ಮೆಹಬೂಬಾಬಾದ್ (ತೆಲಂಗಾಣ):ತರಬೇತಿಯಲ್ಲಿದ್ದ ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್ (ಪಿಎಸ್​​​​ಐ) ಅವರ ಮೇಲೆ ಸಬ್​​ ಇನ್ಸ್​ಪೆಕ್ಟರ್​ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ತೆಲಂಗಾಣದ ಮೆಹಬೂಬಾಬಾದ್‌ ನಗರದಲ್ಲಿ ನಡೆದಿದೆ.
29 ವರ್ಷದ ತರಬೇತಿಯಲಿದ್ದ ಮಹಿಳಾ ‌ಪಿಎಸ್​​​​ಐ ಈ ಕುರಿತು ದೂರು ದಾಖಲು ಮಾಡಿದ್ದಾರೆ. ತಮ್ಮ ಮೇಲೆ ಸಬ್‌ ಇನ್ಸ್‌ಪೆಕ್ಟರ್‌ ಶ್ರೀನಿವಾಸರೆಡ್ಡಿ ಅತ್ಯಾಚಾರಕ್ಕೆ ಯತ್ನಿಸಿರುವುದಾಗಿ ಮಹಿಳೆ ದೂರಿದ್ದಾರೆ. ಈ ದೂರಿನ ಆಧಾರದ ಮೇಲೆ ರೆಡ್ಡಿ ಅವರನ್ನು ತೆಲಂಗಾಣದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮಹಿಳೆಯು ಪ್ರೊಬೆಷನರಿ ಪಿಎಸ್​ಐ ಆಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಶ್ರೀನಿವಾಸರೆಡ್ಡಿ ಮತ್ತು ಅವರು ಒಂದೇ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದು, ಈ ವೇಳೆ ಘಟನೆ ನಡೆದಿದೆ ಎಂದು ದೂರಲಾಗಿದೆ. ವಾರಂಗಲ್​ ಪೊಲೀಸ್ ಕಮೀಷನರ್​ ತರುಣ್​ ಜೋಷಿಗೆ ಮಹಿಳೆ ದೂರು ನೀಡಿದ್ದಾರೆ.
ಬೆಲ್ಲದ ಉಗ್ರಾಣವೊಂದರ ಮೇಲೆ ದಾಳಿ ನಡೆಸಬೇಕೆಂದು ತನ್ನ ಖಾಸಗಿ ವಾಹನದಲ್ಲಿ ಸಂತ್ರಸ್ತ ಮಹಿಳೆಯನ್ನು ಕರೆದೊಯ್ದಿದ್ದ ಶ್ರೀನಿವಾಸ ರೆಡ್ಡಿ ನಿರ್ಜನ ಪ್ರದೇಶದಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಲು ಮುಂದಾಗಿದ್ದಾರೆ. ಮಹಿಳೆ ತೀವ್ರ ಪ್ರತಿರೋಧ ತೋರಿ ತಪ್ಪಿಸಿಕೊಂಡಾಗ ನಂತರ ಶ್ರೀನಿವಾಸರೆಡ್ಡಿ ಮಹಿಳೆಯನ್ನು ಆಕೆಯ ನಿವಾಸದ ಬಳಿ ತಂದು ಬಿಟ್ಟಿದ್ದಾರೆ ಎನ್ನಲಾಗಿದೆ.
ಸದ್ಯ ಮಹಿಳೆಯ ದೂರು ಆಧರಿಸಿ ಶ್ರೀನಿವಾಸರೆಡ್ಡಿಯನ್ನು ಅಮಾನತು ಮಾಡಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.
ಬ್ಲೂಫಿಲ್ಮ್ಂ ಕೇಸ್‌ನಲ್ಲಿ ಅಪ್ಪ ಜೈಲುಪಾಲು- ಅಮ್ಮನ ಕಣ್ಣೀರು: ಇನ್‌ಸ್ಟಾಗ್ರಾಂನಲ್ಲಿ ಮಗನ ಪೋಸ್ಟ್‌

ಗಾಯಕನ ವಿರುದ್ಧ ಪತ್ನಿಯಿಂದ ಲೈಂಗಿಕ ದೌರ್ಜನ್ಯ ಕೇಸ್‌: 20 ಕೋಟಿ ರೂ. ಜತೆ ಇವೆಲ್ಲಾ ಬೇಡಿಕೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 2 =
Remember me
