ಇಂದೋರ್​ (ಮಧ್ಯಪ್ರದೇಶ):ಮಗನಿಗೆ ಎಷ್ಟು ಹುಡುಕಿದರೂ ಹೆಣ್ಣು ಸಿಗಲಿಲ್ಲ ಎನ್ನುವ ಕಾರಣಕ್ಕೆ ಸತ್ಯನಾರಾಯಣ ಪೂಜೆ ಮಾಡಿಸಿದರು. ಆದರೆ ಪೂಜೆ ಮಾಡಿಸಿದ ನಂತರ ಯುವಕ ಅರುಣ್​ ವಿಚಿತ್ರವಾಗಿ ಆಡಲು ಶುರು ಮಾಡಿದ. ಮಾತ್ರವಲ್ಲದೇ ಅವನಿಗೆ ಹೆಣ್ಣು ಕೂಡ ಸಿಗಲಿಲ್ಲ. ಇದರಿಂದ ರೊಚ್ಚಿಗೆದ್ದ ಹುಡುಗ ಹಾಗೂ ಆತನ ತಂದೆ ಪೂಜೆ ಮಾಡಿದ ಪುರೋಹಿತರನ್ನೇ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.
ಪುರೋಹಿತರು ಪೂಜೆ ಮಾಡಿದ್ದು ಸರಿಯಾಗಿಲ್ಲ, ಅವರು ನಡೆಸಿದ ಧಾರ್ಮಿಕ ಕ್ರಿಯೆಗಳು ಸರಿಯಾಗಿಲ್ಲ ಎಂಬ ಶಂಕೆಯಿಂದಾಗಿ ಅವರನ್ನು ಥಳಿಸಲಾಗಿದೆ.
ರಾಜಸ್ಥಾನದ ಕೋಟಾ ನಿವಾಸಿಯಾಗಿರುವ ಅರ್ಚಕ ಕುಂಜ್‌ಬಿಹಾರಿ ಶರ್ಮಾ ಥಳಿತಕ್ಕೆ ಒಳಗಾದವರು. ಅವರು ಮಾತ್ರವಲ್ಲದೇ ಅವರ ಇಬ್ಬರು ಮಕ್ಕಳನ್ನೂ ತಂದೆ-ಮಗ ಥಳಿಸಿದ್ದಾರೆ. ಸದ್ಯ ಅರ್ಚಕ ಮತ್ತು ಮಕ್ಕಳು ಚಂದನನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಹಲ್ಲೆಯಿಂದಾಗಿ ಕುಂಜ್​ಬಿಹಾರಿ ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ದೇಹಕಪೂರ್ತಿ ರಕ್ತಸಿಕ್ತವಾಗಿತ್ತು. ಅದೇ ಸ್ಥಿತಿಯಲ್ಲಿ ಬಂದು ಅವರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅರುಣ್ ಎಂಬ ಯುವಕನ ತಂದೆ ಲಕ್ಷ್ಮೀಕಾಂತ್ ಶರ್ಮಾ ಹಾಗೂ ಕುಟುಂಬಸ್ಥರು ಇಂಥದ್ದೊಂದು ಕೃತ್ಯ ಎಸಗಿರುವುದಾಗಿ ಪೊಲೀಸರು ಹೇಳಿದ್ದಾರೆ. ಥಳಿಸಿದ್ದು ಮಾತ್ರವಲ್ಲದೇ ಅಪ್ಪ-ಮಗ ಸೇರಿ ಅರ್ಚಕರ ಮನೆಗೆ ತೆರಳಿ ಅವರ ಕಿವಿಯನ್ನು ಕಚ್ಚಿ ಕಿವಿಯೋಲೆಯನ್ನು ಹರಿದಿದ್ದಾರೆ! ಸದ್ಯ ಪೊಲೀಸರು ಅಪ್ಪ-ಮಗನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​)
ಕಾಣೆಯಾಗಿದ್ದ ಬಿಜೆಪಿ ಕಾರ್ಯಕರ್ತನ ಶವ ಸ್ನೇಹಿತನ ಮನೆಯ ನೆಲದೊಳಗೆ! ದೃಶ್ಯಂ ಸಿನಿಮಾದಂತೆ ನಡೆದ ಕೊಲೆ!

ರಶ್ಮಿಕಾ ಸ್ವಯಂವರದಲ್ಲಿ ಈ ಮೂವರು ಇರ್ಬೇಕಂತೆ! ಪತ್ನಿಯರ ಕಥೆಯೇನಮ್ಮಾ ಎಂದು ಪ್ರಶ್ನಿಸಿದ ನೆಟ್ಟಿಗರು

ಡಿಜಿಪಿಯ ಆದೇಶವನ್ನೇ ಉಲ್ಲಂಘಿಸಿ ಪಿಎಫ್​ಐ ಮೇಲಿನ 1600 ಕೇಸ್​ ವಾಪಸ್​ ಮಾಡಿದ್ದ ಸಿದ್ದರಾಮಯ್ಯ?

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:nineteen + 19 =
Remember me
