ಪುರಿ:ಟೋಕಿಯೊದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್​ನಲ್ಲಿ ಬ್ಯಾಂಡ್ಮಿಂಟನ್‌ ಆಟಗಾರ್ತಿ ಪಿ.ವಿ. ಸಿಂಧು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡು ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ.ಅವರನ್ನು ವಿಶೇಷವಾಗಿ ಅಭಿನಂದಿಸಿರುವ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಸಿಂಧು ಅವರ ಕಲಾಕೃತಿಯನ್ನು ಮರಳಿನಿಂದ ರಚಿಸಿದ್ದಾರೆ.
ಒಡಿಶಾದ ಕಡಲತೀರದಲ್ಲಿ ಮರಳಿನಲ್ಲಿ ಸಿಂಧು ಹಾಗೂ ಅವರ ಕಂಚಿನ ಪದಕವನ್ನು ಹೊಂದಿರುವ ಕಲಾಕೃತಿಯನ್ನು ಪಟ್ನಾಯಕ್ ಅವರು ರಚಿಸಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಚಿತ್ರಕ್ಕೆ ಕಲಾವಿದ ಪಟ್ನಾಯಕ್‌, ‘ನಿಮ್ಮ ಅದ್ಭುತ ಪ್ರದರ್ಶನದಿಂದ ಇಡೀ ದೇಶವನ್ನು ಹೆಮ್ಮೆಪಡುವಂತೆ ಮಾಡಿದ್ದೀರಿ’ ಎಂದು ಬರೆದಿದ್ದಾರೆ.
ಸೆಮಿ ಫೈನಲ್‌ನಲ್ಲಿ ಚಿನ್ನದ ಪದಕದ ಕನಸು ನುಚ್ಚುನೂರಾಗುತ್ತಿದ್ದಂತೆಯೇ ಸಿಂಧು ಅವರು ಕಂಚಿನ ಪದಕಕ್ಕಾಗಿ ಭಾರಿ ಸಾಹಸ ಪಟ್ಟಿದ್ದರು. ನಂತರ ಚೀನಾದ ಹೀ ಬಿಂಗ್ ಜಿಯಾವೋ ವಿರುದ್ಧ 21-13, 21-15 ನೇರ ಗೇಮ್‌ಗಳಲ್ಲಿ ಗೆಲುವು ದಾಖಲಿಸಿ ಕಂಚನ್ನು ಗೆದ್ದರು.
ಒಲಿಂಪಿಕ್ಸ್‌ಗೆ ತೆರಳುವ ಮುನ್ನ ಪ್ರಧಾನಿ ಮಾಡಿದ್ರು ಪ್ರಾಮಿಸ್‌: ಐಸ್‌ಕ್ರೀಂ ತಿನ್ನಲು ಉತ್ಸುಕರಾದ ಸಿಂಧು

ಡಿವೋರ್ಸ್‌ ಪಡೆದ ಪತ್ನಿ ಜತೆ ಕಾಶ್ಮೀರಕ್ಕೆ ಹೋದ ಆಮೀರ್‌: ಕುತೂಹಲದ ಮೂಡಿಸಿದ ರಾಜ್ಯಪಾಲರ ಭೇಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
