ಮುಂಬೈ:ಭಾರತ ಕಂಡ ಅಪರೂಪದ ಕ್ರಿಕೆಟ್ ತಾರೆಗಳಲ್ಲಿ ಒಬ್ಬರು ರಾಹುಲ್​ ದ್ರಾವಿಡ್​. ಟೆಸ್ಟ್ ಪಂದ್ಯಗಳಲ್ಲಿ 10 ಸಾವಿರಕ್ಕೂ ಅಧಿಕ ರನ್ನುಗಳನ್ನು ಗಳಿಸುವ ಮೂಲಕ ಸಚಿನ್ ತೆಂಡೂಲ್ಕರ್ ಮತ್ತು ಸುನಿಲ್ ಗವಾಸ್ಕರ್ ನಂತರ ಮೂರನೇಯ ಭಾರತೀಯ ಎಂಬ ಹೆಗ್ಗಳಿಕೆ ಇವರದ್ದು. ಮಧ್ಯಪ್ರದೇಶ ಮೂಲದವರಾದವರೂ ರಾಹುಲ್​ ದ್ರಾವಿಡ್ ಅವರು ಕನ್ನಡಿಗರು.
ಜಾಹೀರಾತು ಒಂದರಲ್ಲಿ ಕನ್ನಡದಿಂದ ಇವರು ಮಾತನಾಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ. ಈ ವಿಡಿಯೋ ಅನ್ನು ವಿರಾಟ್​ ಕೊಹ್ಲಿ ಶೇರ್​ ಮಾಡಿಕೊಂಡಿದ್ದಾರೆ. ಅವರು ಇದನ್ನು ಶೇರ್​ ಮಾಡಿಕೊಳ್ಳಲು ಕಾರಣ, ಅತ್ಯಂತ ಮೃದು ಸ್ವಭಾವದವರು ಎನಿಸಿಕೊಂಡಿರುವ ರಾಹುಲ್​ ದ್ರಾವಿಡ್​ಗೆ ಅತ್ಯಂತ ಕೋಪದಿಂದ ಇದರಲ್ಲಿ ಮಾತನಾಡಿದ್ದಾರೆ. ರಾಹುಲ್​ ಅವರ ಇಂಥ ರೂಪ ನಾವು ನೋಡೇ ಇರಲಿಲ್ಲ ಎಂದು ಕೊಹ್ಲಿ ತಮಾಷೆಯಾಗಿ ಕ್ಯಾಪ್ಷನ್​ ಹಾಕಿದ್ದಾರೆ.
Never seen this side of Rahul bhai 🤯🤣pic.twitter.com/4W93p0Gk7m
— Virat Kohli (@imVkohli)April 9, 2021

ಈ ವಿಡಿಯೋದಲ್ಲಿ ಟ್ರಾಫಿಕ್​ ಜಾಮ್​ನಲ್ಲಿ ಸಿಲುಕಿರುವ ರಾಹುಲ್​ ಮಹಿಳೆ ಸೇರಿದಂತೆ ಅನೇಕ ಮಂದಿಗೆ ಸಿಟ್ಟಿನಿಂದ ಬೈಯುವುದನ್ನು ಕಾಣಬಹುದು. ಬ್ಯಾಟ್​ನಿಂದ ಕಾರಿನ ಗಾಜನ್ನು ಒಡೆಯುತ್ತಿರುವ ಅವರು, ಒಮ್ಮೆ ಕನ್ನಡದಿಂದ ಒಡೆದ್ಹಾ​ಕ್​ಬಿಡ್ತೀನಿ ಎಂದು ಆಕ್ರೋಶದಿಂದ ಹೇಳಿದ್ದಾರೆ.
ಅಸಲಿಗೆ ಇದೇನೂ ನಿಜವಾದ ವಿಡಿಯೋ ಅಲ್ಲ. ಬದಲಿಗೆ ಜಾಹೀರಾತಿಗೆ ಪೂರಕವಾಗಿ ಇಂಥದ್ದೊಂದು ವಿಡಿಯೋ ಮಾಡಲಾಗಿದೆ. ಮೃದು ಸ್ವಭಾವದ ದ್ರಾವಿಡ್​ ಅವರಿಗೂ ಸಿಟ್ಟುಬರುತ್ತದೆ ಎಂದು ಜಾಹೀರಾತನ್ನು ಹೋಲಿಕೆ ಮಾಡಲು ಇದನ್ನು ಬಳಸಲಾಗಿದೆ. ಆದರೆ ಕನ್ನಡಿಗರು ಮಾತ್ರ ಇಂಥ ದೊಡ್ಡ ಸ್ಟಾರ್​ ಬಾಯಲ್ಲಿ ಕನ್ನಡ ಬಂದದ್ದನ್ನು ಕೇಳಿ ಖುಷಿಯಿಂದ ಶೇರ್​ ಮಾಡಿಕೊಳ್ಳುತ್ತಿದ್ದಾರೆ.
ನಾಳೆಯಿಂದ ನೈಟ್​ ಕರ್ಫ್ಯೂ: ಸರ್ಕಾರದ ಈ ಅಧಿಕೃತ ಆದೇಶದಲ್ಲಿ ಎಲ್ಲ ಸಂದೇಹಗಳಿಗೆ ಪರಿಹಾರ…

ಕಷ್ಟಪಟ್ಟು ಸ್ಮಾರ್ಟ್​​ಫೋನ್​ ಎಗರಿಸಿದ ಕಳ್ಳ ವಾಪಸ್​ ಕೊಟ್ಟುಬಿಟ್ಟ- ಕಾರಣ ಕೇಳಿ ಪತ್ರಕರ್ತ ಸುಸ್ತಾದ!

ಫೀಸು, ಬ್ಯಾಗು, ಹೋಮ್​ ವರ್ಕು ಎಲ್ಲದರಿಂದಲೂ ಮುಕ್ತ…ಮುಕ್ತ… ಈ ‘ಹೋಮ್ ಸ್ಕೂಲಿಂಗ್’​…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × 4 =
Remember me
