ಚೆನ್ನೈ:ಕಾಂಗ್ರೆಸ್​ನಿಂದ ಭಾರತ್ ಜೋಡೋ ಯಾತ್ರೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ಕುತೂಹಲದ ಘಟನೆ ನಡೆದಿದೆ. ಕಾಂಗ್ರೆಸ್​ ನಾಯಕ, ಸಂಸದ ರಾಹುಲ್​ ಗಾಂಧಿಯವರು ಸಿಕ್ಕಾಪಟ್ಟೆ ಖುಷಿಯಾಗಿರುವ ಘಟನೆ ಇದಾಗಿದೆ. ಇದಕ್ಕೆ ಕಾರಣ ಮದುವೆಯ ವಿಷಯ!
ಕನ್ಯಾಕುಮಾರಿಯ ಮಾರ್ತಾಂಡಂನಲ್ಲಿ ಪ್ರಧಾನಮಂತ್ರಿ ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರೊಬ್ಬರು ರಾಹುಲ್ ಗಾಂಧಿ ಬಳಿ ಮದುವೆ ಬಗ್ಗೆ ಮಾತೆತ್ತಿದ್ದಾರೆ. ಆ ಸಂದರ್ಭದಲ್ಲಿ ರಾಹುಲ್​ ತುಂಬಾ ಖುಷಿಯಿಂದ ರೋಮಾಂಚನಗೊಂಡಿದ್ದಾರೆ. ಕೂಡಲೇ ಆ ಮಹಿಳೆ ತಮಿಳು ಹುಡುಗಿಯನ್ನು ರಾಹುಲ್ ಗಾಂಧಿಗಾಗಿ ಹುಡುಕಲು ತಾವು ಸಿದ್ಧರಿರುವುದಾಗಿ ಹೇಳಿದಾಗ ರಾಹುಲ್​ ನಾಚಿ ನೀರಾದರು.
ಇದರ ಚಿತ್ರಗಳನ್ನು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಹಂಚಿಕೊಂಡಿದ್ದಾರೆ. ‘ಒಬ್ಬ ಮಹಿಳೆ ಮದುವೆಯ ಬಗ್ಗೆ ಪ್ರಸ್ತಾಪಿಸಿದಾಗ ರಾಹುಲ್ ಸಂತೋಷಗೊಂಡವರಂತೆ ಕಾಣುತ್ತಿದ್ದರು, ಇದು ಭಾರತ್ ಜೋಡೋ ಯಾತ್ರೆಯ 3 ನೇ ದಿನದ ಉಲ್ಲಾಸದ ಕ್ಷಣ’ ಎಂದು ತಮಾಷೆಯಾಗಿ ಟ್ವೀಟ್​ ಮಾಡಿದ್ದಾರೆ.
‘ರಾಹುಲ್ ಗಾಂಧಿಯವರು ತಮಿಳುನಾಡನ್ನು ಪ್ರೀತಿಸುತ್ತಿದ್ದಾರೆಂದು ನನಗೆ ತಿಳಿದಿದೆ, ಈಗ ಅವರು ತಮಿಳು ಹುಡುಗಿಯನ್ನು ಮದುವೆಯಾಗಲು ಸಿದ್ಧರಿದ್ದಾರೆ ಎಂಬುದೂ ತಿಳಿಯಿತು. ಮದುವೆ ಪ್ರಸ್ತಾಪ ಎತ್ತುತ್ತಿದ್ದಂತೆಯೇ ರಾಹುಲ್ ಗಾಂಧಿ ಉಲ್ಲಾಸಭರಿತರಾದರು. ಖುಷಿ ಖುಷಿಯಿಂದ ಆ ಮಹಿಳೆಯ ಜತೆ ಚರ್ಚೆ ನಡೆಸಿದರು’ ಎಂದು ಜೈರಾಮ್ ರಮೇಶ್ ತಿಳಿಸಿದ್ದಾರೆ.
ಕಾಂಗ್ರೆಸ್​ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆಯು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯಲಿದೆ. ಈ 3500 ಕಿಮೀ ಪ್ರಯಾಣವು 12 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ. ಈ ಐದು ತಿಂಗಳ ಪಾದಯಾತ್ರೆಯನ್ನು ಸ್ವತಃ ರಾಹುಲ್ ಗಾಂಧಿ ಅವರು ಬುಧವಾರ ತಮಿಳುನಾಡಿನಿಂದ ಆರಂಭಿಸಲಿದ್ದಾರೆ. ಎರಡು ಹಂತಗಳಲ್ಲಿ ಪ್ರಯಾಣ ನಡೆಯಲಿದೆ. (ಏಜೆನ್ಸೀಸ್​)
A hilarious moment from day 3 of#BharatJodoYatra
During@RahulGandhi’s interaction with women MGNREGA workers in Marthandam this afternoon, one lady said they know RG loved Tamil Nadu & they’re ready to get him married to a Tamil girl! RG looks most amused & the photo shows it!pic.twitter.com/0buo0gv7KH
— Jairam Ramesh (@Jairam_Ramesh)September 10, 2022

VIDEO: ಕರ್ತವ್ಯಲೋಪ- ಎಸ್​ಐ, ಎಎಸ್​ಐಯನ್ನೇ ಲಾಕಪ್​ಗೆ ತಳ್ಳಿದ ಪೊಲೀಸ್​ ಅಧಿಕಾರಿ; ವಿಡಿಯೋ ವೈರಲ್

ಗೇಮಿಂಗ್​ ಆ್ಯಪ್​ನಿಂದ ಬಳಕೆದಾರರಿಗೆ ಟೋಪಿ: ಆರು ಕಡೆ ಇ.ಡಿ ದಾಳಿ- 17 ಕೋಟಿ ರೂ. ಜಪ್ತಿ

ಬೆಕ್ಕನ್ನು ಹುಲಿ ಮಾಡಿದ ಭೂಪ: ವಾಟ್ಸ್​ಆ್ಯಪ್​ನಲ್ಲಿ ಮಾರಾಟಕ್ಕಿಟ್ಟು ಪೊಲೀಸರ ಕೈಗೆ ಸಿಕ್ಕಿಬಿದ್ದ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two + six =
Remember me
