ನವದೆಹಲಿ :ಇಡೀ ದೇಶವನ್ನೇ ತಲ್ಲಣಗೊಳಿಸಿರುವ ನೈರುತ್ಯ ದೆಹಲಿಯ ಬಾಲಕಿಯ ರೇಪ್‌, ಮರ್ಡರ್ ಕೇಸ್‌ಗೆ ಸಂಬಂಧಿಸಿದಂತೆ ಸಂಸದ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಈಗ ಪುನಃ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಪೋಕ್ಸೊ ಕಾಯ್ದೆ ಅನ್ವಯ ಅತ್ಯಾಚಾರಕ್ಕೆ ಒಳಗಾಗುವ ಬಾಲಕಿ ಅಥವಾ ಅವರ ಕುಟುಂಬದವರ ಫೋಟೋಗಳನ್ನು ಹಂಚಿಕೊಳ್ಳುವುದು ಅಪರಾಧ. ಆದರೆ ಬಾಲಕಿಯ ಮನೆಗೆ ತಾವು ಹೋಗಿರುವ ಫೋಟೋವನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡುವ ಮೂಲಕ ರಾಹುಲ್‌ ಗಾಂಧಿ ಈ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಟ್ವಿಟರ್​ ಖಾತೆಯನ್ನು ಇದಾಗಲೇ ಸ್ಥಗಿತಗೊಳಿಸಲಾಗಿದೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ಟ್ವಿಟರ್‌ಗೆ ನೋಟಿಸ್ ನೀಡಿದ್ದು, ಕ್ರಮ ತೆಗೆದುಕೊಳ್ಳುವಂತೆ ಹೇಳಿದ್ದ ಹಿನ್ನೆಲೆಯಲ್ಲಿ ಟ್ವಿಟರ್​ ಈ ನಿರ್ಧಾರ ಪ್ರಕಟಿಸಿತ್ತು.
ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕರು ಆಕೆಯನ್ನು ಸುಟ್ಟುಹಾಕಿದ್ದಾರೆ. ಈ ಕುಟುಂಬದವರಿಗೆ ಸಾಂತ್ವನ ಹೇಳಲು ರಾಹುಲ್‌ ಗಾಂಧಿ ಅವರ ಮನೆಗೆ ಹೋಗಿದ್ದರು. ಈ ವೇಳೆ ಬಾಲಕಿಯ ಕುಟುಂಬದ ಜೊತೆ ಇರುವ ಚಿತ್ರವನ್ನು ಟ್ವಿಟರ್‌ನಲ್ಲಿ ಹಾಕಿ, ‘ಬಾಲಕಿಗೆ ನ್ಯಾಯ ಸಿಗುವವರೆಗೂ ಹಿಂದೆ ಸರಿಯುವುದಿಲ್ಲ’ ಎಂದು ಬರೆದುಕೊಂಡಿದ್ದರು. ಆದರೆ ಕುಟುಂಬಸ್ಥರ ಫೋಟೋ ಹಾಕಿಕೊಂಡು ನಿಯಮ ಉಲ್ಲಂಘಿಸಿದ್ದರು.
ಇದೀಗ ಇದೇ ಭೇಟಿಯ ವಿಡಿಯೋ ಅನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿಯೂ ಅವರು ಹಾಕಿಕೊಂಡಿದ್ದಾರೆ/ ಇದರಲ್ಲಿ ಬಾಲಕಿಯ ಕುಟುಂಬಸ್ಥರು ಮಾತ್ರವಲ್ಲದೇ ಬಾಲಕಿಯ ಚಿತ್ರವೂ ಕಾಣುವಂತಿದೆ. ಆದ್ದರಿಂದ ಈಗ ನ್ಯಾಷನಲ್ ಕಮಿಷನ್ ಫಾರ್ ಪ್ರೊಟೆಕ್ಶನ್ ಆಫ್ ಚೈಲ್ಡ್ ರೈಟ್ಸ್ (ಎನ್​ಸಿಪಿಸಿಆರ್) ಫೇಸ್ ಬುಕ್ ಸಂಸ್ಥೆ ರಾಹುಲ್ ಗಾಂಧಿಯ ಇನ್​ಸ್ಟಾಗ್ರಾಂ ಸ್ಟಾಗ್ರಾಂ ಖಾತೆಯನ್ನು ಬ್ಲಾಕ್ ಮಾಡುವಂತೆ ಒತ್ತಾಯಿಸಿದೆ. ಈ ಕುರಿತು ಎನ್​ಸಿಪಿಸಿಆರ್ ಫೇಸ್ ಬುಕ್ ಇಂಡಿಯಾ ಗೆ ಪತ್ರ ಬರೆದಿದ್ದು, ರಾಹುಲ್​ ಗಾಂಧಿ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಹೇಳಿದೆ.
ಒಟ್ಟಿನಲ್ಲಿ ಬಾಲಕಿಯ ಕುಟುಂಬಕ್ಕೆ ಸಾಂತ್ವನ ಮಾಡುವ ಹೆಸರಿನಲ್ಲಿ ಅದನ್ನು ಪ್ರಚಾರ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅದನ್ನು ಶೇರ್​ ಮಾಡಿಕೊಂಡ ಕಾರಣಕ್ಕೆ ರಾಹುಲ್​ ಗಾಂಧಿ ಅವರಿಗೆ ಈಗ ಮತ್ತೆ ಸಂಕಟ ಎದುರಾಗಿದೆ.
ಬಲವಂತದ ಸಂಭೋಗದಿಂದ ಪಾರ್ಶ್ವವಾಯುವಿಗೆ ತುತ್ತಾದ ಪತ್ನಿ: ಪತಿಗೆ ಹಕ್ಕಿದೆ ಎಂದ ಕೋರ್ಟ್​!

ಬಿಗ್​ ಬಿ ಕುಟುಂಬಕ್ಕೂ ಎದುರಾಯ್ತಾ ಆರ್ಥಿಕ ಸಂಕಷ್ಟ? ಐಷಾರಾಮಿ ಬಂಗಲೆ ಮಾರಿದ ಅಭಿಷೇಕ್​ ಬಚ್ಚನ್​!

ಅಬ್ಬಬ್ಬಾ ಇದೆಂಥ ಸೇಡಪ್ಪ! ತನಗೆ ಕಚ್ಚಿದ ಹಾವನ್ನೇ ಕಚ್ಚಿಕಚ್ಚಿ ಕೊಂದ ಭೂಪ- ಮುಂದೇನಾಯ್ತು ನೋಡಿ…

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:5 × 5 =
Remember me
