ನವದೆಹಲಿ: 1942 ರಲ್ಲಿ ಬ್ರಿಟಿಷರನ್ನು ಭಾರತದಿಂದ ಓಡಿಸುವ ಸಲುವಾಗಿ ‘ಕ್ವಿಟ್‌ ಇಂಡಿಯಾ’ ಚಳವಳಿ ನಡೆದಿತ್ತು. ಆದರೆ ನಾಡಿದ್ದು ಅಂದೆ ಇದೇ 9ರಂದು ಮತ್ತೊಮ್ಮೆ ಇಂಥದ್ದೇ ಆಂದೋಲನ ಶುರುವಾಗಲಿದೆ. ಆದರೆ ಇದು ಬ್ರಿಟಿಷರನ್ನು ಓಡಿಸಲು ಅಲ್ಲ, ಬದಲಿಗೆ ಚೀನಾದ ವಸ್ತುಗಳನ್ನು ದೇಶದಿಂದ ಓಡಿಸಲು!
ಹೌದು. ದೇಶದ ಉದ್ಯಮಿಗಳ ಸಂಘಟನೆಯಾದ ಅಖಿಲ ಭಾರತ ಉದ್ಯಮಿಗಳ ಕಾನ್ಫಿಡರೇಷನ್‌ ಸಂಘಟನೆ (ಸಿಎಐಟಿ) ‘ಚೀನಾ ಕ್ವಿಟ್‌ ಇಂಡಿಯಾ’ ಚಳವಳಿಯನ್ನು ನಡೆಸಲಿದ್ದು, ಅಂದು ದೇಶಾದ್ಯಂತ ಚೀನಿ ವಸ್ತುಗಳ ಬಹಿಷ್ಕಾರವನ್ನು ಮಾಡಲು ಯೋಜನೆ ರೂಪಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ‘ಚೀನಾ ಕ್ವಿಟ್‌ ಇಂಡಿಯಾ’ ಆಂದೋಲನಕ್ಕೆ ಕರೆ ನೀಡಿದೆ.
ಚೀನಾದ ರಾಖಿಯನ್ನು ಬಹಿಷ್ಕರಿಸುವ ಮೂಲಕ ಚೀನಾಕ್ಕೆ ಸುಮಾರು ನಾಲ್ಕು ಸಾವಿರ ಕೋಟಿ ರೂಪಾಯಿಗಳ ನಷ್ಟವನ್ನು ಮಾಡಿರುವ ಬೆನ್ನಲ್ಲೇ, ಈ ಆಂದೋಲನದ ಮೂಲಕ ಮತ್ತಷ್ಟು ಹೊಡೆತವನ್ನು ಕೊಡಲು ನಾವು ತಯಾರಾಗಿದ್ದೇವೆ ಎಂದು ಸಿಎಐಟಿ ಹೇಳಿದೆ.
ಗಲ್ವಾನ್‌ ಗಡಿ ಬಿಕ್ಕಟ್ಟು ಬಳಿಕ ದೇಶಾದ್ಯಂತ ಚೀನೀ ವಸ್ತುಗಳಿಗೆ ಬಹಿಷ್ಕಾರದ ಕೂಗು ಜೋರಾಗಿರುವ ಮುಂದಿನ ಭಾಗವಾಗಿ ಇಂಥದ್ದೊಂದು ಆಂದೋಲನ ನಡೆಸಲು ತಯಾರಾಗಿದ್ದೇವೆ. ದೇಶಾದ್ಯಂತ 40 ಸಾವಿರ ಉದ್ಯಮಿಗಳ ಸಂಘಟನೆಗಳನ್ನು ಒಳಗೊಂಡಿರುವ ಸಿಎಐಟಿಯ ನೇತೃತ್ವದಲ್ಲಿ ಭಾರತದ ಸರಕುಗಳು ನಮ್ಮ ಹೆಮ್ಮೆ ಎಂಬ ಅಭಿಯಾನದ ಭಾಗವಾಗಿ ದೇಶದ 600 ನಗರಗಳಲ್ಲಿ ಆಗಸ್ಟ್‌ 9ರಂದು ‘ಚೀನಾ ಕ್ವಿಟ್‌ ಇಂಡಿಯಾ’ ಆಂದೋಲನದ ಆಚರಣೆ ನಡೆಸುವುದಾಗಿ ಸಿಎಐಟಿ ಹೇಳಿದೆ.
ಇದನ್ನೂ ಓದಿ:ಚೀನಾದಿಂದ ಕೊನೆಗೂ ಭಾರತಕ್ಕೆ ಮರಳಲಿದ್ದಾರೆ 233 ಭಾರತೀಯರು
ಈ ಸಂದರ್ಭದಲ್ಲಿ ತತ್‌ಕ್ಷಣವೇ ದೇಶದ 5ಜಿ ನೆಟ್‌ವರ್ಕ್ ಯೋಜನೆಯಡಿ ಚೀನಾದ ಕಂಪನಿ ಹುವಾಯ್‌ ಮೇಲೆ ನಿಷೇಧ, ದೇಶದ ಸ್ಟಾರ್ಟಪ್‌ಗಳಲ್ಲಿ ಚೀನೀ ಕಂಪೆನಿಗಳ ಹೂಡಿಕೆ ಹಿಂತೆಗೆತಕ್ಕೆ ಸರ್ಕಾರ ಕ್ರಮ ವಹಿಸಬೇಕು. ಅಲ್ಲದೆ, ಭಾರತದ ಉದ್ಯಮಿಗಳಿಗೆ ಆರ್ಥಿಕ ನೆರವು ಕಲ್ಪಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಗುತ್ತದೆ ಎಂದು ಸಿಎಐಟಿಯ ಎನ್‌ಸಿಆರ್‌ ಘಟಕದ ಅಧ್ಯಕ್ಷ ಸುಶೀಲ್‌ ಕುಮಾರ್‌ ಜೈನ್‌ ಹೇಳಿದ್ದಾರೆ.
ಸ್ಮಗ್ಲಿಂಗ್‌ ರಾಣಿಗೂ ಕೇರಳ ಸಿಎಂಗೂ ಇದೆ ಲಿಂಕ್‌: ತನಿಖೆಯಿಂದ ಬಯಲಾಯ್ತು ಸತ್ಯ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 + seventeen =
Remember me
