ಮುಂಬೈ:ಶಿವಸೇನೆಯ ಮುಖಂಡ ಏಕನಾಥ್​ ಶಿಂಧೆ ಕೊಟ್ಟಿರುವ ಭರ್ಜರಿ ಏಟಿಗೆ ಮಹಾರಾಷ್ಟ್ರ ಸರ್ಕಾರ ಅಲ್ಲೋಲ ಕಲ್ಲೋಲವಾಗಿದೆ. ಯಾವುದೇ ಕ್ಷಣದಲ್ಲಿಯೂ ಸರ್ಕಾರ ಪತನವಾಗುವ ಸಾಧ್ಯತೆ ಇದೆ. ಇನ್ನೊಂದೆಡೆ, ರಾಹುಲ್​ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೆ ಕರೆದಿರುವುದನ್ನು ಪ್ರಶ್ನಿಸಿ ದೇಶದ ಕಾಂಗ್ರೆಸ್ ಮುಖಂಡರೆಲ್ಲಾ ಭಾರಿ ಪ್ರತಿಭಟನೆ ಮುಂದುವರೆಸಿದ್ದಾರೆ. ಇದರ ನಡುವೆಯೇ ಮಹಾರಾಷ್ಟ್ರದ ಮೈತ್ರಿಕೂಟದ ಭಾಗವಾಗಿರುವ ಪ್ರಿಯಾಂಕಾ ಗಾಂಧಿ ಮಾಲ್ಡೀವ್ಸ್​ನತ್ತ ಪ್ರಯಾಣ ಬೆಳೆಸಿದ್ದು, ಇದೀಗ ಭಾರಿ ಟೀಕೆಗೆ ಗುರಿಯಾಗಿದೆ.
ಮಹಾರಾಷ್ಟ್ರದಲ್ಲಿ ಸದ್ಯ ಇರುವುದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ-ಕಾಂಗ್ರೆಸ್-ಎನ್​ಸಿಪಿ ಸರ್ಕಾರ. ಈ ಹಿನ್ನೆಲೆಯಲ್ಲಿ ಸರ್ಕಾರ ಇಂಥ ಬಿಕ್ಕಟ್ಟಿನ ಸ್ಥಿತಿಯಲ್ಲಿ ಇರುವಾಗ ಈ ರೀತಿ ವಿದೇಶಕ್ಕೆ ಹೊರಟಿರುವುದು ಏಕೆ ಎಂಬ ಬಗ್ಗೆ ಚರ್ಚೆ ಶುರುವಾಗಿದೆ.
ಮುಂಬೈನಲ್ಲಿ ಕೆಲವು ಗಂಟೆ ಇದ್ದರೂ ಯಾವುದೇ ರಾಜಕೀಯ ನಾಯಕರನ್ನು ಭೇಟಿ ಮಾಡದೆಯೇ ಮಾಲ್ಡೀವ್ಸ್​ ವಿಮಾನ ಏರಿದ್ದಾರೆ ಎಂದು ಕೆಲವು ವರದಿಗಳು ಹೇಳಿದ್ದರೆ, ನಾಯಕರನ್ನು ಭೇಟಿ ಮಾಡಿ ಹೋಗಿದ್ದಾರೆ ಎಂದು ಕಾಂಗ್ರೆಸ್ಸಿಗರು ಹೇಳುತ್ತಿದ್ದಾರೆ.
ಅದೇನೇ ಇದ್ದರೂ ಇಷ್ಟು ದಿನ ರಾಹುಲ್​ ಗಾಂಧಿಯವರ ವಿದೇಶ ಪ್ರಯಾಣದ ಬಗ್ಗೆ ಕೇಳಿಬರುತ್ತಿದ್ದ ಟೀಕೆಗಳು ಈಗ ಪ್ರಿಯಾಂಕಾನತ್ತ ತಿರುಗಿದೆ. ಜಾರಿ ನಿರ್ದೇಶನಾಲಯವು ರಾಹುಲ್​ ಗಾಂಧಿ, ಸೋನಿಯಾ ಗಾಂಧಿಯವರಿಗೆ ನೋಟಿಸ್​ ನೀಡಿರುವುದಕ್ಕೆ ಎಲ್ಲಾ ಕಾಂಗ್ರೆಸ್​ ಮುಖಂಡರು ಬೀದಿಗಿಳಿದಿದ್ದರೆ, ಇತ್ತ ಪ್ರಿಯಾಂಕಾ ಮಾತ್ರ ಈ ಹೊತ್ತಿನಲ್ಲಿ ವಿದೇಶಕ್ಕೆ ತೆರಳಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ಮುಖಂಡ ಅಮಿತ್​ ಮಾಳ್ವಿಯಾ ಹೇಳಿದ್ದಾರೆ.
ಮಾಲ್ಡೀವ್ಸ್​ನಲ್ಲಿರುವ ತಮ್ಮ ಪುತ್ರಿಯನ್ನು ಪ್ರಿಯಾಂಕಾ ನೋಡಲು ಹೋಗುತ್ತಿದ್ದಾರೆ ಎಂದು ಇನ್ನೊಂದು ಮೂಲಗಳು ಹೇಳಿವೆ. ಪ್ರಿಯಾಂಕಾ ಪುತ್ರಿ 20 ವರ್ಷದವಳಾಗಿದ್ದು, ಮಾಲ್ಡೀವ್ಸ್​ನಲ್ಲಿ ಡೈವಿಂಡ್​ ಸ್ಕೂಲ್​ನಲ್ಲಿ ತರಬೇತಿ ನೀಡುತ್ತಿದ್ದಾಳೆ. ಅವಳನ್ನು ನೋಡಲು ಪ್ರಿಯಾಂಕಾ ಹೋಗಿದ್ದಾರೆ ಎನ್ನಲಾಗಿದೆ. ಅವರು ಜೂನ್​ 30ರಂದು ವಾಪಸ್ ಬರುತ್ತಾರೆ ಎನ್ನಲಾಗಿದೆ.
ಠಾಕ್ರೆ v/s ಶಿಂಧೆ- ಮತ್ತಷ್ಟು ‘ಮಹಾ’ ಕಗ್ಗಂಟು: ಶಾಸಕರಾಯ್ತು, ಈಗ ಸಂಸದರೂ ಬಂಡಾಯ

ರಾಜೀನಾಮೆ ಕೊಡಲು ಸಿದ್ಧ, ಆದರೆ… ಫೇಸ್​ಬುಕ್​ ಲೈವ್​ನಲ್ಲಿ ಸಿಎಂ ಉದ್ಧವ್​ ಠಾಕ್ರೆ ಹೇಳಿದ್ದೇನು ನೋಡಿ…

ಶಿಂಧೆ ಬಣದಿಂದ ಶಾಸಕ ದೇಶ್​ಮುಖ್​ ಅಪಹರಣಕ್ಕೆ ಟ್ವಿಸ್ಟ್​: ಫೋಟೋ ಬಿಡುಗಡೆ ಮಾಡಿದ ರೆಬೆಲ್​ ಶಾಸಕರು!

‘ಮಹಾ’ ರೆಬೆಲ್​ಗಳ ವಿಷ್ಯವೇ ನಂಗೆ ಗೊತ್ತಿಲ್ಲ, ಲಕ್ಷ್ಮಿ ತಾನಾಗೇ ಬಂದ್ರೆ ಬೇಡ ಅನ್ನೋಕೆ ಆಗತ್ತಾ? ಎಂದ ಅಸ್ಸಾಂ ಸಿಎಂ

ಇ.ಡಿಯಲ್ಲಿ 50 ಗಂಟೆ: ನನ್ನ ನೋಡಿ ಅಧಿಕಾರಿಗಳೇ ಬೆರಗಾದ್ರು, ಒಳಗೆ ಹೇಗಿತ್ತು ಗೊತ್ತಾ ಎಂದು ಬಣ್ಣಿಸಿದ ರಾಹುಲ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 14 =
Remember me
