ಕರ್ಚನಾ ( ಉತ್ತರಪ್ರದೇಶ):ಅನುಮಾನಾಸ್ಪದವಾಗಿ ಮೃತಪಟ್ಟ 18 ವರ್ಷ ಮನೆ ಮಗಳು ಬದುಕಿ ಬರುತ್ತಾಳೆಂದು ಐದು ದಿನ ಕುಟುಂಬದ 11 ಮಂದಿ ಆಕೆಯ ಶವದ ಸುತ್ತಲೂ ಕುಳಿತ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಕರ್ಚನಾ ಪ್ರದೇಶದ ದೀಹಾ ಗ್ರಾಮದಲ್ಲಿ ನಡೆದಿದೆ.
ತಂತ್ರ – ಮಂತ್ರದ ಮೂಲಕ ಜೀವ ತುಂಬುತ್ತೇವೆ ಎಂದು ಯುವತಿಯ ಶವದ ಮುಂದೆ ಐದು ದಿನ ಕೇವಲ ಗಂಗಾಜಲ ಸೇವನೆ ಮಾಡುತ್ತಾ ಕುಳಿತಿದ್ದಾರೆ ಕುಟುಂಬಸ್ಥರು! ಐದು ದಿನಗಳವರೆಗೆ ಮನೆಗೆ ಬೀಗ ಹಾಕಿದ್ದು ಹಾಗೂ ಮನೆಯಿಂದ ವಾಸನೆ ಬರುತ್ತಿರುವುದನ್ನು ನೋಡಿ ಸಂದೇಹಗೊಂಡ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದಾಗ ವಿಷಯ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಈ ಭಯಾನಕ ದೃಶ್ಯವನ್ನು ಕಂಡು ಒಂದು ಕ್ಷಣ ಅವಾಕ್ಕಾಗಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಆದರೆ ಶವವನ್ನು ಕೊಡಲು ಕುಟುಂಬಸ್ಥರು ನಿರಾಕರಿಸಿದ್ದರೂ ಪೊಲೀಸರು ಮನವೊಲಿಸಿ ಕರೆದುಕೊಂಡು ಹೋಗಿದ್ದಾರೆ.ಮೃತ ಯುವತಿಯನ್ನು ಅಂತಿಮ್​ ಯಾದವ್​ ಎಂದು ಗುರುತಿಸಲಾಗಿದೆ. ಮಾಟ ಮಂತ್ರ ಮಾಡಿಸಿದರೆ ಮಗಳು ವಾಪಸ್​ ಬರುತ್ತಾಳೆ ಎಂದು ಯಾರೋ ಹೇಳಿದ್ದರಿಂದ ಶವದ ಸುತ್ತಲೂ ಮಾಟ ಮಂತ್ರ ಮಾಡಿಸಿ ಇಟ್ಟಿರುವುದು ಕಂಡುಬಂದಿದೆ.
ಕುಟುಂಬದವರ ಮಾನಸಿಕ ಸ್ಥಿತಿ ಸರಿಯಿಲ್ಲ ಎಂಬ ವಿಚಾರವನ್ನು ಪೊಲೀಸರು ಇದೇ ವೇಳೆ ತಿಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಯುವತಿ ಕುಟುಂಬಸ್ಥರನ್ನು ವಶಕ್ಕೆ ಪಡೆದು, ಅವರ ಮಾನಸಿಕ ಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಐದು ದಿನಗಳವರೆಗೆ ಆಹಾರ ಸೇವನೆ ಮಾಡದ ಹಿನ್ನೆಲೆಯಲ್ಲಿ ಎಲ್ಲರ ಸ್ಥಿತಿ ಗಂಭೀರವಾಗಿದೆ, ಅದರ ಪೈಕಿ ಒಬ್ಬ ವ್ಯಕ್ತಿಯ ಪರಿಸ್ಥಿತಿ ತುಂಬಾ ಹದಗೆಟ್ಟಿರುವುದಾಗಿ ಪೊಲೀಸರು ಹೇಳಿದ್ದಾರೆ.
3ನೇ ಮದ್ವೆಯ ಗಾಳಿಸುದ್ದಿ ಬೆನ್ನಲ್ಲೇ ಮೈಸೂರಿನ ಸೈಬರ್​ ಕ್ರೈಂ ಪೊಲೀಸರಿಗೆ ದೂರು ನೀಡಿದ ನಟಿ ಪವಿತ್ರಾ ಲೋಕೇಶ್​!

ಆಸ್ತಿ ಸ್ವಯಾರ್ಜಿತವಾಗಿದ್ದರೆ ಮೊಮ್ಮಕ್ಕಳಿಗೆ ಅದರಲ್ಲಿ ಯಾವುದೇ ಪಾಲು ಇಲ್ಲ- ಕಾನೂನಲ್ಲಿ ಉಲ್ಲೇಖವಾಗಿದ್ದು ಹೀಗಿದೆ ನೋಡಿ..

ಪಂಡಿತರ ಮರಿ ಮೊಮ್ಮಗನಾದ ಮೂರ್ಖ ರಾಹುಲ್​ ಗಾಂಧಿಯೇ…. ಇವರೆಲ್ಲಾ ಯಾರು?- ‘ಕಾಶ್ಮೀರ್​ ಫೈಲ್ಸ್’​ ನಿರ್ದೇಶಕ ಕಿಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × five =
Remember me
