ಚಂಡೀಗಢ:ಲಿವ್‌ ಇನ್‌ ಸಂಬಂಧ ಕಾನೂನುಬದ್ಧ ಎಂದು ಸುಪ್ರೀಂಕೋರ್ಟ್‌ ಸಮ್ಮತಿ ನೀಡಿ ಕೆಲ ವರ್ಷಗಳೇ ಕಳೆದಿವೆ. ಆದರೆ ಇದನ್ನೇ ಮುಂದು ಮಾಡಿಕೊಂಡು ಹೈಕೋರ್ಟ್‌ನಿಂದ ರಕ್ಷಣೆ ಕೋರಿ ಬಂದಿದ್ದ ಜೋಡಿಯೊಂದರ ವಿರುದ್ಧ ಪಂಜಾಬ್‌- ಹರಿಯಾಣ ಹೈಕೋರ್ಟ್‌ ಗರಂ ಆಗಿದ್ದು ಅವರ ಅರ್ಜಿಯನ್ನು ವಜಾ ಮಾಡಿದೆ.
‘ಮದುವೆಯಾಗದೇ ಒಟ್ಟಿಗೆ ಬದುಕುವುದನ್ನು ಸಾಮಾಜಿಕವಾಗಿ ಹಾಗೂ ನೈತಿಕವಾಗಿ ಒಪ್ಪಲಾಗದು’ ಎಂದು ಕೋರ್ಟ್‌ ಹೇಳಿದೆ. ಗುಲ್ಜಾಕುಮಾರಿ (19) ಹಾಗೂ ಗುರ್ವಿಂದರ್‌ ಸಿಂಗ್‌ (22) ಎಂಬುವವರು ತಮ್ಮ ಲಿವ್‌ ಇನ್‌ ಸಂಬಂಧದ ಕುರಿತಂತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್‌.ಎಸ್‌.ಮದಾನ್‌ ನೇತೃತ್ವದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಈ ಜೋಡಿ ಕೆಲ ವರ್ಷಗಳಿಂದ ಮದುವೆಯಾಗದೇ ಒಟ್ಟಿಗೇ ನೆಲೆಸಿದ್ದಾರೆ. ಆದರೆ ಲುಧಿಯಾನಾದಲ್ಲಿರುವ ಗುಲ್ಜಾ ಕುಮಾರಿ ಅವರ ಪಾಲಕರು ಇದಕ್ಕೆ ಸಮ್ಮತಿ ನೀಡುತ್ತಿಲ್ಲ. ತಮ್ಮ ಜೀವಕ್ಕೆ ಅಪಾಯವಿದೆ. ಆದ್ದರಿಂದ ತಮಗೆ ರಕ್ಷಣೆ ನೀಡಬೇಕು ಎಂದು ಅರ್ಜಿಯಲ್ಲಿ ಸಲ್ಲಿಸಲಾಗಿತ್ತು.
ಇದರಿಂದ ಅಸಮಾಧಾನಗಂಡ ಹೈಕೋರ್ಟ್‌, ಅವರು ಒಟ್ಟಿಗೆ ಇರುವುದನ್ನು ಸಾಮಾಜಿಕವಾಗಿ ಹಾಗೂ ನೈತಿಕವಾಗಿ ಒಪ್ಪಲಾಗದು. ನಿಮ್ಮ ಈ ಸಂಬಂಧಕ್ಕೆ ಮುದ್ರೆ ಒತ್ತಿ ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವುದು ಸರಿಯಲ್ಲ. ನ್ಯಾಯಾಲಯದ ಮುದ್ರೆಯನ್ನು ತೋರಿಸಿ ಮದುವೆಯಾಗುವ ನಿಮ್ಮ ಆಸೆಯನ್ನು ಒಪ್ಪಲಾಗದು ಎಂದ ಕೋರ್ಟ್‌ ಅರ್ಜಿಯನ್ನು ವಜಾ ಮಾಡಿದೆ.
‘ಗೋಡೆ ತೆಳ್ಳಗಿದ್ದು, ಸೆಕ್ಸ್‌ ಮಾಡುವಾಗ ಪ್ಲೀಸ್‌ ಸೌಂಡ್‌ ಮಾಡಬೇಡಿ, ಅಕ್ಕಪಕ್ಕದವರಿಗೆ ಒಂಥರಾ ಆಗುತ್ತೆ’

ಭಾರಿ ಗಾಳಿಗೆ ಉರುಳಿದ ಮರ- ಸಾವಿನ ದವಡೆಯಿಂದ ಪಾರಾದ ಮಹಿಳೆ: ವಿಡಿಯೋ ವೈರಲ್‌

ಸಿಎಂ ಅಳಿಯನಿಗೆ ಸಿಕ್ತು ಸ್ಥಾನ- ಕೋವಿಡ್‌, ನಿಫಾ ಕಾಯಿಲೆ ವಿರುದ್ಧ ಹೋರಾಡಿದ್ದ ಸಚಿವೆಗೆ ಕೊಕ್‌!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 4 =
Remember me
