ಚಂಡೀಗಢ: ಪಂಜಾಬ್‌ನಲ್ಲಿ ಚುನಾವಣೆಯ ಕಾವು ಜೋರಾಗಿದೆ. ಆಡಳಿತಾರೂಢ ಕಾಂಗ್ರೆಸ್‌ ಸೇರಿದಂತೆ ಬಿಜೆಪಿ ಮತ್ತು ಆಮ್‌ ಆದ್ಮಿ ಪಕ್ಷ (ಆಪ್‌) ನಡುವೆಯೂ ಹಣಾಹಣಿ ಏರ್ಪಟ್ಟಿದೆ.
ಆಮ್‌ ಆದ್ಮಿಯ ನಾಯಕ ಅರವಿಂದ ಕೇಜ್ರಿವಾಲ್‌ ಪಂಜಾಬ್‌ನಲ್ಲಿಯೂ ಚುಕ್ಕಾಣಿ ಹಿಡಿಯಲು ಹರಸಾಹಸ ಪಡುತ್ತಿದ್ದಾರೆ. ಜನರಿಗೆ ಇದಾಗಲೇ ಆಕರ್ಷಕ ಭರವಸೆಗಳನ್ನೂ ನೀಡಿದ್ದಾರೆ. ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅವಕಾಶವನ್ನು ಜನರಿಗೆ ಕೊಟ್ಟಿದ್ದ ‘ಆಪ್‌’ ಇದಕ್ಕೆ ‘ಜನತಾ ಚುನೇಗಿ ಅಪ್ನಾ ಸಿಎಂ’ ಎಂಬ ಹೆಸರು ನೀಡಿತ್ತು. ನಂತರ ಜನರ ಅನುಮತಿ ಮೇರೆಗೆ ಹಾಸ್ಯನಟರಾಗಿದ್ದ ಭಗವಂತ್​ ಮನ್​ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ ಎಂದು ಕೇಜ್ರಿವಾಲ್‌ ಹೇಳಿದ್ದರು.
ಇದೀಗ ಇವರ ಬಗ್ಗೆ ಮಾತನಾಡಿದ ಪಂಜಾಬ್​ ಮುಖ್ಯಮಂತ್ರಿ ಚರಣಜಿತ್​ ಸಿಂಗ್​ ಚನ್ನಿ, ಭಗವಂತ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪಂಜಾಬ್‌ನ ಭಟಿಂಡಾದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ‘ಭಗವಂತ್​ ಮನ್​ ಒಬ್ಬ ಕುಡುಕ ಮತ್ತು ಅನಕ್ಷರಸ್ಥ ವ್ಯಕ್ತಿ. ಆಪ್ ಇಂಥ ವ್ಯಕ್ತಿಯ ಕೈಯಲ್ಲಿ ಪಂಜಾಬ‌ ಕೊಡಲು ಹೊರಟಿದೆ. 12 ತರಗತಿ ಪಾಸು ಮಾಡಲು ಮೂರು ವರ್ಷ ತೆಗೆದುಕೊಂಡದ್ದೂ ಅಲ್ಲದೇ ಅವರು ಕುಡುಕರು. ಇಂಥವರ ಕೈಗೆ ನಮ್ಮ ರಾಜ್ಯ ಕೊಡುವುದು ಹೇಗೆ ಎಂದು ಜನತೆಯನ್ನು ಪ್ರಶ್ನಿಸಿದ್ದಾರೆ.
ಹಾಸ್ಯನಟರಾಗಿದ್ದ ಭಗವಂತ್​ ಮನ್​, ಸಂಗ್ರೂರ್​​ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಗೆದ್ದು ಸಂಸದರಾದವರು. ಈ ಬಾರಿ ಧುರಿಯಿಂದ ಸ್ಪರ್ಧಿಸುತ್ತಿದ್ದಾರೆ.
ಪ್ರೇಯಸಿಯ ದೈಹಿಕ ಸ‍ಂಪರ್ಕ ಮಾಡಿದಾಗ ಈ ಒಂದು ಡೌಟ್‌ ಶುರುವಾಗಿದೆ- ಬಗೆಹರಿಸಿಕೊಳ್ಳೋದು ಹೇಗೆ?

ಕೆಂಪುಕೋಟೆ ಘಟನೆಯಲ್ಲಿ ಸಿಕ್ಕಿಬಿದ್ದದ್ದೇ ದೀಪ್‌ ಸಿಧು ಸಾವಿಗೆ ಕಾರಣವಾಯ್ತಾ? ಬೀದಿದೀಪ ಇಲ್ಲದ ಕಡೆ ಅಪಘಾತ! ಪೊಲೀಸರು ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − nine =
Remember me
