ಮುಂಬೈ:ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್​ನಲ್ಲಿ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಈ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಮಹಿಳೆಯರ ಸಿಂಗಲ್ಸ್​ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಅವರದ್ದು. ಆದರೆ ಈ ಚಿನ್ನದ ಪದಕಕ್ಕಾಗಿ ಅವರು ಪಟ್ಟ ನೋವು ಅಷ್ಟಿಷ್ಟಲ್ಲ. ಏಕೆಂದರೆ ಚಿನ್ನ ಗೆಲ್ಲುವ ಸಮಯದಲ್ಲಿ ಅವರು ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದರು. ಈ ನೋವಿನ ನಡುವೆಯೇ ಅವರು, ಕೆನಡಾದ ಮಿಚೆಲ್ ಲಿ ಅವರನ್ನು 21-15, 21-13 ಸೆಟ್‌ಗಳಿಂದ ಸೋಲಿಸಿ ಪದಕ ಮುಡಿಲಿಗೇರಿಸಿಕೊಂಡರು.
ಮಹಿಳಾ ಸಿಂಗಲ್ಸ್‌ನ ಸೆಮಿಫೈನಲ್ ಪಂದ್ಯದ ವೇಳೆ ಸಿಂಧು ಗಾಯಕ್ಕೆ ಒಳಗಾಗಿದ್ದರು. ಇದರ ಹೊರತಾಗಿಯೂ, ಅವರು ಕಠಿಣ ಪಂದ್ಯದಲ್ಲಿ ಗೆಲುವ ಸಾಧಿಸಿದ್ದು ಮಾತ್ರವಲ್ಲದೇ ಆಗಸ್ಟ್ 8 ರಂದು ನಡೆದ ಫೈನಲ್‌ನಲ್ಲಿ ಗಾಯದ ನೋವನ್ನು ಸಹಿಸಿಕೊಂಡು ತನಗೆ ಮತ್ತು ದೇಶಕ್ಕೆ ಸ್ಮರಣೀಯ ಚಿನ್ನದ ಪದಕವನ್ನು ಗೆಲ್ಲಿಸಿ ಕೊಟ್ಟಿದ್ದಾರೆ.
ಆದರೆ ಈ ಗಾಯ ಅವರ ಇನ್ನೊಂದು ದೊಡ್ಡ ಕನಸನ್ನು ಕಸಿದುಕೊಂಡು ಬಿಟ್ಟಿದೆ. ಗಾಯ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಈ ತಿಂಗಳು ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ನಿಂದ ಅವರು ಹಿಂದೆ ಸರಿದಿದ್ದಾರೆ. ಜಪಾನ್‌ನ ರಾಜಧಾನಿ ಟೋಕಿಯೊದಲ್ಲಿ ಆಗಸ್ಟ್ 22 ರಿಂದ ಆಗಸ್ಟ್ 28ರ ವರೆಗೆ ನಡೆಯಲಿದ್ದು, ಇದರಲ್ಲಿ ಆಡಲು ಸಿಂಧುಗೆ ಸಾಧ್ಯವಾಗುತ್ತಿಲ್ಲ.
ಏಕೆಂದರೆ, ಸಿಂಧು ಅವರ ಎಡ ಹಿಮ್ಮಡಿಯಲ್ಲಿ ಮೂಳೆ ಮುರಿತವಾಗಿದೆ. ಇದರಿಂದ ಕನಿಷ್ಠ ಇನ್ನು ಎರಡು ತಿಂಗಳು ವಿಶ್ರಾಂತಿ ಹೇಳಲಾಗಿದೆ. ಹೀಗಾಗಿ ಅವರು ಅಕ್ಟೋಬರ್​ವರೆಗೆ ವಿಶ್ರಾಂತಿ ಪಡೆಯುವುದು ಅನಿವಾರ್ಯವಾಗಿದೆ.
2019 ರಲ್ಲಿ, ಸಿಂಧು ಮಹಿಳಾ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದು, ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಸಿಂಧು 2013 ರಿಂದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುತ್ತಿದ್ದು, ಇದುವರೆಗೆ ಅವರು ಒಂದು ಚಿನ್ನ ಸೇರಿದಂತೆ ಒಟ್ಟು 5 ಪದಕಗಳನ್ನು ಗೆದ್ದಿದ್ದಾರೆ(ಏಜೆನ್ಸೀಸ್​)
ನಸುಕಿನಲ್ಲಿ ಭೀಕರ ಕಾರು ಅಪಘಾತ: ಮಾಜಿ ಸಚಿವ ವಿನಾಯಕ್​ ಮೇಟೆ ನಿಧನ- ಭದ್ರತಾ ಸಿಬ್ಬಂದಿಗೆ ಗಾಯ

ರಾಖಿ ಕಟ್ಟಿದ ತಂಗಿಗೆ ಗಿಫ್ಟ್​ ತರಲು ಹೋದವ ಮರಳಿದ್ದು ಶವವಾಗಿ: ಸ್ನೇಹಿತನಿಂದಲೇ ನಡೆಯಿತು ಘೋರ ಕೃತ್ಯ

ಬಿಜೆಪಿ ನಾಯಕಿ ನೂಪುರ್​ ಶರ್ಮಾ ಹತ್ಯೆಗೆ ನಿಯೋಜನೆಗೊಂಡಿದ್ದ ಉಗ್ರ ಅರೆಸ್ಟ್​: ಈತನದ್ದು ಭಯಾನಕ ಹಿಸ್ಟರಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − two =
Remember me
