ಹರ್ಡಾ (ಮಧ್ಯಪ್ರದೇಶ):ಮಧ್ಯಪ್ರದೇಶದ ಹರ್ಡಾದ ರೈಲ್ವೆ ನಿಲ್ದಾಣದಲ್ಲಿ ಟವರ್ ವ್ಯಾಗನ್‌ನಲ್ಲಿ (ಎಲೆಕ್ಟ್ರಿಕ್ ಲೋಕೋಮೋಟಿವ್‌ಗಳಿಗೆ ಶಕ್ತಿ ತುಂಬುವ ಕೇಬಲ್‌ಗಳನ್ನು ಪರೀಕ್ಷಿಸಲು ಬಳಸುವ ಸ್ವಯಂ-ಚಾಲಿತ ಘಟಕ) ತಾಂತ್ರಿಕ ದೋಷ ಉಂಟಾದ ಹಿನ್ನೆಲೆಯಲ್ಲಿ ಜನರು ರೈಲನ್ನು ತಳ್ಳಿಕೊಂಡು ಹೋಗಿರುವ ಘಟನೆ ನಡೆದಿದೆ.ಈ ಟ್ರ್ಯಾಕ್‌ ಬಳಿ ದುರಸ್ತಿ ಕಾರ್ಯ ನಡೆಯುತ್ತಿತ್ತು. ಆದ್ದರಿಂದ ಟವರ್‌ ವ್ಯಾಗನ್‌ ನಿಂತಿತ್ತು. ಅದರಲ್ಲಿ ತಾಂತ್ರಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಅದು ಚಲಿಸಲು ಸಾಧ್ಯವಾಗಲಿಲ್ಲ. ಈ ರೈಲಿನ ಬೆನ್ನಲ್ಲೇ ಇದೇ ಟ್ರ್ಯಾಕ್‌ ಮೇಲೆ ಇಟಾರಸಿಯಿಂದ ಪವನ್‌ ಎಕ್ಸ್‌ಪ್ರೆಸ್‌ ರೈಲು ಬರುತ್ತಿತ್ತು. ಅದನ್ನು ದೂರವೇ ನಿಲ್ಲಿಸಲಾಗಿತ್ತು. ಅದರೆ ಈ ರೈಲು ಮುಂದೆ ಸಾಗದ ಕಾರಣ, ರೈಲು ಸಂಚಾರದಲ್ಲಿ ಅಡಚಣೆ ಉಂಟಾಗಿ ಜನರೇ ರೈಲನ್ನು ತಳ್ಳಿಕೊಂಡು ಹೋಗುವಂತಾಯಿತು.ಸಾಮಾನ್ಯವಾಗಿ ಇಂಥ ಸಮಸ್ಯೆ ಎದುರಾದಾಗ ಯಂತ್ರಗಳ ಸಹಾಯದಿಂದ ರೈಲು ಚಲಿಸುವಂತೆ ಮಾಡಲಾಗುತ್ತದೆ. ಆದರೆ ಈ ಘಟನೆಯಲ್ಲಿ ಅದು ಆರಂಭದಲ್ಲಿ ಸಾಧ್ಯವಾಗದ ಕಾರಣ, ಜನರೇ ರೈಲನ್ನು ತಳ್ಳಿಕೊಂಡು ಹೋಗಿದ್ದಾರೆ. ನಂತರ ಅದನ್ನು ಸರಿಪಡಿಸಲಾಗಿದೆ.ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದ್ದು, ಹಲವಾರು ಮಂದಿ ಕಮೆಂಟ್‌ ಮಾಡುತ್ತಿದ್ದಾರೆ.ನೀವೂ ನೋಡಿ ವಿಡಿಯೋ:
A technical fault with a tower wagon at Harda led to a heartbreaking sight – people forced to manually push the wagon from the main line to another track@ndtv@ndtvindiapic.twitter.com/WQTO0xhfEx— Anurag Dwary (@Anurag_Dwary)August 29, 2021
A technical fault with a tower wagon at Harda led to a heartbreaking sight – people forced to manually push the wagon from the main line to another track@ndtv@ndtvindiapic.twitter.com/WQTO0xhfEx
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − four =
Remember me
