ಮ್ಯಾಡ್ರಿಡ್‌ (ಸ್ಪೇನ್‌):ಸತ್ತುಹೋದ ಎಂದು ವೈದ್ಯರು ಹೇಳಿದರೂ ಎಷ್ಟೋ ವ್ಯಕ್ತಿಗಳು ಬದುಕಿರುವ ಕುರಿತಾಗಿ ಇತ್ತೀಚಿಗೆ ಅನೇಕ ಘಟನೆಗಳು ನಡೆಯುತ್ತಿವೆ. ಚಿತಾಗಾರಕ್ಕೆ ಒಯ್ಯುವ ವೇಳೆ ಉಸಿರಾಡುವುದು, ಇಲ್ಲವೇ ಕೈ ಕಾಲುಗಳನ್ನು ಅಲ್ಲಾಡಿಸುವುದು… ಹೀಗೆ ಜೀವಂತ ಬಂದಿರುವ ಘಟನೆಗಳು ನಡೆಯುತ್ತಲೇ ಇವೆ.
ಅಂಥದ್ದೇ ಒಂದು ಘಟನೆ ಇದೀಗ ಸ್ಪೇನ್‌ನಿಂದ ವರದಿಯಾಗಿದೆ. ಸ್ಪೇನ್‌ನ ವಿಲ್ಲಾಬೋನಾದಲ್ಲಿರುವ ಆಸ್ಟುರಿಯಸ್ ಸೆಂಟ್ರಲ್ ಪೆನಿಟೆನ್ಷಿಯರಿಯಲ್ಲಿ ಗೋಂಜಲೊ ಮಾಟೊಯಾ ಜಿಮೆನೆಜ್ ಎಂಬ ಕೈದಿ ಬಿದ್ದುಕೊಂಡಿದ್ದ. ಆತನನ್ನು ಆಸ್ಪತ್ರೆಗೆ ಸಾಗಿಸಿದ್ದಾಗ, ಮೂವರು ತಜ್ಞ ವೈದ್ಯರು ಈತ ಸತ್ತುಹೋಗಿರುವುದಾಗಿ ಘೋಷಿಸಿದ್ದರು. ಜೈಲಿನ ಆವರಣದಲ್ಲಿ ಈ ಘಟನೆ ನಡೆದಿತ್ತು.
ಜೈಲಿನಲ್ಲಿರುವ ವ್ಯಕ್ತಿ ಸಾವನ್ನಪ್ಪಿರುವುದರಿಂದ ಕೆಲವು ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಕೋರ್ಟ್‌ ಆದೇಶದ ಮೇರೆಗೆ ವಿಧಿವಿಜ್ಞಾನ ವೈದ್ಯರನ್ನು ಕರೆಸಲಾಗಿತ್ತು. ಅವರು ಸಹ ಈತನ ಸಾವನ್ನು ದೃಢ ಪಡಿಸಿದ್ದರು. ಆತ ಸತ್ತಿರುವುದಾಗಿ ಮನೆಯವರಿಗೂ ವಿಷಯ ತಿಳಿಸಲಾಗಿತ್ತು.
ಸಾವಿನ ಬಗ್ಗೆ ತಿಳಿದುಕೊಳ್ಳಲು ಈತನನ್ನು ಮರಣೋತ್ತರ ಪರೀಕ್ಷೆಗೆ ಕರೆದುಕೊಂಡು ಒಯ್ಯಲಾಗುತ್ತಿತ್ತು. ಪರೀಕ್ಷೆಗಾಗಿ ದೇಹ ತುಂಡರಿಸಲು ಎಲ್ಲಾ ಸಿದ್ಧತೆ ನಡೆಸಲಾಗಿತ್ತು. ಆದರೆ ಅದಕ್ಕೂ ಸ್ವಲ್ಪ ಮುಂಚೆಯೇ ಗೋಂಜಲೊ ದೇಹದಿಂದ ಗೊರಕೆ ಶಬ್ದ ಕೇಳಿಬಂದಿದ್ದು, ವೈದ್ಯರು ಬೆಚ್ಚಿಬಿದ್ದಿದ್ದಾರೆ.
ಆರಂಭದಲ್ಲಿ ವೈದ್ಯರು ಹಾಗೂ ಪೋಸ್ಟ್‌ಮಾರ್ಟಮ್‌ ಸ್ಥಳದಲ್ಲಿ ಇದ್ದ ಸಿಬ್ಬಂದಿ ಇದನ್ನು ನಂಬಲಿಲ್ಲ. ನಂತರ ಸೂಕ್ಷ್ಮವಾಗಿ ಗಮನಿಸಿದಾಗ ಆತನ ದೇಹದಲ್ಲಿ ಚಲನೆ ಇರುವುದು ಕಂಡುಬಂತು. ಗೊರಕೆ ಹೊಡೆಯುತ್ತಿದ್ದುದು ಕೂಡ ಅದೇ ದೇಹದಿಂದ ಬರುತ್ತಿರುವುದು ತಿಳಿಯಿತು. ಕೂಡಲೇ ಗೋಂಜಲೊನನ್ನು ಓವಿಡೊದಲ್ಲಿನ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಪರೀಕ್ಷೆ ಮಾಡಿದಾಗ ಆತ ಬದುಕಿರುವುದು ತಿಳಿದುಬಂದಿದೆ.
ಈತನಿಗೆ ಸೈನೋಸಿಸ್‌ ಸಮಸ್ಯೆಯಿತ್ತು. ಆಮ್ಲಜನಕದ ಕೊರತೆಯಿಂದಾಗಿ ಚರ್ಮದ ಬಣ್ಣವು ಬದಲಾಗಿತ್ತು. ಈ ಹಿನ್ನೆಲೆಯಲ್ಲಿ ಆತ ಮೃತಪಟ್ಟಿರುವಂತೆ ಕಂಡಿತ್ತು ಎಂದು ಈಗ ವೈದ್ಯರು ವರದಿಯನ್ನು ನೀಡಿದ್ದಾರೆ.
‌ಎಲ್ಲಿದ್ದೀರಾ ಕಾಮನ್‌ಮ್ಯಾನ್‌ ಸಿಎಂ ಸಾರ್‌.. ನಿಮ್ಮ ಪಕ್ಷದ ಶಾಸಕನಿಂದ ನನಗೆ ಮಗುವಾಗಿದೆ, ನ್ಯಾಯ ಕೊಡ್ಸಿ….

ಕಾರು, ಲಾರಿ ನಡುವೆ ಭೀಕರ ಅಪಘಾತ: ಬಳ್ಳಾರಿಯಲ್ಲಿ ಮದುವೆ ಮುಗಿಸಿ ಹೊರಟ 9 ಮಂದಿ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 11 =
Remember me
