ಪುಣೆ:ಕರೊನಾ, ಲಾಕ್‌ಡೌನ್‌ನಿಂದಾಗಿ ಎಷ್ಟೋ ಮಂದಿ ಕೆಲಸ ಕಳೆದುಕೊಂಡು ಬೇರೆ ಬೇರೆ ಉದ್ಯೋಗಗಳನ್ನು ಅನಿವಾರ್ಯವಾಗಿ ಕಂಡುಕೊಳ್ಳುವಂತಾಗಿದೆ. ತಮಗೆ ಗೊತ್ತಿಲ್ಲದ ಕೆಲಸವನ್ನು ಮಾಡಿಕೊಂಡು ಹೊಟ್ಟೆ ಹೊರೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲಿಯೂ ಹೆಚ್ಚಿನ ಮಂದಿ ಹಣ್ಣು, ತರಕಾರಿ ವ್ಯಾಪಾರಕ್ಕಿಳಿದಿದ್ದಾರೆ. ಆದರೆ ಮೊದಲೇ ಇದರಲ್ಲಿ ನುರಿತರಾಗಿರುವವರ ಜತೆ ಸ್ಪರ್ಧೆಗೆ ಇಳಿಯಲು ಸಾಧ್ಯವಾಗದೇ ಅದರಲ್ಲಿಯೂ ಸೋತವರಿದ್ದಾರೆ.
ಇಂಥವರಲ್ಲಿ ಒಬ್ಬರು ಪುಣೆಯ ನಾಮದೇವ್‌. ಖಾಸಗಿ ಕಂಪೆನಿಯೊಂದರಲ್ಲಿ ನೌಕರರಾಗಿದ್ದ ಇವರು ಕರೊನಾದಿಂದಾಗಿ ಕೆಲಸ ಕಳೆದುಕೊಂಡರು. ಬದುಕಲು ಬೇರೆಮಾರ್ಗ ಗೊತ್ತಿಲ್ಲದೇ ಬಾಳೆಹಣ್ಣಿನ ವ್ಯಾಪಾರಕ್ಕೆ ಇಳಿದರು. ರಸ್ತೆ ಬದಿಯಲ್ಲಿ ಬಾಳೆಹಣ್ಣು ಇಟ್ಟುಕೊಂಡು ವ್ಯಾಪಾರ ಶುರು ಮಾಡಿದರು.
ಆದರೆ ರಸ್ತೆಯ ಪಕ್ಕ ಜನರ ದೃಷ್ಟಿ ಹಾಯಲೇ ಇಲ್ಲ. ಇದರಿಂದ ಬೇಸತ್ತ ನಾಮದೇವ್‌ ಅವರು ಬಾಳೆಹಣ್ಣು ಬುಟ್ಟಿ ಹಿಡಿದು ರಸ್ತೆಯಲ್ಲಿ ಬರುವ ವಾಹನಗಳನ್ನು ನಿಲ್ಲಿಸುವ ಪ್ರಯತ್ನ ಪಡುತ್ತಾ, ಬಾಳೆಹಣ್ಣು ಬೇಕೇ ಬಾಳೆಹಣ್ಣು ಎನ್ನತೊಡಗಿದರು. ಆದರೂ ಕೆಲವರು ಮಾತ್ರ ಹಣ್ಣು ಕೊಂಡರೇ ವಿನಾ, ಆಗಲೂ ಅಷ್ಟಾಗಿ ವ್ಯಾಪಾರ ಕುದುರಲಿಲ್ಲ.
ಇದರಿಂದ ಬೇಸರಗೊಂಡ ನಾಮದೇವ್‌ ಅವರು ಕೊನೆಗೂ ಒಂದು ಮಾರ್ಗ ಕಂಡುಕೊಂಡರು. ಆದೇನೆಂದರೆ, ಮೈಕ್‌ ಒಂದರಲ್ಲಿ ಬಾಳೆ ಹಣ್ಣಿನ ಬೆಲೆಯನ್ನು ಹೇಳುವ ರಿಕಾರ್ಡ್‌ ಆನ್‌ ಮಾಡಿಕೊಂಡು ತಲೆಯ ಮೇಲೆ, ಕೊರಳಿಗೆ ಬಾಳೆಹಣ್ಣುಗಳನ್ನು ಹಾಕಿಕೊಂಡು, ರೆಕಾರ್ಡ್‌ಗೆ ತಕ್ಕಂತೆ ನೃತ್ಯ ಮಾಡುತ್ತಾ ಬಾಳೆಹಣ್ಣಿನ ವ್ಯಾಪಾರದಲ್ಲಿ ತೊಡಗಿದರು.
ಅಚ್ಚರಿ ಎಂಬಂತೆ, ಇವರ ನೃತ್ಯಕ್ಕೆ ಗ್ರಾಹಕರು ಮನಸೋಲುತ್ತಿದ್ದಾರಂತೆ. ವಾಹನಗಳಲ್ಲಿ ಹೋಗುವವರು ವಾಹನ ನಿಲ್ಲಿಸಿ ಬಾಳೆಹಣ್ಣುಗಳನ್ನು ಖರೀದಿ ಮಾಡುತ್ತಿದ್ದಾರಂತೆ. ತಮ್ಮ ಮೇಲೆ ಕನಿಕರ ಬಂದೋ, ಅಥವಾ ತಮ್ಮ ನೃತ್ಯಕ್ಕೆ ಮನಸೋತೋ ಗೊತ್ತಿಲ್ಲ… ಒಟ್ಟಿನಲ್ಲಿ ನನ್ನ ವ್ಯಾಪಾರ ಭರ್ಜರಿಯಾಗಿ ಸಾಗಿದೆ ಎನ್ನುತ್ತಾರೆ ನಾಮದೇವ. ನನ್ನ ನೃತ್ಯ ದಾರಿಯಲ್ಲಿ ಹೋಗುವ ಮಕ್ಕಳಿಗೂ ಇಷ್ಟವಾಗಿ ಅಲ್ಲಿಯೇ ನಿಂತುಕೊಳ್ಳುತ್ತಾರೆ. ಆಗ ಅವರ ಪಾಲಕರು ನಿಲ್ಲಲೇಬೇಕಾಗಿ ಬರುವ ಕಾರಣ ಬಾಳೆಹಣ್ಣುಗಳನ್ನು ಖರೀದಿಸುತ್ತಾರೆ. ಒಟ್ಟಿನಲ್ಲಿ ನನ್ನ ಈ ಹೊಸ ಯೋಚನೆ ಫಲ ಕೊಟ್ಟಿದೆ ಎನ್ನುತ್ತಾರೆ ಅವರು.
ಇವರ ಈ ಮಾರಾಟದ ಪರಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದ್ದು, ಅಲ್ಲಿಯೂ ಸಾಕಷ್ಟು ಮೆಚ್ಚುಗೆ ಗಳಿಸುತ್ತಿದ್ದಾರೆ ನಾಮದೇವ್‌. ತಮ್ಮಿಂದ ಏನೂ ಸಾಧ್ಯವಿಲ್ಲ ಎಂದು ಸೋತು ಕುಳಿತವರಿಗೆ ಇವರ ಮಾರಾಟದ ರೀತಿ ಸ್ಫೂರ್ತಿ ತುಂಬುತ್ತಿದೆ ಎಂದು ಹಲವರು ಕಮೆಂಟ್‌ಮಾಡಿದ್ದಾರೆ. ಎಲ್ಲರೂ ಈ ರೀತಿ ನೃತ್ಯ ಮಾಡುತ್ತಾ ವ್ಯಾಪಾರ ಮಾಡಿದರೆ ಮಾರಾಟವಾಗುತ್ತದೆ ಎಂದಲ್ಲ, ಆದರೆ ಮನಸ್ಸು ಮಾಡಿದರೆ ಎಷ್ಟೋ ಮಾರ್ಗಗಳನ್ನು ಕಂಡುಕೊಳ್ಳಬಹುದು ಎಂದು ಇನ್ನು ಕೆಲವರು ಕಮೆಂಟ್‌ ಮೂಲಕ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ನಾಮದೇವ್‌ ಅವರ ನೃತ್ಯದ ಪರಿ ನೀವೂ ನೋಡಿ:
VIDEO: पुण्यातील डान्सिंग केळीवाला चर्चेत; लॉकडाउनमध्ये नोकरी गेल्यानंतर अनोख्या पद्धतीने झाला 'आत्मनिर्भर'#Pune#FruitSeller#BananaSellerpic.twitter.com/O6X84kpxvx— LoksattaLive (@LoksattaLive)January 12, 2022
VIDEO: पुण्यातील डान्सिंग केळीवाला चर्चेत; लॉकडाउनमध्ये नोकरी गेल्यानंतर अनोख्या पद्धतीने झाला 'आत्मनिर्भर'#Pune#FruitSeller#BananaSellerpic.twitter.com/O6X84kpxvx
Sign in to your account
Please enter an answer in digits:five − 2 =
Remember me
