ನವದೆಹಲಿ:ಒಂದೆಡೆ ದೆಹಲಿಯ ರಾಜ್‌ಪಥ್‌ನಲ್ಲಿ ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಹಲವು ಗಣ್ಯರು ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದರೆ, ಅದೇ ಇನ್ನೊಂದೆಡೆ ಕೃಷಿ ಕಾಯ್ದೆ ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಅದರಲ್ಲಿಯೂ ಪಂಜಾಬ್‌ನ ರೈತರು ಗಣರಾಜ್ಯೋತ್ಸವ ನಡೆಯುತ್ತಿರುವ ಸ್ಥಳದ ಸಮೀಪ ಹೋಗಿ ಗಲಾಟೆ ಶುರು ಮಾಡಿದ್ದಾರೆ. ಗಡಿಭಾಗಗಳಲ್ಲಿ ರೈತರು ಪ್ರತಿಭಟನೆ ಮಾಡಲು ಅವಕಾಶ ನೀಡಲಾಗಿತ್ತು. ಇದಕ್ಕೆ ಕೆಲವೊಂದು ಷರತ್ತು ವಿಧಿಸಲಾಗಿತ್ತು. ಆದರೆ ಇದನ್ನು ಮೀರಿ ರೈತರು ಕೆಲವು ಗಡಿಗಳಲ್ಲಿ ಬ್ಯಾರಿಕೇಡ್‌ ಮುರಿಯುವ ಯತ್ನ ಮಾಡುತ್ತಿದ್ದಾರೆ.
ಇದು ಒಂದೆಡೆಯಾದರೆ, ಪಂಜಾಬ್‌ ರೈತನೊಬ್ಬ ಇದೀಗ ಭಾರಿ ಗಮನ ಸೆಳೆದಿದ್ದಾರೆ. ಇದಕ್ಕೆ ಕಾರಣ, ಪಂಜಾಬ್‌ನಿಂದ ದೆಹಲಿಯವರೆಗೆ (ಸುಮಾರು 375 ಕಿಲೋಮೀಟರ್‌) ರೀವರ್ಸ್‌ ಗೇರ್‌ ಹಾಕಿಕೊಂಡು ಬಂದಿದ್ದಾರೆ. ಈ ಮೂಲಕ ವಿನೂತನ ರೀತಿಯಲ್ಲಿ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
A farmer drove his tractor from Punjab to Delhi in reverse gear.He said@narendramodishould also reverse (repeal) the anti-farmer laws.#BharatKaregaDelhiKoochpic.twitter.com/a0ESH9Zt9y
— Tractor2ਟਵਿੱਟਰ (@Tractor2twitr)January 24, 2021

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗುತ್ತಿದೆ. ಅಷ್ಟಕ್ಕೂ ಈ ರೀತಿಯ ಪ್ರತಿಭಟನೆ ಏಕೆ ಎಂದು ಆ ರೈತನನ್ನು ಕೇಳಿದರೆ, ನಾನು ಹಿಮ್ಮುಖವಾಗಿ ಟ್ರ್ಯಾಕ್ಟರ್‌ ಚಲಾಯಿಸಿಕೊಂಡು ಬಂದಂತೆ, ಕೃಷಿ ಕಾಯ್ದೆಗಳನ್ನೂ ಹಿಂದಕ್ಕೆ ಪಡೆಯಿರಿ ಎನ್ನುವ ಸಂದೇಶ ಎಂದಿದ್ದಾರೆ!
ಈ ವಿಡಿಯೋಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಈಗಲಾದರೂ ಕೃಷಿ ಕಾಯ್ದೆ ಹಿಂದಕ್ಕೆ ಪಡೆಯಿರಿ ಎಂದು ಹೇಳಿದರೆ, ಹೆಚ್ಚಿನವರು ಈ ಕಾಯ್ದೆಯ ಬಗ್ಗೆ ಅರಿತುಕೊಳ್ಳದೇ ಈ ರೀತಿ ನಿರ್ಧಾರಕ್ಕೆ ಬರಬೇಡಿ, ಕೆಲವರು ಬೇಕಂತಲೇ ರೈತರ ಹಾದಿ ತಪ್ಪಿಸುತ್ತಿದ್ದಾರೆ. ಹಿಮ್ಮುಖವಾಗಿ ಗಾಡಿ ಚಲಾಯಿಸಿಕೊಂಡು ಹೋಗುವುದು ಎಷ್ಟು ಅಪಾಯವೋ, ಈ ಕೃಷಿ ಕಾಯ್ದೆಯನ್ನು ಹಿಂದಕ್ಕೆ ಪಡೆದರೆ ರೈತರಿಗೂ ಅಷ್ಟೇ ಅಪಾಯ ಎಂದೆಲ್ಲಾ ಕಮೆಂಟ್‌ ಮಾಡಿದ್ದಾರೆ.
ಇತಿಹಾಸದಲ್ಲಿಯೇ ಮೊದಲ ಬಾರಿಗೆ ಪ್ರತಿಭಟನಾ‌ ಪರೇಡ್‌: ಪ್ರತಿ ಹಳ್ಳಿಯಿಂದಲೂ ಟ್ರ್ಯಾಕ್ಟರ್‌

ಬಿಗಿ ಬಂದೋಬಸ್ತ್‌ ನಡುವೆ ಇಂದು ಗಣರಾಜ್ಯೋತ್ಸವ- ಶುಭ ಕೋರಿದ ರಾಷ್ಟ್ರಪತಿ, ಪ್ರಧಾನಿ

ಅತ್ತ ಗಣರಾಜ್ಯೋತ್ಸವ ಪರೇಡ್‌- ಇತ್ತ ಒಪ್ಪಂದ ಮೀರಿ ಬ್ಯಾರಿಕೇಡ್‌ ಮುರಿಯುತ್ತಿರುವ ರೈತರು

ಮೈ ಕೊರೆಯುವ ಚಳಿಯ ನಡುವೆಯೇ 16 ಸಾವಿರ ಅಡಿಯೇರಿ ಧ್ವಜ ಹಾರಿಸಿದ ವೀರ ಯೋಧರು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × 5 =
Remember me
