ರಷ್ಯಾ:ಯೂಕ್ರೇನ್​ ಮೇಲೆ ದಾಳಿ ಮಾಡಿದ ನಂತರ ಹಲವರ ಕೆಂಗಣ್ಣಿಗೆ ಗುರಿಯಾಗಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ (69) ಅವರ ಆರೋಗ್ಯದ ಕುರಿತಂತೆ ಇದಾಗಲೇ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಇತ್ತೀಚೆಗಷ್ಟೇ ತಮ್ಮ ಸ್ನೇಹಿತೆಯಿಂದ ಮಗು ಪಡೆದಿರುವ ಪುತಿನ್​ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ, ರಷ್ಯಾದ ಗುಪ್ತಚರ ಇಲಾಖೆಯ ಅಧಿಕಾರಿಯೊಬ್ಬರು ನೀಡಿರುವ ಆತಂಕಕಾರಿ ವರದಿ!
‘ಇಂಡಿಪೆಂಡೆಂಟ್’ ತನ್ನ ವರದಿಯಲ್ಲಿ ಈ ಅಂಶವನ್ನು ಬಹಿರಂಗಪಡಿಸಿದೆ. ಇಂಗ್ಲೆಂಡ್​ನಲ್ಲಿ ವಾಸಿಸುತ್ತಿರುವ ರಷ್ಯಾದ ಮಾಜಿ ಗೂಢಚಾರ ಬೋರಿಸ್ ಕಾರ್ಪಿಚ್‌ಕಾವ್‌ ಅವರಿಗೆ ರಷ್ಯನ್ ಫೆಡರಲ್ ಸೆಕ್ಯುರಿಟಿ ಸರ್ವಿಸ್​ನ ಅಧಿಕಾರಿ ಅಧಿಕಾರಿ ಪುತಿನ್​ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಅಧಿಕಾರಿ ತಿಳಿಸಿರುವುದು ಏನೆಂದರೆ ಪುತಿನ್​ ಅವರಿಗೆ ಕ್ಯಾನ್ಸರ್ ಇದೆ. ಇವರು ಬದುಕೋದು ಮೂರೇ ವರ್ಷ. ಇವರ ಸದ್ಯದ ಆರೋಗ್ಯ ಪರಿಸ್ಥಿತಿ ನೋಡಿದರೆ ಇದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಏಕೆಂದರೆ ಪುತಿನ್​ ದೃಷ್ಟಿ ಕಳೆದುಕೊಳ್ಳುತ್ತಿದ್ದಾರೆ. ತೀವ್ರ ತಲೆನೋವಿನಿಂದ ಬಳಲುತ್ತಿರುವ ಅವರು, ಎಷ್ಟೇ ದೊಡ್ಡ ಅಕ್ಷರಗಳು ಇದ್ದರೂ ಓದಲು ಹೆಣಗಾಡುತ್ತಿದ್ದಾರೆ. ಟಿ.ವಿಯಲ್ಲಿ ನಡೆದ ಸಂದರ್ಶನದ ಸಮಯದಲ್ಲಿ ಇದು ಸ್ಪಷ್ಟವಾಗಿ ಗೋಚರಿಸಿದೆ ಎಂದಿದ್ದಾರೆ.
ಆದರೆ ಈ ಮಾಹಿತಿಯನ್ನು ರಷ್ಯಾದ ವಿದೇಶಾಂಗ ಸಚಿವ ಲಾವ್ರೊವ್ ತಳ್ಳಿಹಾಕಿದ್ದಾರೆ. ಈ ರೀತಿ ಯಾವುದೇ ಸಮಸ್ಯೆ ಪುತಿನ್​ ಅವರಿಗೆ ಇಲ್ಲ ಎಂದಿದ್ದಾರೆ.
35 ರೂ.ಗಾಗಿ ಐದು ವರ್ಷ, 2 ರೂ.ಗಾಗಿ ಮೂರು ವರ್ಷ ಏಕಾಂಗಿ ಹೋರಾಟ: ಲಾಭ ಪಡೆದದ್ದು 3 ಲಕ್ಷ ಜನ!

100 ಮಂದಿಗೆ ತಲಾ 13 ಕೋಟಿ ನೀಡಿದ ಎಚ್‌ಡಿಎಫ್‌ಸಿ ಬ್ಯಾಂಕ್‌! ಅಕೌಂಟ್ ಬ್ಯಾಲೆನ್ಸ್‌ ನೋಡಿ ಸುಸ್ತಾದ ಗ್ರಾಹಕರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 15 =
Remember me
