ನವದೆಹಲಿ:ಚೀನಾ ಮೂಲಕ ಪಬ್​ಜಿ ಆ್ಯಪ್​ ಭಾರತ ನಿಷೇಧ ಹೇರಿರುವ ಬೆನ್ನಲ್ಲೇ ಅದರ ಭಯಾನಕತೆಯ ಒಂದೊಂದೇ ಕಥೆಗಳು ಹೊರಬರುತ್ತಿವೆ.
ಇದಾಗಲೇ ಹಲವಾರು ಮಂದಿ ಅದರಲ್ಲಿಯೂ ಚಿಕ್ಕಮಕ್ಕಳು ಈ ಆಟದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಹಲವಾರು ಘಟನೆಗಳು ನಡೆದಿವೆ. ಈ ಆಟದಲ್ಲಿ ನೀಡುವ ಟಾಸ್ಕ್​ಗಳನ್ನು ಮಾಡಲು ಹೋಗಿ ಮಕ್ಕಳು, ಯುವಕರು ಜೀವ ಕಳೆದುಕೊಂಡಿದ್ದಾರೆ.
ಆದರೆ ಇಲ್ಲೊಬ್ಬ 15 ವರ್ಷದ ಬಾಲಕ, ಈ ಆಟದ ಗೀಳಿಗೆ ಬಿದ್ದು, ಬಿಎಸ್​ಎನ್​ಎಲ್​ ಉದ್ಯೋಗದಿಂದ ನಿವೃತ್ತಿಯಾಗಿರುವ ತನ್ನ ಅಜ್ಜನ ಪಿಂಚಣಿ ಹಣವನ್ನು ಪೂರ್ತಿ ಗುಳುಂ ಮಾಡಿ ಹಾಕಿದ್ದಾನೆ! ಅಜ್ಜನ ಅಕೌಂಟ್‌ನಿಂದ 2.3 ಲಕ್ಷ ಖರ್ಚು ರೂಪಾಯಿ ಕದ್ದು ಆಟಕ್ಕಾಗಿ ವ್ಯಯಿಸಿದ್ದಾನೆ.
ಈ ಆಟದಲ್ಲಿ ಟಾಸ್ಕ್​ ರೂಪದಲ್ಲಿ ಗನ್‌ಗಳು ಹಾಗೂ ಇತರ ಸಲಕರಣೆಗಳನ್ನು ಕೊಂಡುಕೊಳ್ಳುವಂತೆ ಹೇಳಲಾಗುತ್ತದೆ. ಅದನ್ನು ಕೊಂಡುಕೊಳ್ಳಲು ಈ ಬಾಲಕ ಅಜ್ಜನ ಬ್ಯಾಂಕ್​ನಿಂದ ಅವರಿಗೆ ತಿಳಿಯದಂತೆ ಹಣವನ್ನು ಕಳ್ಳತನ ಮಾಡುತ್ತಿದ್ದ.
ಇದು ನಡೆಯುತ್ತಿದ್ದು ವರ್ಷಗಳೇ ಆಗಿದ್ದು, ಇದೀಗ ಅಜ್ಜನಿಗೆ ತನ್ನ ಅಕೌಂಟ್‌ನಿಂದ ಹಣ ಖಾಲಿಯಾಗಿರುವುದು ಕಂಡಿದೆ. ತನ್ನ ಪಾಸ್​ಬುಕ್​, ಪಾಸ್​ವರ್ಡ್​ ಎಲ್ಲವೂ ಮೊಮ್ಮನಿಗೆ ತಿಳಿದಿದ್ದ ಹಿನ್ನೆಲೆಯಲ್ಲಿ ಆತನನ್ನು ಅಜ್ಜ ಕೇಳಿದ್ದಾರೆ. ಅದಕ್ಕೆ ‘ಬುದ್ಧಿವಂತ’ ಬಾಲಕ, ಅಕೌಂಟ್‌ ಹ್ಯಾಕ್‌ ಆಗಿದೆ ಎಂದು ಹೇಳಿದ್ದಾನೆ.
ಇದನ್ನೂ ಓದಿ:ಈ ಬಾರಿ ಜಂಬೂ ಸವಾರಿ ಇರಲಿದೆಯೆ? ನಾಡಹಬ್ಬದ ಉದ್ಘಾಟಕರು ಯಾರು? ಇಲ್ಲಿದೆ ಮಾಹಿತಿ…
ಇದರಿಂದ ಗಾಬರಿಗೊಂಡ ಅಜ್ಜ ಪೊಲೀಸರ ಬಳಿ ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರಿಗೆ ಹ್ಯಾಕ್​ ಆಗಿಲ್ಲ ಎನ್ನುವುದು ತಿಳಿದು, ಮನೆಯವರ ಮೇಲೆ ಸಂದೇಹ ಬಂದಿದೆ.
ಮನೆಯವರನ್ನೇ ವಿಚಾರಿಸಿದಾಗ ಹೆದರಿದ ಬಾಲಕ ಸತ್ಯ ಒಪ್ಪಿಕೊಂಡಿದ್ದಾನೆ. ತಾನೇ ಪಬ್​ಜಿ ಆಡಲು ಹಣ ತೆಗೆಯುವಾಗ ಬರುತ್ತಿದ್ದ ಒಟಿಪಿ ಹಾಗೂ ಬ್ಯಾಂಕಿನ ಮೇಸೆಜ್‌ಗಳನ್ನ ಅಜ್ಜನ ಫೋನ್‌ನಿಂದ ಡಿಲೀಟ್‌ ಮಾಡಿರುವುದಾಗಿಯು ಹೇಳಿದ್ದಾನೆ. ಸದ್ಯ ಬಾಲಕನಿಗೆ ಕೌನ್ಸಿಲಿಂಗ್‌ಗೆ ಕಳುಹಿಸಲಾಗಿದೆ.
ಮಕ್ಕಳನ್ನು ನಂಬಿ ಬ್ಯಾಂಕ್​ ಪಾಸ್​ವರ್ಡ್​ ಕೊಡುವುದು, ಅವರ ಕೈಯಲ್ಲಿ ಮೊಬೈಲ್​ ಫೋನ್​ ಕೊಡುವುದಕ್ಕೆ ಕಡಿವಾಣ ಹಾಕಬೇಕಿದೆ ಎಂದಿದ್ದಾರೆ ಪೊಲೀಸರು.
ಕೇರಳ ಸಿಎಂ, ಮುಖಂಡರ ಗಡಗಡ ನಡುಗಿಸಿರುವ ಸ್ಮಗ್ಲಿಂಗ್​ ರಾಣಿಗೆ ಎದೆನೋವು! ಆಸ್ಪತ್ರೆಗೆ ದಾಖಲು

ಲಡಾಖ್​ ಗಡಿಯಲ್ಲಿ ಗುಂಡಿನ ಸದ್ದು- 45 ವರ್ಷಗಳ ನಂತರ ಫೈರಿಂಗ್​! ಕದನದ ಮುನ್ಸೂಚನೆ?

ಸಲಿಂಗ ಕಾಮದ ಸರಸ ಪ್ರಾಣಕ್ಕೇ ಎರವಾಯ್ತು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seven + seven =
Remember me
