ನವದೆಹಲಿ:ಇದೇ 18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಕುತೂಹಲದ ಸಂಗತಿ ಎಂದರೆ ರಾಷ್ಟ್ರಪತಿ ಸ್ಥಾನಕ್ಕೆ ಒಟ್ಟೂ 98 ಮಂದಿ ಅರ್ಜಿ ಸಲ್ಲಿಸಿದ್ದರು. ಆದರೆ ಕೊನೆಗೆ ಉಳಿದದ್ದು ಮಾತ್ರ ಇಬ್ಬರೇ ಇಬ್ಬರು!
ಇದೇಕೆ ಎಂದರೆ, 96 ಮಂದಿಯ ಅರ್ಜಿಯು ತಿರಸ್ಕಾರಗೊಂಡಿವೆ. 26 ಮಂದಿ ನಾಮಪತ್ರ ಭರ್ತಿ ಮಾಡಿದ ಸಂದರ್ಭದಲ್ಲಿಯೇ ತಾಂತ್ರಿಕ ಕಾರಣಗಳಿಂದ ರದ್ದಾಗಿದ್ದರೆ, 70 ಮಂದಿಯ ನಾಮಪತ್ರಗಳನ್ನು ಪರಿಶೀಲನೆ ವೇಳೆ ರಾಷ್ಟ್ರಪತಿ ಸ್ಥಾನಕ್ಕೆ ಅರ್ಹತೆಗಳು ಇವರಲ್ಲಿ ಇರಲಿಲ್ಲ ಎನ್ನಲಾಗಿದೆ. ಸ್ಪರ್ಧಿಸಲು 15,000 ರೂಪಾಯಿ ಠೇವಣಿ ಇಡಬೇಕಿತ್ತು. ಅದನ್ನು ಇಡಲು ಸಾಧ್ಯವಾಗದವರು ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ.
ಈ ಹಿನ್ನೆಲೆಯಲ್ಲಿ ಕೊನೆಗೆ ಉಳಿದದ್ದು ಇಬ್ಬರೇ ಇಬ್ಬರು. ಅವರೆಂದರೆ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಮತ್ತು ಯುಪಿಎ ಅಭ್ಯರ್ಥಿ ಯಶವಂತ್ ಸಿನ್ಹಾ .
ಚುನಾವಣೆಯ ಸಭಾಧ್ಯಕ್ಷರು ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಜೂನ್ 29 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿತ್ತು. ಜುಲೈ 2ರವರೆಗೆ ನಾಮಪತ್ರ ಹಿಂಪಡೆಯಲು ಅವಕಾಶವಿದೆ. ಒಟ್ಟು 98 ಮಂದಿ 115 ಸೆಟ್‌ಗಳ ನಾಮಪತ್ರಗಳನ್ನು ಭರ್ತಿ ಮಾಡಿದ್ದಾರೆ. ಈ ಪೈಕಿ 26 ಮಂದಿ ನಾಮಪತ್ರ ಭರ್ತಿ ಮಾಡಿದ ಸಂದರ್ಭದಲ್ಲಿಯೇ ತಾಂತ್ರಿಕ ಕಾರಣಗಳಿಂದ ರದ್ದಾಯಿತು ಎಂದು ಹೇಳಲಾಗಿದೆ.
ದೆಹಲಿ ಸೇರಿದಂತೆ 17 ರಾಜ್ಯಗಳಿಂದ ನಾಮಪತ್ರಗಳನ್ನು ಭರ್ತಿ ಮಾಡಲಾಗಿದೆ. ಈ ಪೈಕಿ ದೆಹಲಿಯಿಂದ ಗರಿಷ್ಠ 19 ಮಂದಿ ನಾಮಪತ್ರ ಸಲ್ಲಿಸಿದ್ದು, ಉತ್ತರ ಪ್ರದೇಶದ 16 ಮಂದಿ ನಾಮಪತ್ರ ಸಲ್ಲಿಸಿವ ಮೂಲಕ ಎರಡನೇ ಸ್ಥಾನ ಪಡೆದಿದ್ದಾರೆ. ಅದೇ ರೀತಿ ಮಹಾರಾಷ್ಟ್ರದಿಂದ 11 ಮಂದಿ ಹಾಗೂ ತಮಿಳುನಾಡಿನಿಂದ 10 ಮಂದಿ ಅರ್ಜಿ ಸಲ್ಲಿಸಿದ್ದಾರೆ. ದ್ರೌಪದಿ ಮುರ್ಮು ಸೇರಿದಂತೆ 10 ಮಹಿಳೆಯರು ನಾಮಪತ್ರ ಸಲ್ಲಿಸಿದ್ದಾರೆ.
ಸರ್ಕಾರದ ಪತನದ ಬೆನ್ನಲ್ಲೇ ಇ.ಡಿ.ಗೆ ಹೋಗಲು ತಯಾರಾದ ಶಿವಸೇನಾ ನಾಯಕ ರಾವತ್: ಇಂದು ಹಾಜರ್​

ಚಾಕೊಲೇಟ್ ಪ್ರಿಯರಿಗೆ ಶಾಕ್​! ವಿಶ್ವದ ಅತಿದೊಡ್ಡ ಕಾರ್ಖಾನೆಯಲ್ಲಿ ​ಹಾನಿಕಾರಕ ಬ್ಯಾಕ್ಟೀರಿಯಾ ಪತ್ತೆ: ಫ್ಯಾಕ್ಟರಿ ಸ್ಥಗಿತ

ತಮ್ಮ ಫೋಟೋ ತೆಗೆದು ಟ್ವಿಟರ್​ನಲ್ಲಿ ಮಾಜಿ ಸಿಎಂ ತಂದೆಯ ಫೋಟೋ ಹಾಕಿಕೊಂಡ ನೂತನ ಮುಖ್ಯಮಂತ್ರಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
