ಮುಂಬೈ:ಬಾಲಿವುಡ್​ ನಟಿ ಪ್ರಿಯಾಂಕಾ ಛೋಪ್ರಾ ಅವರ ಇನ್​ಸ್ಟಾಗ್ರಾಂ ಖಾತೆಯಲ್ಲಿ  ಕೆಲವು ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದು, ಅದನ್ನು ನೋಡಿ ಅಭಿಮಾನಿಗಳು ಕಂಗಾಲ್​ ಆಗಿದ್ದಾರೆ. ಅದಕ್ಕೆ ಕಾರಣ, ಅವರ ಮುಖದ ತುಂಬಾ ಗಾಯಗಳಾಗಿವೆ.
ಇದನ್ನು ನೋಡಿದ ಹಲವಾರು ಮಂದಿ ಹಲವಾರು ರೀತಿಯಲ್ಲಿ ಕಮೆಂಟ್​ ಮಾಡುತ್ತಿದ್ದು, ಯೋಗಕ್ಷೇಮ ವಿಚಾರಿಸುತ್ತಿದ್ದಾರೆ. ಅಮೆರಿಕದ ‘ಸಿಟಾಡೆಲ್‌’ ಟಿವಿ ಶೋನ ಚಿತ್ರೀಕರಣದಲ್ಲಿ ತೊಡಗಿರುವ ಪ್ರಿಯಾಂಕಾ ಅವರ ಈ ಅವತಾರ ನೋಡಿ ಅಭಿಮಾನಿಗಳು ಬೆಚ್ಚಿಬಿದ್ದಿದ್ದಾರೆ.
ಈ ಫೋಟೋ ಬಗ್ಗೆ ಪ್ರಿಯಾಂಕಾ ಯಾವುದೇ ಪ್ರತಿಕ್ರಿಯೆ ನೀಡದಿದ್ದರೂ ಇದು ಅಸಲಿ ಫೋಟೋವಲ್ಲ, ಬದಲಿಗೆ ಮೇಕಪ್​ ಎಂದು ಹಲವರು ಹೇಳುತ್ತಿದ್ದಾರೆ. ಏಕೆಂದರೆ ಈ ಹಿಂದೆ ಕೂಡ ಪ್ರಿಯಾಂಕಾ ಇದೇ ರೀತಿ ಫೋಟೋ ಶೇರ್​ ಮಾಡಿಕೊಂಡಿದ್ದರು. ಆಗಲೂ ಸಿಟಾಡೆಲ್​ ಚಿತ್ರೀಕರಣದ ಸಂದರ್ಭವೇ ಆಗಿತ್ತು. ಆದ್ದರಿಂದ ಈ ಚಿತ್ರದಲ್ಲಿ ಈಕೆಯ ಫೈಟಿಂಗ್​ ಸೀನ್​ ಇರುವುದರಿಂದ ಮುಖದ ಮೇಲೆ ಗಾಯಗಳಾಗಿರುವಂತೆ ಮೇಕಪ್​ ಮಾಡಲಾಗಿದೆ ಎನ್ನಲಾಗುತ್ತಿದೆ. ಇಷ್ಟಾದರೂ ಪ್ರಿಯಾಂಕಾ ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದು ಅಭಿಮಾನಿಗಳಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ.
ಕಳೆದ ಜನವರಿ 15ರಂದು ಪ್ರಿಯಾಂಕಾ ಛೋಪ್ರಾ ಮತ್ತು ನಿಕ್​ ದಂಪತಿಗೆ ಹೆಣ್ಣುಮಗು ಜನಿಸಿದೆ. ಮಗಳಿಗೆ ಈಗ ಮೂರು ತಿಂಗಳಾಗಿದ್ದು, ಪ್ರಿಯಾಂಕಾ ಚಿತ್ರೀಕರಣದಲ್ಲಿ ಬಿಝಿಯಾಗಿದ್ದಾರೆ.
A post shared by Priyanka (@priyankachopra)

ರಾಷ್ಟ್ರಗೀತೆ ಕಡ್ಡಾಯಗೊಳಿಸಿದ ಒಂದು ವಾರದಲ್ಲೇ ಮದರಸಾಗಳಿಗೆ ಬಿಗ್​ ಶಾಕ್​ ಕೊಟ್ಟ ಯೋಗಿ ಸರ್ಕಾರ

ಅವ್ರು ಸಮಸ್ಯೆ ಚರ್ಚಿಸಿದ್ರೆ, ಇವ್ರು ಚಿಕನ್​ ಸ್ಯಾಂಡ್​ವಿಚ್​ ನೋಡ್ತಿದ್ರು: ಕಾಂಗ್ರೆಸ್​ಗೆ ಭಾರಿ ಮುಜುಗರ ತಂದ ಹಾರ್ದಿಕ್​ ರಾಜೀನಾಮೆ ಪತ್ರ!

ಅರ್ಜುನ್​ weds​ ಮಲೈಕಾ: ಆರು ವರ್ಷಗಳ ಡೇಟಿಂಗ್​ ಅಂತ್ಯ? ವಯಸ್ಸಲ್ಲೇನಿದೆ ಬಿಡಿ ಎಂದ ಹಿರಿಯ ನಟಿ!

ಮದುವೆ ಗಿಫ್ಟ್​ ತೆರೆದ ವಧು-ವರರು ಆಸ್ಪತ್ರೆಗೆ ದಾಖಲು! ಅಕ್ಕನ ಬಾಯ್​ಫ್ರೆಂಡ್​ ತಂದಿಟ್ಟ ಮಹಾ ಸಂಕಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 4 =
Remember me
