಸರಿನಲ್ಲಿ ಮಾರಾಟವಾಗಿವೆ. ಹೈದರಾಬಾದ್ ಹಾಗೂ ಮುಂಬೈನಂಥ ಪ್ರತಿಷ್ಠಿತ ನಗರಗಳಲ್ಲಿ ಮಳಿಗೆಗಳನ್ನು ಹೊಂದಿದ್ದರು. ಅದಲ್ಲದೆ, ಸಾಮಾಜಿಕ ಮಾಧ್ಯಮಗಳಲ್ಲೂ ಆಕೆಗೆ ಉತ್ತಮ ಬೆಂಬಲ ವ್ಯಕ್ತವಾಗಿತ್ತು. ಆಕೆಯ ಭಾರತೀಯ ಔಟ್ ಫಿಟ್ ಗಳನ್ನು ಅಭಿಮಾನಿಗಳು ಸದಾಕಾಲ ಮೆಚ್ಚುತ್ತಿದ್ದರು.
ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದು, ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ದೆಹಲಿಯಲ್ಲಿರುವ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೊಬ್ಬ ಮಾಡೆಲ್​ ಆತ್ಮಹತ್ಯೆ: 2 ವಾರದಲ್ಲಿ ನಾಲ್ವರು ಸೂಸೈಡ್​​, ಕಾರಣ ನಿಗೂಢ

ತಾಳಿ ಕಟ್ಟಬೇಕೆನ್ನುವಷ್ಟರಲ್ಲಿ ನೀರು ಕುಡಿದು ಬರ್ತೇನೆಂದು ಹೋದ ವರ ನಾಪತ್ತೆ! ಬರಿಗೈನಲ್ಲಿ ವಧು ವಾಪಸ್​

ಯುವಕನ ಜತೆ ಟೀಚರ್ ಕಾಮದಾಟಕ್ಕೆ ಬಲಿಯಾದ ಗಂಡ! ವಿಜಯಪುರದ ಕೊಲೆ ರಹಸ್ಯ ಭೇದಿಸಿದ ಪೊಲೀಸರು

Sign in to your account
Please enter an answer in digits:12 + two =
Remember me
