ಲಖನೌ:ತಾಯಿ ವೇಶ್ಯಾವಾಟಿಕೆ ಮಾಡುತ್ತಿದ್ದರೆ, ಆಕೆಯ ಇಬ್ಬರು ಗಂಡಮಕ್ಕಳು ದಲ್ಲಾಳಿಗಳಾಗಿ ಕೆಲಸ ಮಾಡುತ್ತಿದ್ದರು. ಬೇರೆ ಬೇರೆಕಡೆಗಳಿಂದ ಹೆಣ್ಣಮಕ್ಕಳನ್ನು ಕರೆತಂದು ತಾಯಿಗೆ ಒದಗಿಸುತ್ತಿದ್ದರು. ಬೀದಿಬದಿಯಲ್ಲಿಯೇ ವೇಶ್ಯಾವಾಟಿಕೆ ನಡೆಸುತ್ತಿದ್ದ ಲಖನೌನ ತಾಯಿ-ಮಕ್ಕಳನ್ನು ಪೊಲೀಸರು ಬಂಧಿಸಿದ್ದಾರೆ.
ಕೋತಾವಾಲಿ ಪ್ರದೇಶದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸಲಾಗುತ್ತಿತ್ತು. ಸರಗನಾ ಎಂಬ ಮಹಿಳೆ ಹಾಗೂ ಈಕೆಗೆ ಇಬ್ಬರು ಗಂಡುಮಕ್ಕಳು ಈ ದಂಧೆಯಲ್ಲಿ ತೊಡಗಿಸಿಕೊಂಡಿದ್ದರು.
ಸರಗನಾಳ ಮಕ್ಕಳು ಒಂದಿಷ್ಟು ಹುಡುಗಿಯರು ಫೋಟೋ ಕಲೆಕ್ಟ್​ ಮಾಡುತ್ತಿದ್ದ ಮಕ್ಕಳು, ಬರುವ ಗ್ರಾಹಕರಿಗೆ ಅವರ ಫೋಟೋ ತೋರಿಸುತ್ತಿದ್ದರು. ಅವರು ಓಕೆ ಎಂದರೆ ಹುಡುಗಿಯರನ್ನು ಕರೆದುಕೊಂಡು ಬರಲಾಗುತ್ತಿತ್ತು. ಕಾಲೇಜು ವಿದ್ಯಾರ್ಥಿನಿಯರಿಗೂ ಹಣದ ಆಸೆ ತೋರಿಸಿ ಈ ದಂಧೆಗೆ ಒಪ್ಪಿಸುವ ಕೆಲಸ ಹುಡುಗರದ್ದಾಗಿತ್ತು.ಬೀದಿ ಬದಿಗಳಲ್ಲೇ ಅಡ್ಡ ಮಾಡಿಕೊಂಡಿದ್ದ ಈ ತಾಯಿ-ಮಕ್ಕಳು ಅಲ್ಲಿಯೇ ದಂಧೆ ನಡೆಸುತ್ತಿದ್ದರು.
ಇದನ್ನೂ ಓದಿ:ರಾಮನ ಹಣಕ್ಕೆ ಕನ್ನ ಹಾಕಿದ ಖದೀಮರು: ಲಕ್ಷಾಂತರ ರೂಪಾಯಿ ವಿತ್​ಡ್ರಾ!
ಖಚಿತ ಮಾಹಿತಿ ಮೇರೆಗೆ ಈ ಅಡ್ಡೆಯ ಮೇಲೆ ದಾಳಿ ನಡೆಸಿದ ಪೊಲೀಸರು, ಐವರು ಯುವತಿಯರು ಸೇರಿ ಹತ್ತು ಮಂದಿಯನ್ನು ಬಂಧಿಸಿದ್ದಾರೆ. ಆರೋಪಿಗಳು ಬಳಸುತ್ತಿದ್ದ ಕಾರನ್ನೂ ವಶಕ್ಕೆ ಪಡೆಯಲಾಗಿದೆ. ಗ್ರಾಮೀಣ ಪ್ರದೇಶದ ಹುಡುಗಿಯರಿಗೆ ವಿವಿಧ ಆಸೆ ತೋರಿಸಿ ಅವರನ್ನು ಸೆಕ್ಸ್​ ದಂಧೆಗೆ ಬಳಸಿಕೊಳ್ಳಲಾಗುತ್ತಿತ್ತು.
ಹೀಗೆ ಹುಡುಗಿಯರನ್ನು ಕರೆದುಕೊಂಡು ಹೋಗುವಾಗ ಸಂದೇಹಗೊಂಡ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿ ಎಲ್ಲರನ್ನೂ ಬಂಧಿಸಿದ್ದಾರೆ.
ಕೇರಳದ ಸ್ಮಗ್ಲಿಂಗ್​ ರಾಣಿಗೂ, ಕರ್ನಾಟಕದ ಡ್ರಗ್ಸ್​ ದಂಧೆಗೂ ಲಿಂಕ್​: ತನಿಖೆಯಿಂದ ಬಯಲು!

ಮಕ್ಕಳನ್ನು ಶಾಲೆಯಿಂದ ಬಿಡಿಸಲು ಹಲವು ಪಾಲಕರ ನಿರ್ಧಾರ: ಅವರ ಒಲವು ಎತ್ತ ಗೊತ್ತಾ?

https://www.vijayavani.net/s-supreme-court-in-emi-moratorium/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 8 =
Remember me
