ಲಖನೌ:ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರ ಹೆಸರಿನಲ್ಲಿ ದೆಹಲಿಯಲ್ಲಿ ನಡೆಸಿದ್ದ ಹಿಂಸಾಚಾರದಲ್ಲಿ ಟ್ರ್ಯಾಕ್ಟರ್​ ಪಲ್ಪಿ ಹೊಡೆದು ಮೃತಪಟ್ಟ ರೈತನ ಕುಟುಂಬದ ಸದಸ್ಯರನ್ನು ಭೇಟಿಯಾಗಲು ಕಾಂಗ್ರೆಸ್​ ಮುಖಂಡೆ ಪ್ರಿಯಾಂಕಾ ಗಾಂಧಿ ತೆರಳಿದ್ದರು.
ಈ ಸಂದರ್ಭದಲ್ಲಿ ಅವರು ಪ್ರಯಾಣಿಸುತ್ತಿದ್ದ ವೇಳೆ ಭದ್ರತಾ ವಾಹನಗಳ ಮಧ್ಯೆ ಢಿಕ್ಕಿಯಾಗಿ ಕೆಲಕಾಲ ಭಾರಿ ಆತಂಕದ ವಾತಾವರಣ ನಿರ್ಮಾಣವಾಗಿರುವ ಘಟನೆ ನಡೆದಿದೆ. ಉತ್ತರ ಪ್ರದೇಶದ ಹಾಪುರ್​ದಲ್ಲಿ ಈ ಘಟನೆ ಸಂಭವಿಸಿದೆ.
ಭದ್ರತಾ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ಹೇಳಿವೆ. ಕೆನಡಾದಿಂದ ದೆಹಲಿಗೆ ಬಂದಿದ್ದ ನವನೀತ್​ ಎಂಬ ರೈತ ದೆಹಲಿಯಲ್ಲಿ ನಡೆದ ಹಿಂಸಾಚಾರದ ವೇಳೆ ಮೃತಪಟ್ಟಿದ್ದರು.ಟ್ರ್ಯಾಕ್ಟರ್​ನಿಂದ ಬ್ಯಾರಿಕೇಡ್​ ಒಳಗೆ ನುಗ್ಗಿಸುವ ಸಂದರ್ಭದಲ್ಲಿ ಟ್ರ್ಯಾಕ್ಟರ್​ ಪಲ್ಟಿಯಾಗಿ ಅವರು ಮೃತಪಟ್ಟಿದ್ದು, ಇದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಪ್ರಿಯಾಂಕಾ ಗಾಂಧಿ ತೆರಳಿದ್ದರು. ಅವರು ಪ್ರಯಾಣಿಸುತ್ತಿದ್ದ ಕಾರಿನ ಹಿಂದೆ ಮತ್ತು ಮುಂದೆ ಭದ್ರತಾ ಸಿಬ್ಬಂದಿ ವಾಹನವಿತ್ತು. ಅವು ಪರಸ್ಪರ ಢಿಕ್ಕಿಯಾಗಿ ಘಟನೆ ಸಂಭವಿಸಿದೆ. ಘಟನೆಗೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿ ಹೊರಬರಬೇಕಿದೆ.
ಏರ್‌ಟೆಲ್‌ಗೆ ಕನ್ನ! ಲಕ್ಷಾಂತರ ಮಂದಿಯ ಖಾಸಗಿ ಮಾಹಿತಿ ಸೋರಿಕೆ- ಗ್ರಾಹಕರ ‘ಜಾತಕ’ ಹ್ಯಾಕರ್ಸ್‌ ಕೈಯಲ್ಲಿ?

‘ಎಂ’ ಅಕ್ಷರದವರನ್ನು ಟೀಕಿಸೋ ಭರದಲ್ಲಿ ಕಾಲ ಮೇಲೆ ಚಪ್ಪಡಿ ಹಾಕಿಕೊಂಡ ರಾಹುಲ್‌ಗಾಂಧಿ!

ಸೆಕ್ಸ್‌ಗೆ ಒಪ್ಪಿಲ್ಲ ಎಂದು ಮೂರು ಮಕ್ಕಳ ತಾಯಿಗೆ ಆ್ಯಸಿಡ್‌ ಹಾಕಿ ಚಾಕುವಿನಿಂದ ಇರಿದ ಕಿರಾತಕ!

ಪತ್ನಿ, ಪ್ರೇಮಿ ಹಾಗೂ ಶವ…! ಪತಿಯ ಮೃತದೇಹದೊಂದಿಗೆ ಆ ಹತ್ತು ದಿನಗಳು…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 + fourteen =
Remember me
