ಬರ್ಮಿಂಗ್‌ಹ್ಯಾಮ್‌ (ಲಂಡನ್‌):ಪ್ರಪೋಸ್‌ ಮಾಡುವ ವೇಳೆ ಇಂಗ್ಲೆಂಡ್‌ನ ನದಿಯೊಂದಕ್ಕೆ ಬಿದ್ದ ಭಾರತ ಮೂಲದ ಜೋಡಿಯ ವಜ್ರದುಂಗರವೊಂದು ವಾಪಸ್‌ ಸಿಕ್ಕಿರುವ ರೋಚಕ ಘಟನೆ ಇದು.
ವಿಕ್ಕಿ ಪಟೇಲ್‌ ಮತ್ತು ರೆಬಕಾ ಚೋಕ್ರಿಯಾ ಜೋಡಿಯ ಕಥೆ ಇದು. ವಿಕ್ಕಿ ರೆಬಕಾ ಅವರನ್ನು ವಜ್ರದುಂಗರ ಕೊಟ್ಟು ಪ್ರಪೋಸ್‌ ಮಾಡಲು ಆಯ್ದುಕೊಂಡದ್ದು ಇಂಗ್ಲೆಂಡ್‌ನ ಅತಿ ದೊಡ್ಡ ನದಿಯಾದ ಬರ್ಮಿಂಗ್​ಹ್ಯಾಮ್ ವಿಂಡರ್​ಮಿಯರ್ ನದಿಯ ಬಳಿ.
ಇದಕ್ಕಾಗಿ ವಿಕ್ಕಿ ರೆಬೆಕ್ಕಾ ಅವರನ್ನು ಕರೆದುಕೊಂಡು ಅಲ್ಲಿಗೆ ಹೋಗಿದ್ದಾರೆ. ಪ್ರಪೋಸ್‌ ಮಾಡಲು ಉಂಗುರವನ್ನು ಕೊಟ್ಟು ಫೋಟೋ ತೆಗೆದುಕೊಳ್ಳುವಾಗ ಉಂಗುರ ಜಾರಿ ನದಿಯೊಳಕ್ಕೆ ಬಿದ್ದಿದೆ. ಅಷ್ಟು ಬೃಹದಾಕಾರವಾಗಿರುವ ನದಿಯಿಂದ ಇನ್ನು ಉಂಗುರ ಸಿಗುವುದು ಕಷ್ಟವೇ ಎಂದು ಅದರ ಆಸೆಯನ್ನು ಬಿಟ್ಟ ದಂಪತಿ ಸ್ಥಳದಿಂದ ನಿರಾಸೆಗೊಂಡು ವಾಪಸಾಗಿದ್ದರು. ಎಷ್ಟೇ ಪ್ರಯತ್ನ ಮಾಡಿದರೂ ಸಿಕ್ಕಿರಲಿಲ್ಲ.
ನಂತರ ಈ ವಿಷಯವನ್ನು ಅವರು ಹಲವರಲ್ಲಿ ತಿಳಿಸಿದರು. ಅವರ ಅದೃಷ್ಟಕ್ಕೆ ಖ್ಯಾತ ಡೈವರ್‌ ಹಾಸ್ಕಿಂಗ್‌ಗೆ ಈ ವಿಷಯ ತಿಳಿದಿದೆ. ಅವರು ತಮ್ಮಿಂದ ಆಗುವ ಸಹಾಯ ಮಾಡುವುದಾಗಿ ಹೇಳಿದರು. ನಂತರ ನೀರಿನಲ್ಲಿ ಧುಮುಕಿ ಎಲ್ಲೆಡೆ ಹುಡುಕಿದಾಗ ಉಂಗುರ ಸಿಕ್ಕಿದೆ. ಇದಕ್ಕಾಗಿ ಅವರು ತೆಗೆದಕೊಂಡ ಅವಧಿ 20 ನಿಮಿಷ ಮಾತ್ರ. ಅಂತೂ ಉಂಗುರ ಸಿಕ್ಕ ಖುಷಿಯಲ್ಲಿ ಈ ಜೋಡಿ ಇದೆ.
VIDEO: ಗಂಡ- ಹೆಂಡಿರ ಜಗಳ ಬಾಲ್ಕನಿ ಗ್ರಿಲ್‌ ಸಹಿತ ದೊಪ್ಪನೆ ಕೆಳಗೆ ಬೀಳುವತನಕ!

ಗಂಡ ಇರಲ್ಲ, ಮಜ ಮಾಡೋಣ ಎಂಬ ಪತ್ನಿಯ ಮೆಸೇಜ್‌ ನೋಡಿ ಗರಬಡಿದಂತಾಗಿದೆ, ಏನು ಮಾಡಲಿ ನಾನು?

ವಧುವಿನ ಕಾಲಿಗೆ ಬಿದ್ದ ವರ: ಹುಬ್ಬೇರಿಸಿದವರ ಕಣ್ಣಲ್ಲಿ ಆನಂದಬಾಷ್ಪ… ನಿನ್ನಂಥ ಪತಿಯೇ ಎಲ್ಲರಿಗೂ ಸಿಗಲಪ್ಪ ಎಂದು ಆಶೀರ್ವಾದ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eleven − eight =
Remember me
