ಅಮೃತಸರ:ಪಾಕಿಸ್ತಾನದ ಯುವಕನೊಬ್ಬ ಆನ್‌ಲೈನ್‌ನಲ್ಲಿ ರಾಜಸ್ಥಾನ ಮೂಲಕ ವಿವಾಹಿತ ಮಹಿಳೆಯೊಬ್ಬಳನ್ನು ಪ್ರೀತಿಯ ಜಾಲಕ್ಕೆ ಬೀಳಿಸಿಕೊಂಡಿರುವ ಘಟನೆ ನಡೆದಿದೆ. ಆನ್‌ಲೈನ್‌ನಲ್ಲಿ ಲುಡೋ ಆಡುವಾಗ ವಿವಾಹಿತೆಯಾಗಿ ಒಂದು ಮಗುವಿನ ತಾಯಿಯಾಗಿರುವ ಮಹಿಳೆಯೊಬ್ಬಳನ್ನು ಪ್ರೇಮದ ಜಾಲಕ್ಕೆ ಬೀಳಿಸಿರುವ ಘಟನೆ ಇದಾಗಿದೆ!
ನಂತರ ತನ್ನ ಪ್ರಿಯಕರನಿಗಾಗಿ ಭಾರತದ ಗಡಿದಾಟುವಾಗಿ ಈ ‘ಅಮ್ಮ’ ಸಿಕ್ಕಿಬಿದ್ದಿದ್ದಾಳೆ. ಆಗಿದ್ದೇನೆಂದರೆ 25 ವರ್ಷದ ಈ ವಿವಾಹಿತೆಗೆ ಲುಡೋ ಆಡುವಾಗ ಪಾಕಿಸ್ತಾನದ ಯುವಕ ಎಂದುಕೊಂಡಿರುವ ವ್ಯಕ್ತಿಯ ಪರಿಚಯವಾಗಿದೆ. ಈ ಪರಿಚಯ ಸ್ನೇಹ, ಕೊನೆಗೆ ಪ್ರೇಮಕ್ಕೆ ತಿರುಗಿದೆ. ಫೇಸ್‌ಬುಕ್ ಮತ್ತು ವಾಟ್ಸ್​ ಆ್ಯಪ್​​ನಲ್ಲಿ ಸಂಪರ್ಕ ಹೊಂದಿದ್ದು, ಪ್ರೀತಿಯಲ್ಲಿ ಬಿದ್ದಿದ್ದರು.
ಪ್ರೇಮಕ್ಕೆ ಕಣ್ಣಿಲ್ಲ ಎನ್ನುವಂತೆ, ಆ ಪಾಕಿಸ್ತಾನದವ ಎಂಥವನು, ಅವನು ಯಾರು? ನಿಜಕ್ಕೂ ಅವನು ತನ್ನನ್ನು ಪ್ರೀತಿಸುತ್ತಿದ್ದಾನೆಯೇ ಅಥವಾ ಇವೆಲ್ಲವೂ ಮೋಸದ ಜಾಲವೇ ಎಂಬುದನ್ನು ಕೂಡ ಯೋಚನೆ ಮಾಡದ ಈ ಪುಟ್ಟ ಮಗುವಿನ ಅಮ್ಮ, ಆತನಿಗಾಗಿ ತನ್ನ ಗಂಡ, ಮಗುವನ್ನು ಬಿಟ್ಟು ಹೋಗಲು ರೆಡಿಯಾಗಿದ್ದಾಳೆ! ನಂತರ ಮನೆಯಲ್ಲಿ ಯಾರಿಗೂ ಗೊತ್ತಿಲ್ಲದ್ದಂತೆ ಕದ್ದುಮುಚ್ಚಿ ಮನೆಯಿಂದ ಓಡಿಹೋಗಿದ್ದಾಳೆ.
ವಾಘಾ ಗಡಿ ದಾಟುತ್ತಿದ್ದ ವಿವಾಹಿತ ಮಹಿಳೆಯನ್ನು ಅಮೃತಸರ ಪೊಲೀಸರು ಬಂಧಿಸಿದ್ದಾರೆ. ಈಕೆ ತನ್ನ ಮನೆಯಿಂದ ವಾಘಾ ಗಡಿಯತ್ತ ಆಟೋದಲ್ಲಿ ಹೋಗಿದ್ದಳು. ಅದನ್ನು ಹೇಳಿದ್ದು ಕೂಡ ಪಾಕಿಸ್ತಾನದ ಆ ಯುವಕನೇ. ಮಹಿಳೆಯನ್ನು ವಾಘಾ ಗಡಿಯಲ್ಲಿ ಡ್ರಾಪ್ ಮಾಡುವಂತೆ ಆಟೋ ಚಾಲಕನಿಗೆ ಆತ ಹೇಳಿದ್ದಾನೆ.
ಪಾಕಿಸ್ತಾನದ ವ್ಯಕ್ತಿಯಿಂದ ಯಾವಾಗ ಕರೆ ಬಂತೋ ಆಟೋ ಚಾಲಕನಿಗೆ ಅನುಮಾನ ಬಂದಿದೆ. ಇದರಲ್ಲಿ ಏನೋ ಕುತಂತ್ರ ಇರುವುದು ತಿಳಿದಿದೆ. ಕೂಡಲೇ ಆತ ಪೊಲೀಸರಿಗೆ ವಿಷಯ ತಿಳಿಸಿದ್ದಾನೆ. ಕಾರ್ಯಪ್ರವೃತ್ತರಾದ ಅಮೃತಸರ ಪೊಲೀಸರು ಮಹಿಳೆಯನ್ನು ವಿಚಾರಿಸಿದಾಗ ಆ ಯುವಕನ ಬಗ್ಗೆ ವಿವರಿಸಿದ ಆಕೆ, ಆತ ನನ್ನನ್ನು ಪಾಕಿಸ್ತಾನಕ್ಕೆ ಆಹ್ವಾನಿಸಿದ್ದ. ನಾನು ಅಲ್ಲಿಗೆ ಹೇಗೆ ಬರಬಹುದು ಎಂದು ಕೇಳಿದಾಗ, ಅವರು ನನಗೆ ವಾಘಾ ಗಡಿಗೆ ಬರಲು ಹೇಳಿದ್ದ. ನನ್ನನ್ನು ಅಲ್ಲಿಯೇ ಇಟ್ಟುಕೊಳ್ಳುವುದಾಗಿ ಹೇಳಿದ್ದ’ ಎಂದಿದ್ದಾಳೆ ಈಕೆ. ಸದ್ಯ ಗಡಿ ದಾಟುತ್ತಿದ್ದ ಮಹಿಳೆಯನ್ನು ವಿಚಾರಣೆಗೆ ಕರೆದೊಯ್ಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮುಸ್ಲಿಂ ಯುವತಿಯರ ಮದುವೆಯಲ್ಲಿ ದಿಢೀರ್‌ ಏರಿಕೆ! ವಯಸ್ಸಿನ ಭಯಕ್ಕೆ ಮಕ್ಕಳ ನಿಖಾ ಮಾಡಲು ಮುಗಿಬಿದ್ದ ಪಾಲಕರು…

VIDEO: ಮಂಡ್ಯದಲ್ಲೊಂದು ಅಮಾನವೀಯ ಘಟನೆ- ಎಲ್ಲರೆದುರು ವಿದ್ಯಾರ್ಥಿನಿಯ ಬಟ್ಟೆ ಬಿಚ್ಚಿ ಕೂಡಿಹಾಕಿ ಥಳಿಸಿದ ಶಿಕ್ಷಕಿ!

ಬಂಜೆ ಎಂಬ ಚುಚ್ಚುಮಾತು ಕೇಳಿಕೇಳಿ ನೊಂದು ತವರು ಮನೆ ಸೇರಿ ಮಾಡಿದಳೊಂದು ಖತರ್ನಾಕ್‌ ಐಡಿಯಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × five =
Remember me
