ಲಂಡನ್: ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಅವಕಾಶ ನೀಡಬೇಕು ಎಂದು ಕೆಲ ದಿನಗಳ ಹಿಂದೆ ಹೇಳುವ ಮೂಲಕ ಕೆನಡಾ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡಿಯೋ ಭಾರಿ ವಿವಾದ ಸೃಷ್ಟಿಸಿದ್ದರು.
ಪ್ರತಿಭಟಿಸುವ ಹಕ್ಕನ್ನು ಜನರಿಗೆ ನೀಡಬೇಕು. ಶಾಂತಿಯುತವಾಗಿ ಪ್ರತಿಭಟನೆ ನಡೆಯಬೇಕು. ಭಾರತದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಅವರಿಗೆ ಅವಕಾಶ ನೀಡಬೇಕು ಎಂದು ಟ್ರುಡಿಯೋ ಹೇಳಿದ್ದರು. ನಂತರ ಅಮೆರಿಕದಲ್ಲಿಯೂ ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತವಾಗಿತ್ತು. ಇದೀಗ ಲಂಡನ್​ ಸರದಿ.
ಈ ಕೃಷಿ ಕಾನೂನು ವಿರೋಧಿಸಿ ಲಂಡನ್​ನಲ್ಲಿ ಪ್ರತಿಭಟನೆ ಶುರುವಾಗಿದೆ. ಭಾರತೀಯ ದೂತಾವಾಸ ಕಚೇರಿ ಎದುರು ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಗುಂಪುಗೂಡಿ ರೈತರ ಬೇಡಿಕೆ ಈಡೇರಿಸಬೇಕೆಂದು ಹೋರಾಟ ನಡೆಸಿದ್ದಾರೆ. ರೈತರಿಗೆ ನ್ಯಾಯ ಬೇಕು- ನ್ಯಾಯ ಸಿಗಲೇಬೇಕು ಎಂಬ ಭಿತ್ತಿಪತ್ರ ಫಲಕ ಸೇರಿದಂತೆ ಹಲವು ಬಗೆಯ ಘೋಷಣಾ ಫಲಕ ಹಿಡಿದು ಪ್ರತಿಭಟನೆ ನಡೆಸಲಾಗಿದೆ.ಪ್ರತಿಭಟನೆಯಲ್ಲಿ ಸಿಖ್ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಬರ್ಮಿಂಗ್​ಹ್ಯಾಂ, ಡರ್ಬಿ ಸೇರಿದಂತೆ ಹಲವಾರು ಕಡೆಗಳಲ್ಲಿ ಕಾರು ಮತ್ತು ದ್ವಿಚಕ್ರ ವಾಹನಗಳಿಂದ ಲಂಡನ್​ಗೆ ಆಗಮಿಸಿದ್ದರು. ಹಳದಿ ಬಣ್ಣದ ತ್ರಿಭುಜ ಆಕಾರದ ಸಿಖ್ಖರ ಬಾವುಟಗಳು ಲಂಡನ್ ರಸ್ತೆಗಳಲ್ಲಿ ಸುಳಿದಾಡಿದವು.
ಇದನ್ನೂ ಓದಿ:ನಿಮ್​ ದೇಶದ್ದು ನೋಡ್ಕೋಪ್ಪಾ… ಬೇರೆಯವರ ವಿಷ್ಯದಲ್ಲಿ ಮೂಗು ತೂರಿಸೋದ್ಯಾಕಪ್ಪಾ- ಕೆನಡಾ ಪಿಎಂಗೆ ತಿರುಗೇಟು
ಕರೊನಾ ನಿಯಮ ಉಲ್ಲಂಘಿಸಿದ್ದಕ್ಕಾಗಿ ಹಲವು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ. ಕಚೇರಿಗೆ ಬಿಗಿಭದ್ರತೆ ಒದಗಿಸಲಾಗಿದ್ದು ಸಾವಿರಾರು ಪೊಲೀಸರನ್ನು ಬಂದೋ ಬಸ್ತ್​ಗೆ ನಿಯೋಜನೆ ಮಾಡಲಾಗಿದೆ.
ಸಾವಿರಾರು ಜನರು ತಮ್ಮ ತಮ್ಮ ವಾಹನಗಳಲ್ಲಿ ಬಂದು ಘೋಷಣೆ, ಪ್ರತಿಭಟನೆ, ಹಾರ್ನ್​ಗಳ ಸದ್ದಿನ ಮೂಲಕ ರೈತರಿಗೆ ಬೆಂಬಲ ವ್ಯಕ್ತಪಡಿಸಿದರು. ದೂತಾವಾಸ ಕಚೇರಿ ಸುತ್ತಲೂ ತಮ್ಮ ವಾಹನಗಳ ಪೆರೇಡ್ ಮಾಡಿ ಸುತ್ತಲೂ ಟ್ರಾಫಿಕ್ ಜಾಮ್ ಸೃಷ್ಟಿಸಿದಲ್ಲದೆ ಏಕಕಾಲದ ಹಾರ್ನ್ ಮೂಲಕ ಕರ್ಕಶ ಶಬ್ದಗಳನ್ನ ಹೊರಡಿಸಿ ತಮ್ಮ ಆಕ್ರೋಶ ಹೊರಹಾಕಿದರು. ಬ್ರಿಟನ್​ನಲ್ಲಿ ಹಾರ್ನ್ ಮೂಲಕ ಪ್ರತಿಭಟನೆ ನಡೆಸುವುದು ಅಥವಾ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸುವುದು ರೂಢಿಗತವಾದ ಪದ್ಧತಿಯಾಗಿದೆ.
ಕಾಂಗ್ರೆಸ್​ ಪ್ರಣಾಳಿಕೆಯಲ್ಲೂ ಇದೇ ಕೃಷಿ ಕಾನೂನು- ಗುಡುಗುತ್ತಿರೋ ಕೈ ಮುಖಂಡರು ಸುಸ್ತೋ ಸುಸ್ತು!

ಗುಜರಾತ್​ನಲ್ಲಿ ಮತ್ತೆ ಅದುರಿದ ಭೂಮಿ: ಬೆಳಗ್ಗೆಯಿಂದ 19 ಬಾರಿ ಕಂಪನ- ಆತಂಕದಲ್ಲಿ ಜನ

ಪತಿ ಯುವಕರಂತೆ ಕಾಣಿಸ್ತಾರೆ, ನಾನೋ ವಯಸ್ಸಾದವಳಂತೆ ಕಾಣಿಸ್ತೇನೆ- ಪರಿಹಾರ ಹೇಳಿ…

ನನಗೆ ಕೆಲಸವಿಲ್ಲದಿದ್ದರೆ ಉದ್ಯೋಗಸ್ಥ ಮಗನಿಂದ ಜೀವನಾಂಶ ಕೇಳಬಹುದೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 8 =
Remember me
