ನವದೆಹಲಿ:ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಸದಾ ಟ್ರೋಲ್​ ಪುಟದಲ್ಲಿ ಟಾಪ್​-1ನಲ್ಲಿಯೇ ಇರುತ್ತಿದ್ದಾರೆ. ಇವರು ಹೋದಲ್ಲಿ, ಬಂದಲ್ಲಿ ಮಾಡುವ ಭಾಷಣಗಳ ತುಣುಕುಗಳು ಸದಾ ಹಾಸ್ಯದ ರೂಪದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇರುತ್ತವೆ.
ಇವರು ಟ್ರೋಲ್​ ಆಗುತ್ತಿರುವ ಭಾಷಣಗಳ ಪೈಕಿ ಹಲವಾರು ಭಾಷಣಗಳು ಅಥವಾ ದೃಶ್ಯಗಳು ನಿಜವಾಗಿಯೂ ರಾಹುಲ್​ ಗಾಂಧಿಯವರದ್ದೇ ಆಗಿದ್ದರೂ, ಕೆಲವೊಮ್ಮೆ ಯಾವುದೋ ಸನ್ನಿವೇಶಕ್ಕೆ ಇನ್ನೇನೋ ಕಲ್ಪನೆ ಮಾಡಿಕೊಂಡು ಟ್ರೋಲ್​ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ.ಇತ್ತೀಚೆಗೆ ರಾಹುಲ್​ ಗಾಂಧಿಯವರು ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹೋಗಿದ್ದರು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನಿನ ವಿರುದ್ಧವಾಗಿ ‘ಖೇತಿ ಕಾ ಕೂನ್​’ ಪುಸ್ತಕ ಇದಾಗಿದೆ. ಈ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದ ವೇಳೆ, ಮಾಧ್ಯಮದ ಫೋಟೋಗ್ರಾಫರ್ ಒಬ್ಬರು ಪುಸ್ತಕದ ಹಿಂಭಾಗವನ್ನು ತೋರಿಸಿ ಎಂದರು. ಆಗ ರಾಹುಲ್​ ಗಾಂಧಿಯವರಿಗೆ ಅದು ತಿಳಿಯದೇ ತಾವೇ ಹಿಂದಕ್ಕೆ ತಿರುಗಿ ಬೆನ್ನು ತೋರಿಸಿದರು ಎಂದು ಜಾಲತಾಣದಲ್ಲಿ ಸುದ್ದಿಯಾಗಿದೆ.
‘ಪುಸ್ತಕದ ಬೆನ್ನು ತೋರಿಸಿ ಎಂದರೆ ತಮ್ಮದೇ ಬೆನ್ನು ತೋರಿಸಿದರು’ ಎಂಬ ಶೀರ್ಷಿಕೆಯ ಜತೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟ್ರೋಲ್​ ಆಗುತ್ತಿದೆ ವಿಡಿಯೋ ಒಂದು.
ಆದರೆ ಅದನ್ನು ಫ್ಯಾಕ್ಟ್​ ಚೆಕ್​ ತಂಡವೊಂದು ಫ್ಯಾಕ್ಟ್​ ಚೆಕ್ ಮಾಡಿದ್ದು, ನಿಜವಾಗಿಯೂ ರಾಹುಲ್​ ಗಾಂಧಿಯವರು ಹೀಗೆಯೇ ಮಾಡಿದ್ರಾ ಎಂದು ಪರಿಶೀಲನೆ ಮಾಡಿದೆ. ​ಆದರೆ ಫ್ಯಾಕ್ಟ್​ ಚೆಕ್​ ತಂಡ ಹೇಳಿರುವ ಪ್ರಕಾರ, ರಾಹುಲ್​ ಗಾಂಧಿಯವರ ಬಗ್ಗೆ ಹೀಗೆ ಹರಿದಾಡುತ್ತಿರುವ ಸುದ್ದಿ ಫೇಕ್​ನ್ಯೂಸ್​. ನಿಜವಾದದ್ದು ಏನೆಂದರೆ, ಕೃಷಿಯ ಬಗ್ಗೆ ಕೇಂದ್ರ ಸರ್ಕಾರ ತಿರಸ್ಕಾರದ ಮನೋಭಾವ ಹೊಂದಿದೆ ಎಂದು ಹೇಳುವುದನ್ನು ಆ್ಯಕ್ಷನ್​ ಮೂಲಕ ತೋರಿಸಿರುವ ರಾಹುಲ್​ ಗಾಂಧಿಯವರು ಕೃಷಿಯ ಬಗ್ಗೆ ಹೀಗೆ ಕೇಂದ್ರ ಸರ್ಕಾರ ಬೆನ್ನುಹಾಗಿದೆ ಎಂದು ತೋರಿಸಿದ್ದಾರೆ. ಆ ಸಂದರ್ಭದಲ್ಲಿ ತಮ್ಮ ಬೆನ್ನನ್ನು ತೋರಿಸಿದ್ದಾರೆ. ಆದರೆ ಇದರ ವಿಡಿಯೋವನ್ನು ಪ್ರಸಾರ ಮಾಡಿ ತಪ್ಪು ತಪ್ಪು ಸುದ್ದಿ ಹರಡಲಾಗುತ್ತಿದೆ ಎಂದು ಈ ತಂಡ ಹೇಳಿದೆ.
ಪಾಸ್​ ಎಂಬ ಯೂಟ್ಯೂಬ್​ನಲ್ಲಿ ಫ್ಯಾಕ್ಟ್​ ಚೆಕ್​ ಕುರಿತು ಮಾಹಿತಿ ನೀಡಿದೆ. ಆದರೆ ಅಲ್ಲಿಯೂ ಬಿಡದ ಟ್ರೋಲಿಗರು ಯಾರಿಗೆ ಗೊತ್ತು ಇದೇ ಫೇಕ್​ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ನಿಜವೂ ಆಗಿರಬಹುದಲ್ಲವೆ ಎಂದು ಪ್ರಶ್ನಿಸುತ್ತಿದ್ದಾರೆ.
‘ಪಾಸ್’​ ಯೂಟ್ಯೂಬ್​ನ ಫ್ಯಾಕ್ಟ್​ ಚೆಕ್​ ಏನು ಹೇಳಿದೆ ನೋಡಿ…
10 ಸೆಕೆಂಡ್​ ಈ ವಿಡಿಯೋ ಬೆಲೆ ₹48 ಕೋಟಿ! ಇದರಲ್ಲಿರೋದು ಮಲಗಿರುವ ಟ್ರಂಪ್- ನೀವೂ ನೋಡಿ…

ಪ್ರತಿ ರಾತ್ರಿ ಮಲಗುವಾಗ ಇದನ್ನು ತಪ್ಪದೇ ಮಾಡಿ… ಸುಳ್ಳು ಖುಷಿ ಕೊಟ್ಟಿತಾ ನೋಡಿಕೊಳ್ಳಿ…

6ನೇ ಮಗುವಿನ ಅಮ್ಮನಾದ ಆರೇ ತಿಂಗಳಲ್ಲಿ ಏಳನೇ ಮಗುವಿನ ತಾಯಿಯಾದಳು ನಟಿ- ಫೋಟೋ ನೋಡಿದವರು ಶಾಕ್​!

ಫುಡ್ ಕಾರ್ಪೋರೇಷನ್​ನಲ್ಲಿ ವಿವಿಧ ಉದ್ಯೋಗಾವಕಾಶ- ₹1.80 ಲಕ್ಷದವರೆಗೂ ಮಾಸಿಕ ಸಂಬಳ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + eight =
Remember me
