ವಾಷಿಂಗ್ಟನ್:ಬಾಹ್ಯಾಕಾಶದತ್ತ ವಿಜ್ಞಾನಿಗಳು ದೃಷ್ಟಿ ಹರಿಸಿ ಅದೆಷ್ಟೋ ವರ್ಷಗಳಾಗಿ ಹೋಗಿವೆ. ಮಂಗಳ, ಚಂದ್ರ ಸೇರಿದಂತೆ ಕೆಲವು ಗ್ರಹಗಳನ್ನು ಜಾಲಾಡಿಯೂ ಆಗಿದೆ, ಕೆಲವು ಗ್ರಹಗಳಲ್ಲಿ ನೀರು ಗುರುತಿಸಿದ್ದಾರೆ, ಜೀವಿಗಳ ವಾಸ ಇರುವಿಕೆ ಪತ್ತೆ ಹಚ್ಚಿದ್ದಾರೆ. ಮನುಷ್ಯನ ವಾಸಯೋಗ್ಯವಾಗಲು ಏನೇನು ಬೇಕೋ ಎಲ್ಲವನ್ನೂ ಮಾಡುತ್ತಿದ್ದಾರೆ. ಆದರೂ ವಿಜ್ಞಾನಿಗಳಿಗೆ ತೃಪ್ತಿ ಇಲ್ಲ. ಕುತೂಹಲ ಎನ್ನುವಂಥ ಹೊಸ ಹೊಸ ಸಂಶೋಧನೆಗಳನ್ನು ಮಾಡುತ್ತಲೇ ಇದ್ದಾರೆ.
ಇದೀಗ ಇನ್ನೂ ಅಚ್ಚರಿ ಎನ್ನುವ ಸಂಶೋಧನೆಯನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮಾಡಿದೆ. ಅದೇನೆಂದರೆ ಬಾಹ್ಯಾಕಾಶದಲ್ಲಿ ಅತೀ ಕಡಿಮೆ ಗುರುತ್ವಾಕಷಣೆ ಅಡಿಯಲ್ಲಿ ಮೂಲಂಗಿಯನ್ನು ಬೆಳೆಯಲಾಗಿದೆ.
🌱 We have sprouts!🌱
Radish plants are pictured growing inside the Columbus laboratory module's Plant Habitat-02 aboard the@Space_Station. The radishes were sent up with the#Cygnusspacecraft that launched on the Antares rocket from Wallops. More info:https://t.co/UfaMeIvFcFpic.twitter.com/9jVOh9nFTf
— NASA Wallops (@NASA_Wallops)November 24, 2020

ಮೂಲಂಗಿ ಅತೀ ಕಡಿಮೆ ಅವಧಿಯಲ್ಲಿ ಫಲ ಕೊಡುತ್ತದೆ. ಅಲ್ಲದೆ ಬಾಹ್ಯಾಕಾಶದಲ್ಲಿ ಅಧ್ಯಯನ ಮಾಡುವ ಸಸ್ಯ ಥಳಿಗೆ ಮೂಲಂಗಿ ಹೋಲುತ್ತದೆ. ಹೆಚ್ಚು ಪೌಷ್ಟಿಕಾಂಶವನ್ನು ಹೊಂದಿದೆ. ಹೀಗಾಗಿ ಮೂಲಂಗಿ ಬೆಳೆ ಆಯ್ಕೆ ಮಾಡಿಕೊಳ್ಳಲಾಗಿದೆ. ಜತೆಗೆ ಮೂಲಂಗಿ ಹಸಿಯಾಗಿ ತಿನ್ನಲು ಯೋಗ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮೂಲಂಗಿಯನ್ನು ಬೆಳೆಯಲು ವಿಜ್ಞಾನಿಗಳು ಮುಂದಾಗಿದ್ದು, ಇದೀಗ ಯಶಸ್ವಿ ಪಡೆದಿದ್ದಾರೆ.
ಮೈಕ್ರೋಗ್ರಾವಿಟಿಯಡಿ ತರಕಾರಿಯನ್ನು ಬೆಳೆಯುವ ಪ್ರಯತ್ನಕ್ಕೆ ಇದು ಮುನ್ನುಡಿ ಬರೆದಂತಾಗಿದೆ. ಮೂಲಂಗಿ ಬೆಳೆಯು ಕಡಿಮೆ ಗುರುತ್ವಾಕರ್ಷಣೆಯ ವಾತಾವರಣದಲ್ಲಿಯೂ ಬೆಳೆಯಲು ಸಾಧ್ಯ ಎಂಬ ಸಂಪೂರ್ಣ ಅಧ್ಯಯನ ಕೈಗೊಂಡ ನಂತರ ಈ ನಿರ್ಧಾರಕ್ಕೆ ಬರಲಾಗಿತ್ತು. ಅದೀಗ ಫಲ ಕಂಡಿದೆ.
Today’s@Space_Stationradish harvest is complete! ☑️
NASA astronaut Kate Rubins prepped the radishes for their journey back to Earth, where scientists will analyze them. Astronauts will soon grow a second crop of the vegetables for even more science!pic.twitter.com/hUfUaoSn0I
— ISS Research (@ISS_Research)November 30, 2020

ಗುರುತ್ವಾಕರ್ಷಣೆ ಕಡಿಮೆ ಇರುವ ಹಿನ್ನೆಲೆ ಆ ಸ್ಥಳದಲ್ಲಿ ಗಿಡದ ಬುಡಗಳು ಮಣ್ಣನ್ನು ಹಿಡಿದಿಟ್ಟುಕೊಳ್ಳಲು ಆಗುವುದಿಲ್ಲ. ಹೀಗಾಗಿ ದಿಂಬುಗಳಲ್ಲಿ ಬೀಜಗಳನ್ನು ಹಾಕಿ ಬೆಳೆಯಲಾಗಿದೆ. ಗಿಡದ ಬುಡಕ್ಕೆ ನೀರು ಹಾಗೂ ಗೊಬ್ಬರ ಪೂರೈಕೆ ಮಾಡಲು ದಿಂಬನ್ನು ಬಳಸಲಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಭೂಮಿಯಿಂದ ಲಕ್ಷಾಂತರ ಮೈಲಿ ದೂರ ಅನ್ಯಗ್ರಹಗಳಿಗೆ ಹೊಗುವ ಗಗನಯಾನಿಗಳಿಗೆ ನಿಯಮಿತವಾಗಿ ತಾಜಾ ಆಹಾರ ಮೂಲ ಬೇಕಾಗಬಹುದು ಎಂಬ ಉದ್ದೇಶದಿಂದ ಈ ಪ್ರಯೋಗವನ್ನು ಮಾಡಿದೆ. ಬಾಹ್ಯಾಕಾಶದಲ್ಲಿ ಬೆಳೆದಿರುವ ಕಡುಗೆಂಪು ಬಣ್ಣದ ಮೂಲಂಗಿ ಕಟಾವಿಗೆ ಸಿದ್ಧವಾಗಿದೆ. ಇದರ ಸ್ಯಾಂಪಲ್‍ಗಳನ್ನು ಅಧ್ಯಯನಕ್ಕಾಗಿ ಭೂಮಿಗೆ ಕಳಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ಶಾಲೆಯಲ್ಲಿ ‘ಭೂತ’- ಬಡಿದುಕೊಳ್ಳುತ್ತಲೇ ಇದ್ದ ಬಾಗಿಲು: ಲಾಕ್​ ತೆಗೆದಾಗ ಏನಾಯ್ತು? ನೀವೇ ನೋಡಿ…

ಡಿವೋರ್ಸ್​ ಕೊಟ್ಟಿಲ್ಲ ಎಂದು ತಾಯಿಯನ್ನೇ ಕೊಲೆ ಮಾಡಿದ ಬಾಲಕ!

ಬಸ್ಸೊಳಗೆ ತೂರಿಬಂದ ಪೈಪ್​​- ಶಿಶು ಎತ್ತಿಕೊಂಡಿದ್ದ ಯುವತಿಯ ರುಂಡವೇ ಕಟ್ಟಾಯ್ತು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:19 − fifteen =
Remember me
