ಪ್ರಯಾಗ್‌ರಾಜ್‌ (ಉತ್ತರ ಪ್ರದೇಶ):ಪ್ರೇಮಿಗಳು ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳಲು ಕೊನೆ ಕ್ಷಣದವರೆಗೂ ಪ್ರಯತ್ನಿಸುತ್ತಾರೆ. ಅದಕ್ಕಾಗಿ ಅವರು ಏನು ಬೇಕಾದರೂ ಮಾಡಲು ರೆಡಿ ಇರುತ್ತಾರೆ. ಅದಕ್ಕಾಗಿಯೇ ಪ್ರೇಮ ಕುರುಡು ಎನ್ನುವುದು.. ಹೀಗೆಂದು ಖ್ಯಾತ ಕವಿ ವಿಲಿಯಂ ಷೇಕ್ಸ್‌ಪಿಯರ್‌ ಹೇಳಿದ್ದರು. ಆದರೆ ಎಲ್ಲಾ ಸಂದರ್ಭದಲ್ಲಿಯೂ ಹೀಗೆಯೇ ಆಗುತ್ತಾ? ಎಂದು ಕೇಳುವವರು ಈ ಘಟನೆಯೊಮ್ಮೆ ಓದಿದರೆ ಉತ್ತರ ಸಿಕ್ಕೀತು.
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ 32 ವರ್ಷದ ಮಹಿಳೆ, ಒಂದು ಮಗುವಿನ ತಾಯಿ ಹಾಗೂ ಆಕೆಯ 30 ವರ್ಷದ ಪ್ರಿಯತಮ ಚಂದುವಿನ ಕಥೆಯಿತು. ಇವರಿಬ್ಬರೂ ಅನೇಕ ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಮನೆಯವರಿಗೆ ಇವರ ಪ್ರೀತಿ ಇಷ್ಟವಿರಲಿಲ್ಲ. ಆದ್ದರಿಂದ ಇಬ್ಬರನ್ನೂ ಬೇರೆ ಬೇರೆಯವರಿಗೆ ಕೊಟ್ಟು ಮದುವೆ ಮಾಡಿದರು.
ಮದುವೆಯಾದ ವರ್ಷಗಳೇ ಕಳೆದರೂ ಈ ಪ್ರೇಮಿಗಳ ಮನಸ್ಸು ಮಾತ್ರ ಬದಲಾಗಿರಲಿಲ್ಲ. ಇತ್ತ ಯುವತಿ ಮಗುವಿನ ತಾಯಿಯಾದರೂ ಪ್ರೇಮಿಯನ್ನು ಮರೆಯಲು ಸಾಧ್ಯವಾಗಿರಲಿಲ್ಲ. ಇವರು ಆಗಾಗ್ಗೆ ಭೇಟಿಯಾಗುತ್ತಲೇ ಇರುತ್ತಿದ್ದರು. ಒಬ್ಬರನ್ನೊಬ್ಬರು ಬಿಟ್ಟು ಬದುಕುವುದೇ ಕಷ್ಟವಾಯಿತು ಇಬ್ಬರಿಗೂ.
ಆದರೆ ಇದಾಗಲೇ ಮದುವೆಯಾಗಿರುವ ಕಾರಣ, ಇವರಿಬ್ಬರೂ ಪುನಃ ಮದುವೆಯಾಗುವಂತಿರಲಿಲ್ಲ. ಇದಕ್ಕಾಗಿಯೇ ಈ ಜನ್ಮದಲ್ಲಿ ಅಲ್ಲದಿದ್ದರೂ ಮುಂದಿನ ಜನ್ಮದಲ್ಲಾದರೂ ಸಿಗೋಣ ಎಂದು ನಿರ್ಧರಿಸಿದರು. ಆದ್ದರಿಂದ ಯಮುನಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದರು.
ಇಬ್ಬರೂ ಕೈ ಕೈ ಹಿಡಿದುಕೊಂಡು ಕಣ್ಣುಮುಚ್ಚಿಕೊಂಡು ಇನ್ನೇನು ಸಾಯುವ ನಿರ್ಧಾರಕ್ಕೆ ಬಂದರು. ಯುವತಿ ಗಟ್ಟಿ ಮನಸ್ಸು ಮಾಡಿ ಹಾರಿಯೇ ಬಿಟ್ಟಳು. ಆದರೆ ಈ ಚಂದುಗೆ ಮಾತ್ರ ನೀರು ನೋಡಿ ಭಯವಾಗಿ ಅಲ್ಲಿಂದ ಕಾಲ್ಕಿತ್ತ. ಈಜಲು ಚೆನ್ನಾಗಿ ಕಲಿತಿದ್ದ ಯುವತಿ ಈಜಿ ದಡ ಸೇರಿದಳು. ನಂತರ ಪ್ರಿಯತಮ ಮಾಡಿರುವ ಮೋಸದ ಅರಿವಾಯಿತು.
ಈಗ ಕೊಲೆ ಯತ್ನದ ಆರೋಪದ ಮೇಲೆ ಪ್ರಿಯಕರನ ವಿರುದ್ಧ ಆಕೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಆತನಿಗೆ ಶಿಕ್ಷೆ ಕೊಡಿಸಲು ಸಕಲ ಪ್ರಯತ್ನ ಮಾಡುತ್ತಿದ್ದಾಳೆ. ಆದ್ದರಿಂದ ಪ್ರತಿ ಸಲವೂ ಪ್ರೇಮ ಕುರುಡು, ಪ್ರೇಮಿಗಳು ಏನಾದರೂ ಮಾಡಲು ಸಿದ್ಧ ಎನ್ನುವುದು ಸತ್ಯವಾಗಲೇಬೇಕೆಂದು ಇಲ್ಲ!
ವಯಾಗ್ರ ತಂದ ಆಪತ್ತು- ಅತಿಯಾಗಿ ಸೇವಿಸಿ ಜೀವನಪೂರ್ತಿ ಪೇಚಿಗೆ ಸಿಲುಕಿದ ನವವಿವಾಹಿತ: ವೈದ್ಯರ ಎಚ್ಚರಿಕೆ

ಗಂಡ-ಹೆಂಡ್ತಿ ಮಧ್ಯೆ ಜಗಳ ತಂದಿಟ್ಟ ಮ್ಯಾಗಿ! ಬಳ್ಳಾರಿ ಯುವಕನ ಕಷ್ಟ ನೋಡಲಾಗದೇ ಡಿವೋರ್ಸ್​ ಕೊಟ್ಟ ಕೋರ್ಟ್​

‘ಆ ಇನ್ಸ್‌ಪೆಕ್ಟರ್‌ನ ರೌಡಿಸಂ ನನ್ನತ್ರ ನಡಿಯಲ್ಲ, ಎಲ್ಲಾ ಮಾಡೇ ಬಂದವ ನಾನು… ಮೂರನೇ ಕಣ್ಣು ಬಿಟ್ರೆ ಅಷ್ಟೇ..’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − three =
Remember me
