ಮುಂಬೈ:ಬಾಲಿವುಡ್‌ ನಟಿ ಪ್ರೀತಿ ಜಿಂಟಾ (46) ಮತ್ತು ಅವರ ಪತಿ ಜಿನ್‌ ಗುಡ್ಡೆಫಾನ್‌ ಅವರು ಅವಳಿ ಮಕ್ಕಳ ಅಪ್ಪ-ಅಮ್ಮನಾಗಿದ್ದಾರೆ. ಈ ಕುರಿತು ಪ್ರೀತಿ ಇನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ನೀಡಿದ್ದು, ತಮ್ಮ ಖುಷಿಯ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.
ಇವರ ಮದುವೆ 2016ರಲ್ಲಿ ನಡೆದಿತ್ತು. ಮದುವೆಯ ಬಳಿಕ ಸಿನಿಮಾದಿಂದ ದೂರವೇ ಇರುವ ಪ್ರೀತಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಕೆಲವು ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ಅಮ್ಮನಾಗಿರುವ ಖುಷಿಯನ್ನು ಹಂಚಿಕೊಂಡಿದ್ದು, ತಮ್ಮ ಪತಿಯ ಜತೆಗಿರುವ ಫೋಟೋ ಶೇರ್ ಮಾಡಿದ್ದಾರೆ.
ಅಂದಹಾಗೆ ಈ ಅವಳಿ-ಜವಳಿ ಮಕ್ಕಳು ಹುಟ್ಟಿರುವುದು ಬಾಡಿಗೆ ತಾಯ್ತತನದ ಮೂಲಕ. ಅಂದರೆ ಪತಿ-ಪತ್ನಿಯ ವೀರ್ಯ ಮತ್ತು ಅಂಡಾಣುಗಳನ್ನು ತೆಗೆದು ಅದನ್ನು ಬೇರೊಬ್ಬ ಮಹಿಳೆಯ ಗರ್ಭದಲ್ಲಿ ಇರಿಸಿ ಆ ಮೂಲಕ ಮಗುವನ್ನು ಪಡೆಯುವ ಪ್ರಕ್ರಿಯೆ ಇದು. ಈ ಪ್ರಕ್ರಿಯೆ ಮೂಲಕ ಈ ದಂಪತಿ ಈಗ ಪಾಲಕರಾಗಿದ್ದಾರೆ.
‘ಇಂದು ನಾನು ನಿಮ್ಮೆಲ್ಲರೊಂದಿಗೆ ಸಿಹಿ ವಿಚಾರವೊಂದನ್ನು ಹಂಚಿಕೊಳ್ಳಲು ಬಯಸುತ್ತಿದ್ದೇನೆ. ನಮ್ಮ ಮನೆಗೆ ಅವಳಿ ಮಕ್ಕಳು ಬಂದಿದ್ದಾರೆ. ಅವರನ್ನು ಸ್ವಾಗತಿಸುತ್ತಿದ್ದೇನೆ. ಅವರ ಹೆಸರು ಜೈ ಜಿಂಟಾ ಗುಡೇನಾಫ್‌ ಮತ್ತು ಜಿಯಾ ಜಿಂಟಾ ಗುಡೇಫಾನ್‌ ಎಂದಿದ್ದಾರೆ. ಇವರನ್ನು ಸ್ವಾಗತಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ. ಇದಕ್ಕಾಗಿ ಶ್ರಮಿಸಿರುವ ವೈದ್ಯರ ತಂಡ ಹಾಗೂ ಬಾಡಿಗೆ ತಾಯಿಯಾಗಲು ಮುಂದೆ ಬಂದ ಮಹಿಳೆಗೆ ಹೃತ್ಪೂರ್ವಕ ಧನ್ಯವಾದ ಎಂದಿದ್ದಾರೆ.


A post shared by Preity G Zinta (@realpz)

VIDEO: ಪತ್ನಿಯ ಅವಮಾನ ಸಹಿಸಲ್ಲ- ಸಿಎಂ ಆಗುವವರೆಗೂ ವಿಧಾನಸಭೆಗೆ ಕಾಲಿಡಲ್ಲ ಎಂದು ಕಣ್ಣೀರು ಹಾಕಿದ ಚಂದ್ರಬಾಬು ನಾಯ್ಡು

VIDEO: ಹಾಡಿಗೆ ಮನಸೋತು ಗಾಯಕಿ ಮುಚ್ಚಿಹೋಗುವಷ್ಟು ಹಣ ಸುರಿದ ಅಭಿಮಾನಿ! ವಿಡಿಯೋ ವೈರಲ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 13 =
Remember me
