ಪಟಿಯಾಲಾ (ಪಂಜಾಬ್​):19 ವರ್ಷಗಳಷ್ಟು ಹಳೆಯದಾದ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಪಂಜಾಬ್​ನ ಪ್ರಸಿದ್ಧ ಗಾಯಕ ದಲೇರ್ ಮೆಹಂದಿಯ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ಪಟಿಯಾಲ ಸೆಷನ್ಸ್ ಕೋರ್ಟ್​ ಎತ್ತಿಹಿಡಿದಿದೆ. 2018ರಲ್ಲಿ ಮ್ಯಾಜಿಸ್ಟ್ರೇಟ್​ ಕೋರ್ಟ್​ ವಿಧಿಸಿದ್ದ ಈ ಶಿಕ್ಷೆಯನ್ನು ಪ್ರಶ್ನಿಸಿ ದಲೇರ್​ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್​ ವಜಾ ಮಾಡಿದೆ.
ಕೋರ್ಟ್​ನಲ್ಲಿ ಹಾಜರು ಇದ್ದ ಮೆಹಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಜೈಲಿಗೆ ಅಟ್ಟಿದ್ದಾರೆ. 2003ರಲ್ಲಿ ದಲೇರ್ ಮೆಹಂದಿ ಮತ್ತು ಅವರ ಅಣ್ಣ ಶಂಷೇರ್ ಸಿಂಗ್ ವಿರುದ್ಧ ದಾಖಲಾಗಿದ್ದ ಒಟ್ಟೂ 31 ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ಶಿಕ್ಷೆ ವಿಧಿಸಲಾಗಿದೆ.
2003ರ ಸೆಪ್ಟೆಂಬರ್​ 19ರಂದು ದಾಖಲಾದ ದೂರಿನ ಅನ್ವಯ, ದಲೇರ್ ಮೆಹಂದಿ ಹಾಗೂ ಇವರ ಅಣ್ಣ ಶಂಷೇರ್ ತಮ್ಮ ‘ಪಿಜನ್​ ಮ್ಯೂಸಿಕ್ ಬ್ಯಾಂಡ್‌’ ತಂಡದ ಜನರು ಎಂದು ಹೇಳಿ ಅಕ್ರಮವಾಗಿ ಜನರನ್ನು ವಿದೇಶಕ್ಕೆ ಕರೆದುಕೊಂಡು ಹೋಗಿದ್ದರು. 1998 ಮತ್ತು 1999 ರಲ್ಲಿ ಎರಡು ತಂಡಗಳಲ್ಲಿ ಅಕ್ರಮವಾಗಿ ಜನರನ್ನು ಸಾಗಾಟ ಮಾಡಿದ್ದರು. ಇದಕ್ಕಾಗಿ ಅವರು ಭಾರೀ ಹಣವನ್ನೂ ಪಡೆದಿದ್ದರು. ಇದರ ದೂರು ದಾಖಲಾಗುತ್ತಿದ್ದಂತೆಯೇ ತನಿಖೆ ಕೈಗೊಂಡಿದ್ದ ಪೊಲೀಸರು ಇವರಿಬ್ಬರ ವಿರುದ್ಧ ಹಲವು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದರು.
ಹೀಗೆ ಅಕ್ರಮವಾಗಿ ಕರೆದುಕೊಂಡು ಹೋದ ಜನರ ಪೈಕಿ 10 ಮಂದಿಯನ್ನು ಅಮೆರಿಕದಲ್ಲಿ ಬಿಟ್ಟು ಬಂದಿದ್ದಾರೆ ಎಂದು ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಇದಾದ ಬಳಿಕ ಈ ಸಹೋದರರ ಒಂದೊಂದೇ ಅಕ್ರಮಗಳು ಬೆಳಕಿಗೆ ಬಂದಿದ್ದವು.
2018ರಲ್ಲಿ ಜ್ಯುಡಿಷಿಯಲ್ ಮೆಜಿಸ್ಟ್ರೇಟ್ ಕೋರ್ಟ್ ಇವರಿಬ್ಬರನ್ನು ದೋಷಿ ಎಂದು ಹೇಳಿ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದಾದ ನಂತರ ಜಾಮೀನು ಪಡೆದು ಹೊರಬಂದ ಸಹೋದರರು ಈ ಆದೇಶವನ್ನು ಸೆಷನ್ಸ್ ಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಇದೀಗ ನ್ಯಾಯಾಧೀಶ ಎಚ್.ಎಸ್ ಗ್ರೆವಾಲ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಶಿಕ್ಷೆಯನ್ನು ಎತ್ತಿಹಿಡಿದಿದ್ದಾರೆ.
VIDEO: ‘ನೀನು ಸಿನಿಮಾಕ್ಕೆ ಸೆಲೆಕ್ಟ್​ ಆಗ್ಲಿಲ್ಲ, ಆದ್ರೆ ನನ್​ ಹೆಂಡ್ತಿ ಥರ ಇದ್ರೆ ತಿಂಗಳಿಗೆ 25 ಲಕ್ಷ ಕೊಡುವೆ ಅಂದಿದ್ದ ಉದ್ಯಮಿ!’

ಮಾಡೆಲ್​ನಂತಾಗಲು 4.5 ಕೋಟಿ ರೂ. ಖರ್ಚು ಮಾಡಿದಳು- ಮೊದಲಿನಂತಾಗಲು ಮತ್ತೆ ಸರ್ಜರಿ ಮಾಡಿಸಿದಳು!

ರಾಜಕೀಯ ನಾಯಕರ ತಲೆಬಿಸಿ ಮಾಡಿದ ಹೊಸ ಕೈಪಿಡಿ: ಇನ್ಮುಂದೆ ಬಾಯಿ ಬಿಡೋ ಹಾಗೇ ಇಲ್ಲ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 6 =
Remember me
