ನವದೆಹಲಿ:ಅಕ್ಟೋಬರ್‌ 31 ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪುಣ್ಯತಿಥಿ. ನಿನ್ನೆ ಅವರ 37 ನೇ ಪುಣ್ಯತಿಥಿಯಂದು ಯುಟ್ಯೂಬ್‌ ವಿಡಿಯೋದಲ್ಲಿ ಮಾತನಾಡಿದ ಸಂಸದ ರಾಹುಲ್‌ ಗಾಂಧಿ, ತಮ್ಮ ಅಜ್ಜಿ ಇಂದಿರಾ ಗಾಂಧಿಯವರ ಸಾವಿನ ದಿನಗಳನ್ನು ನೆನೆಪಿಸಿಕೊಂಡರು. ‘ನನ್ನ ಪ್ರೀತಿಯ ಅಜ್ಜಿ ಇಂದಿರಾ ಜೀ ಅವರ ನೆನಪಿಗಾಗಿ’ ಎಂಬ ವಿಡಿಯೋ ಮಾಡಿರುವ ಅವರು ಅಜ್ಜಿಯ ಕುರಿತು ಕೆಲವೊಂದು ಕುತೂಹಲದ ವಿಷಯಗಳನ್ನು ಹಂಚಿಕೊಂಡಿದ್ದಾರೆ.ಅಜ್ಜಿಯ ಹತ್ಯೆ ಮತ್ತು ಅಂತ್ಯಕ್ರಿಯೆ ನೆನೆಪಿಸಿಕೊಂಡರೆ ತುಂಬಾ ನೋವಾಗುತ್ತದೆ ಎಂದು ವಿವರಿಸಿದ ರಾಹುಲ್‌, ನನ್ನ ಅಜ್ಜಿಯ ಅಂತ್ಯಕ್ರಿಯೆಯ ದಿನ ನನ್ನ ಜೀವನದ ಎರಡನೇ ಅತ್ಯಂತ ಕಷ್ಟಕರ ದಿನ ಎಂದು ಹೇಳೀದರು. ಹತ್ಯೆಯಾಗುವ ಕೆಲವೇ ಗಂಟೆಗಳ ಮೊದಲು ಇಂದಿರಾ ಗಾಂಧಿಯವರು ತಮ್ಮ ಬಳಿ ಹೇಳಿಕೊಂಡ ಮಾತನ್ನು ಅವರು ವಿವರಿಸಿದರು.‘ನನ್ನ ಅಜ್ಜಿ ಸಾಯುವ ಅಂದರೆ ಹತ್ಯೆಯಾಗುವ ಕೆಲವೇ ಗಂಟೆಗಳ ಮೊದಲು ನನಗೆ ಹೇಳಿದ್ದ ಮಾತು ಇಂದಿಗೂ ನನಗೆ ಅಚ್ಚರಿ ಮೂಡಿಸುತ್ತದೆ. ಅದೇನೆಂದರೆ ನನಗೆ ಏನಾದರೂ ಸಂಭವಿಸಿದರೆ ನೀನು ಅಳಬಾರದು’ ಎಂದು ಅಜ್ಜಿ ಹೇಳಿರುವುದಾಗಿ ರಾಹುಲ್‌ ನೆನಪಿಸಿಕೊಂಡರು.1984ರಲ್ಲಿ ಆಗಿನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರನ್ನು ಖಲಿಸ್ತಾನಿ ಉಗ್ರರೊಂದಿಗೆ ನಂಟು ಹೊಂದಿದ್ದ ಅವರ ಇಬ್ಬರು ಭದ್ರತಾ ಸಿಬ್ಬಂದಿ ಹತ್ಯೆ ಮಾಡಿದ್ದರು. ಅವರು ಸಾಯುವ ಹಿಂದಿನ ದಿನ ನನ್ನನ್ನು ಬಳಿಗೆ ಕರೆದು, ‘ನೋಡು ನನಗೆ ಏನಾದರೂ ಸಂಭವಿಸಿದರೆ ನೀನು ಅಳಬಅರದು’ ಎಂದರು. ಆದರೆ ನನಗೆ ತುಂಬಾ ಅಚ್ಚರಿಯಾಯಿತು. ಆಗ ನಾನಿನ್ನೂ ತುಂಬಾ ಚಿಕ್ಕ ಹುಡುಗ. ಅಜ್ಜಿ ಏನು ಹೇಳುತ್ತಿದ್ದಾರೆ ಎಂದು ಅರ್ಥವಾಗಲಿಲ್ಲ. ಇದಾದ ಕೆಲವೇ ಗಂಟೆಗಳಲ್ಲಿ ಅವರ ಹತ್ಯೆಯಾಯಿತು’ ಎಂದು ಆ ಭಯಾನಕ ದಿನಗಳನ್ನು ರಾಹುಲ್‌ ಗಾಂಧಿ ನೆನೆಸಿಕೊಂಡರು.ಬಹುಶಃ ಅವರಿಗೆ ತಮ್ಮ ಹತ್ಯೆಯ ಮುನ್ಸೂಚನೆ ಸಿಕ್ಕಿತ್ತು ಎನ್ನಿಸುತ್ತದೆ. ಇದು ಬಹುಶಃ ನಮ್ಮ ಕುಟುಂಬಸ್ಥರಿಗೂ ತಿಳಿದಿತ್ತು. ಯಾವತ್ತೂ ಕಾಯಿಲೆ ಬಿದ್ದು ಸಾಯಬಾರದು, ಇದು ಬಹುದೊಡ್ಡ ಶಾಪ ಎಂದು ಅಜ್ಜಿ ಇಂದಿರಾ ಅವರು ಡೈನಿಂಗ್‌ ಟೇಬಲ್‌ ಮೇಲೆ ಕುಳಿತಿದ್ದಾಗ ನನಗೊಮ್ಮೆ ಹೇಳಿದ್ದರು ಎಂದು ರಾಹುಲ್‌ ಸ್ಮರಿಸಿದರು.ಬಹುಶಃ ಅವರಿಗೆ ತಮ್ಮ ಪ್ರಾಣ ತ್ಯಾಗವು ತನ್ನ ದೇಶಕ್ಕಾಗಿ ಸಾಯುವ ಅತ್ಯುತ್ತಮ ಮಾರ್ಗ ಎನಿಸಿರಬೇಕು. ನನಗೆ ವಾಸ್ತವದಲ್ಲಿ ಇಬ್ಬರು ತಾಯಂದಿರು. ಒಬ್ಬರು ಸೋನಿಯಾ, ಇನ್ನೊಬ್ಬರು ಇಂದಿರಾ ಆಗಿದ್ದರು. ನನ್ನ ನನ್ನ ತಂದೆ ಕೋಪಗೊಂಡಾಗ ನನ್ನನ್ನು ರಕ್ಷಿಸುವ ಸೂಪರ್ ತಾಯಿಯಾಗಿದ್ದರು ನನ್ನ ಅಜ್ಜಿ ಎಂದರು. ಆದ್ದರಿಂದ ಅವರ ಸಾವಿನಿಂದ ನನಗೆ ನನ್ನ ತಾಯಿಯನ್ನು ಕಳೆದುಕೊಂಡಷ್ಟೇ ದುಃಖವಾಗುತ್ತಿದೆ. ನನ್ನ ಅಜ್ಜಿ ಕೊನೆಯ ಕ್ಷಣದವರೆಗೂ ನಿರ್ಭೀತಿಯಿಂದ ದೇಶಕ್ಕೆ ಸೇವೆ ಸಲ್ಲಿಸಿದರು. ಅವರ ಜೀವನ ನಮಗೆ ಸ್ಫೂರ್ತಿಯ ಮೂಲವಾಗಿದೆ ಎಂದರು.‘ಮಹಿಳಾ ಶಕ್ತಿಗೆ ಉತ್ತಮ ಉದಾಹರಣೆ, ಶ್ರೀಮತಿ ಇಂದಿರಾ ಗಾಂಧಿ. ಅವರ ಹುತಾತ್ಮ ದಿನದಂದು ಅವರಿಗೆ ನಮ್ರ ನಮನಗಳು’ ಎಂದು ಅವರು ಟ್ವೀಟ್‌ ಕೂಡ ಮಾಡಿದ್ದಾರೆ.
ಡಾ.ರಾಜ್‌ಕುಮಾರ್‌ ಉರುಫ್‌ ಮುತ್ತುರಾಜನಾದ ನಾನು ನನ್ನ ಮಗ ಮಾಸ್ಟರ್‌ ಲೋಹಿತನ ಹೆಸರನ್ನು…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
