ಮೋತಿಹಾರ (ಪಟ್ನಾ):ಕೆಲವರಿಗೆ ಅದೆಂಥ ರೀತಿಯ ಛಲವೆಂದರೆ ಹಿಡಿದ ಕೆಲಸ ಪೂರ್ಣವಾಗುವವರೆಗೂ ಏನೇ ಸಮಸ್ಯೆ ಎದುರಾದರೂ ಕುಗ್ಗುವುದಿಲ್ಲ, ಜಗ್ಗುವುದಿಲ್ಲ, ಬಗ್ಗುವುದಿಲ್ಲ. ಅಂಥದ್ದೇ ಒಂದು ಅಪರೂಪದ, ಅಷ್ಟೇ ಕುತೂಹಲದ ಘಟನೆ ಬಿಹಾರದ ಮೋತಿಹಾರ ಜಿಲ್ಲೆಯಲ್ಲಿ ನಡೆದಿದೆ.
ದ್ವಿತೀಯ ಪಿಯು ಪರೀಕ್ಷೆಗೆಂದು ಸಕಲ ಸಿದ್ಧತೆ ಮಾಡಿಕೊಂಡಿದ್ದ ತುಂಬು ಗರ್ಭಿಣಿಯೊಬ್ಬಳು, ಮಾರ್ಗ ಮಧ್ಯೆಯೇ ಮಗುವಿಗೆ ಜನ್ಮ ನೀಡಿ ನಂತರ ಪರೀಕ್ಷೆ ಬಂದು ಬರೆದಿದ್ದಾರೆ!
ಇಂಥದ್ದೊಂದು ಧೀರೆಯ ಹೆಸರು ಕಾಜಲ್‌. ಕಾಜಲ್‌ ಅವರಿಗೆ ಹೆರಿಗೆಯ ಸಮಯ ನಿಗದಿಯಾಗಿದ್ದರೂ ಒಂದೆರಡು ದಿನ ಡೇಟ್‌ ಮುಂದಕ್ಕೆ ಹೋಗಬಹುದು ಎಂದುಕೊಂಡು ಮನೆಯಿಂದ ತೆರಳಿದ್ದರು. ಆದರೆ ರಸ್ತೆ ಮಧ್ಯೆಯೇ ಹೆರಿಗೆ ನೋವು ಕಾಣಿಸಿಕೊಂಡಿದೆ. ಹಿಂದೆ ಮುಂದೆ ಯೋಚಿಸದ ಅವರು, ಆಸ್ಪತ್ರೆಗೆ ದಾಖಲಾದರು. ಅದಾಗಲೇ ಮಗುವಿಗೆ ಜನ್ಮ ಕೂಡ ನೀಡಿದರು.
ಹಸಿಹಸಿ ಬಾಣಂತಿ, ಹೆರಿಗೆ ಬಳಿಕದ ಸಾಮಾನ್ಯ ನೋವು ಜತೆಗೆ ಈಗತಾನೇ ಹುಟ್ಟಿದ ಕಂದಮ್ಮ… ಎದುರಿಗೆ ಪರೀಕ್ಷೆಯ ಗುರಿ… ತಡ ಮಾಡದ ಕಾಜಲ್‌ ಅವರು ಮನೆಯವರ ಬಳಿ ಮಗು ಬಿಟ್ಟು ಪರೀಕ್ಷೆಗೆ ಹಾಜರಾಗಿ ಪರೀಕ್ಷೆ ಬರೆದು ಬಂದಿದ್ದಾರೆ!
ಕಾಜಲ್ ಬಾಲಾಕೋಟಿಯ ರಾಮ್ ರೂಪ್ ಬಾಲ್ ದೇವ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದು, ಕಳೆದ ವರ್ಷ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಳು. ಇದೀಗ ಮಗುವಿಗೆ ಜನ್ಮ ನೀಡಿ ಕಠಿಣ ಸ್ಥಿತಿಯಲ್ಲಿಯೂ ದ್ವಿತೀಯ ಪಿಯು ಪರೀಕ್ಷೆ ಬರೆದಿರುವುದಕ್ಕೆ ಎಲ್ಲರೂ ಅಭಿನಂದನೆ ಸಲ್ಲಿಸಿದ್ದಾರೆ.
ಕಾಲೇಜಿನ ಕುಸ್ತಿ ಅಖಾಡಾದಲ್ಲಿ ಗುಂಡಿನ ದಾಳಿ- ಐದು ಮಂದಿಯ ಸಾವು; ಹಲವರ ಸ್ಥಿತಿ ಗಂಭೀರ

ಬಂಜಾರ ನಾಯಕಿ, ಟಿಕ್‌ಟಾಕ್‌ ಸ್ಟಾರ್‌ ನಿಗೂಢ ಸಾವು- ಆಡಿಯೋ ಕ್ಲಿಪ್ಪಿಂಗ್‌ನಲ್ಲಿ ಮಹಾರಾಷ್ಟ್ರ ಸಚಿವನ ಹೆಸರು!

ಯಾರ್ರಿ ಕುಟುಂಬ ರಾಜಕಾರಣ ಮಾಡ್ತಿರೋರು? ಪ್ರಧಾನಿಯಾಗಿ 30 ವರ್ಷವಾಗಿದೆ… ರಾಹುಲ್‌ ಕಿಡಿಕಿಡಿ

ಮನೆ ಮನೆಗೆ ಆಹಾರ ವಿತರಿಸಿದ ಮುದ್ದು‌ ಪಾಂಡಾ: ಫೋಟೋ ನೋಡಿ ಖುಷಿಪಟ್ಟರು, ಪೂರ್ತಿ ಓದಿ ಪೆಚ್ಚಾದರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 14 =
Remember me
