ಕಾನ್ಪುರ:ಕರೊನಾ ಆಘಾತದ ನಡುವೆಯೇ ಇದೀಗ ರೂಪಾಂತರಿ ಒಮಿಕ್ರಾನ್‌ ಎಲ್ಲೆಡೆ ಭಯದ ವಾತಾವರಣ ಸೃಷ್ಟಿಸಿದೆ. ಕರೊನಾ ಭೀತಿಯಿಂದ ಇದಾಗಲೇ ಕೆಲವರು ತಮ್ಮ ಪ್ರಾಣ ಕಳೆದುಕೊಂಡಿರುವುದು ವರದಿಯಾಗಿರುವ ನಡುವೆಯೇ ಭಯಾನಕ ಘಟನೆಯಿಂದ ಉತ್ತರ ಪ್ರದೇಶದ ಕಾನ್ಪುರದ ಕಲ್ಯಾಣಪುರ ಪ್ರದೇಶದಲ್ಲಿ ನಡೆದಿದೆ.
ಕಾನ್ಪುರದ ವಿಧಿವಿಜ್ಞಾನ ಪ್ರಯೋಗಾಲಯದ ಪ್ರೊಫೆಸರ್‌ ಹಾಗೂ ವೈದ್ಯರಾಗಿರುವ ಇವರು, ಒಮಿಕ್ರಾನ್‌ ಭೀತಿಯಿಂದ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಂದು ತಾನು ಪರಾರಿಯಾಗಿದ್ದಾನೆ! ನಗರದ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಕೆಲಸ ಮಾಡುತ್ತಿರುವ ಈತ ಇಂಥದ್ದೊಂದು ಕೃತ್ಯ ಎಸಗಿದ್ದಾನೆ.
ಕೃತ್ಯಕ್ಕೂ ಮುನ್ನ ತನ್ನ ಸಹೋದನಿಗೆ ವಾಟ್ಸ್‌ಆ್ಯಪ್‌ ಸಂದೇಶ ಕಳುಹಿಸಿದ್ದು, ‘ಕರೊನಾದಿಂದಾಗಿ ಮೃತ ದೇಹಗಳನ್ನು ನೋಡಿ ನೋಡಿ ಬೇಸರಗೊಂಡಿದ್ದೇನೆ. ಇನ್ನು ಒಮಿಕ್ರಾನ್‌ ಬಂದು ಸಾವು ನಿಶ್ಚಿತ. ಇಂಥ ಸಾವು ನೋಡುವ ಬದಲು ಎಲ್ಲರನ್ನೂ ವಿಮೋಚನೆಗೊಳಿಸುತ್ತಿದ್ದೇನೆ’ ಎಂದು ಸಂದೇಶ ಕಳುಹಿಸಿದ್ದ. ಇದರ ಅರ್ಥ ಏನು ಎಂದು ತಿಳಿದುಕೊಳ್ಳುವ ಮೊದಲೇ ಮೂರು ಹೆಣಗಳು ಉರುಳಿ ಹೋಗಿವೆ.
ಮೊದಲಿಗೆ ಈಗ ತನ್ನ ಪತ್ನಿಯ ಕತ್ತು ಹಿಸುಕಿ ನಂತರ ತನ್ನ ಮಗ ಮತ್ತು ಮಗಳ ತಲೆಯನ್ನು ಸುತ್ತಿಗೆಯಿಂದ ಹೊಡೆದು ಕೊಂದಿದ್ದಾನೆ. ನಂತರ ತಾನು ಪರಾರಿಯಾಗಿದ್ದಾನೆ. ವಾಟ್ಸ್‌ಆ್ಯಪ್‌ ಸಂದೇಶ ನೋಡಿ ಫ್ಲ್ಯಾಟ್‌ಗೆ ಸಹೋದರ ಬರುವಷ್ಟರಲ್ಲಿ ಈ ಘಟನೆ ನಡೆದಿದ್ದು, ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಪ್ರೊಫೆಸರ್‌ ಕರೊನಾ ಆರಂಭದಿಂದಲೂ ತೀವ್ರ ಖಿನ್ನತೆಯಿಂದ ಬಳಲುತ್ತಿದ್ದು, ಚಿಕಿತ್ಸೆಯನ್ನೂ ಪಡೆಯುತ್ತಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಬಾಲಿವುಡ್‌ನಲ್ಲಿ ನಟ ಶಿವರಾಮ್‌ ದಾಖಲೆ: ಮೂವರು ಸೂಪರ್‌ಸ್ಟಾರ್‌ಗಳ ಭಾರತದ ಏಕೈಕ ಸಿನಿಮಾ ಕೊಟ್ಟವರು ಇವರೇ!

ಪ್ರಧಾನಿ ರ‍್ಯಾಲಿಗೆ ತೆರಳುತ್ತಿದ್ದ ಬಸ್‌- ಕಾರಿನ ನಡುವೆ ಭೀಕರ ಅಪಘಾತ: ಒಂದೇ ಕುಟುಂಬದ ಮೂವರ ದುರ್ಮರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + eighteen =
Remember me
