ನವದೆಹಲಿ:ಹಲವಾರು ಮಕ್ಕಳ- ಯುವಕರ ನಿದ್ದೆ ಕಸಿದರೂ, ಕೆಲವರ ಪ್ರಾಣಕ್ಕೂ ಸಂಚಕಾರ ತಂದರೂ ಚೀನಾ ಮೂಲದ ಪಬ್ಜಿ ಗೇಮ್ಸ್​ ಬ್ಯಾನ್​ ಆಗಿದ್ದು ಹಲವರಿಗೆ ಚಿಂತೆಗೀಡು ಮಾಡಿದ್ದರೆ, ಲಕ್ಷಾಂತರ ಮಂದಿ ಪಾಲಕರಿಗೆ ಖುಷಿ ಕೊಟ್ಟಿದ್ದಂತೂ ನಿಜ.
ಆದರೆ ಅದು ಹೊಸ ರೂಪ ಪಡೆದು, ಹಿಂದಿನಷ್ಟು ಭಯಾನಕವಾಗಿರದೇ ಕೇವಲ ಆಟದ ರೂಪದಲ್ಲಿ ಮತ್ತೆ ಭಾರತಕ್ಕೆ, ಭಾರತೀಯ ಮೂಲವಾಗಿ ಮರಳಲಿದೆ ಎಂದು ಭಾರಿ ಸುದ್ದಿಯಾಗಿತ್ತು. ಮಾತ್ರವಲ್ಲದೇ ಶೀಘ್ರದಲ್ಲಿಯೇ ಅದು ಬರುವ ಬಗ್ಗೆ ಎಲ್ಲಾ ರೀತಿಯ ಪ್ರಕ್ರಿಯೆಗಳೂ ನಡೆದಿದ್ದವು.
ಇದಕ್ಕಾಗಿ ಈ ಆಟದ ಪ್ರಿಯರು ಮತ್ತೆ ಪಬ್​ಜಿ ಮುಖ ನೋಡಲು ಕಾದು ಕುಳಿತಿದ್ದರು. ಆದರೆ ಅಂಥ ಪ್ರಿಯರಿಗೆ ಇದೀಗ ದೊಡ್ಡ ಶಾಕ್​ ಸುದ್ದಿ ಬಂದಿದೆ. ಅದೇನೆಂದರೆ, ಸದ್ಯಕ್ಕಂತೂ ಈ ಗೇಮ್​ ಇಷ್ಟು ಬೇಗ ವಾಪಸ್​ ಮರಳುವ ಸಾಧ್ಯತೆ ಇಲ್ಲ ಎಂದು ಮೂಲಗಳು ಹೇಳಿವೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MEITY) ಇದನ್ನು ಇಷ್ಟು ಬೇಗ ವಾಪಸ್​ ತರಲು ಸಮ್ಮತಿ ನೀಡಿಲ್ಲ. ಪಬ್​ಜಿ ಪ್ರಮೋಟರ್​ಗಳ ಕೋರಿಕೆಯನ್ನು ಸಚಿವಾಲಯವು ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಸದ್ಯದ ಬೆಳವಣಿಗೆಯನ್ನು ನೋಡಿದರೆ ಈ ಆಟ ಇಷ್ಟು ಬೇಗ ವಾಪಸಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ.
ಇದನ್ನೂ ಓದಿ:ವೀರ್ಯ ಕೌಂಟ್​ ಕಡಿಮೆ ಇದ್ದು ಮಕ್ಕಳಾಗದಿದ್ದರೆ ದಿಢೀರ್​ ನಿರ್ಧಾರಕ್ಕೆ ಬರಬೇಡಿ…
ಪಬ್​ಜಿ ಪ್ರಮೋಟರ್​ಗಳು ಈ ಕುರಿತು ಕಳೆದ ತಿಂಗಳು ಸಭೆ ನಡೆಸಿದ್ದರು. ಈ ಸಭೆಯಲ್ಲಿ ಎಲ್ಲರೂ ಒಕ್ಕೋರಲಿನಿಂದ ಎಲ್ಲಾ ಷರತ್ತುಗಳಿಗೆ ತಾವು ಬದ್ಧ ಎಂದು ಹೇಳಿದ್ದರು. ಭಾರತ ಸರ್ಕಾರವು ನಿಗದಿಪಡಿಸಿದ ಎಲ್ಲಾ ಮಾನದಂಡಗಳನ್ನು ಅನುಸರಿಸಲು ತಾವು ಸಿದ್ಧರಿದ್ದೇವೆ ಎಂದಿದ್ದರು. ಆದರೆ ಕೇಂದ್ರ ಸರ್ಕಾರ ಅವರ ಮನವಿಗೆ ಸ್ಪಂದಿಸಿಲ್ಲ ಎಂದು ತಿಳಿದುಬಂದಿದೆ.
ಬರುವ ತಿಂಗಳಿನಲ್ಲಿಯೇ ಇದು ಪುನಃ ಪ್ರವೇಶ ಮಾಡಬಹುದು ಎಂಬ ಆಟಪ್ರಿಯರ ನಿರೀಕ್ಷೆ ಸದ್ಯದ ಪರಿಸ್ಥಿತಿಯಲ್ಲಿ ಹುಸಿಯಾಗುತ್ತಿರುವಂತೆ ಕಾಣಿಸುತ್ತಿದೆ. ಆದರೆ ಈ ಆಟದ ವಿರೋಧಿಗಳು ಮಾತ್ರ ಈ ನಿರ್ಧಾರದಿಂದ ಸಂತೋಷಗೊಂಡಿದ್ದಾರೆ.
‘2023ರಲ್ಲಿ ಕುಮಾರಸ್ವಾಮಿಯೇ ಸಿಎಂ- ಇದು ನಾನು ಹೇಳ್ತೀರೋ ಭವಿಷ್ಯ’

ಮದ್ವೆ ಯಾವಾಗ ಆಗುತ್ತೆ ಗುರೂಜಿ? ಹುಡುಗನಿಗೆ ಸರ್ಕಾರಿ ಕೆಲ್ಸ ಇರತ್ತಾ? ಹುಡುಗಿ ಸ್ಮಾರ್ಟ್​ ಇರ್ತಾಳಾ?

ಕ್ಲಾಸ್​ರೂಂ ಒಳಗೇ ಗೆಳತಿಯ ಮದ್ವೆಯಾದ ಹೈಸ್ಕೂಲ್​​ ವಿದ್ಯಾರ್ಥಿ! ಮುಂದೇನಾಯ್ತು ನೋಡಿ…

ಕೃಷಿ ಕಾನೂನು ವಿರೋಧಿಸಿ ಮಾಜಿ ಸಿಎಂ ಸೇರಿದಂತೆ ಇಬ್ಬರಿಂದ ಪದ್ಮ ವಿಭೂಷಣ ವಾಪಸ್​!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seventeen + eighteen =
Remember me
