ನವದೆಹಲಿ:ಇಂದು ಕೇಂದ್ರದ ಬಜೆಟ್​ ನಡೆಯುತ್ತಿದ್ದ ಸಮಯ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಬಜೆಟ್​ ಮಂಡಿಸುತ್ತಿದ್ದ ವೇಳೆ ಸದನದಲ್ಲಿ ಎಲ್ಲರೂ ತದೇಕ ಚಿತ್ತದಿಂದ ಅದನ್ನು ಆಲಿಸುತ್ತಿದ್ದರು.
ಆದರೆ ಸಂಸದ ರಾಹುಲ್​ ಗಾಂಧಿ ಮಾತ್ರ ನಿದ್ದೆಗೆ ಜಾರಿಬಿಟ್ಟರು. ಆಡಳಿತ ಪಕ್ಷದವರು ಬಜೆಟ್​ ಅನ್ನು ಸಮರ್ಥಿಸಿಕೊಳ್ಳುತ್ತಿದ್ದರೆ, ವಿರೋಧ ಪಕ್ಷಗಳು ಬಜೆಟ್​ ವಿರುದ್ಧವಾಗಿ ಮಾತುಕತೆ ನಡೆಸುತ್ತಿದ್ದರು. ಪ್ರತಿಬಾರಿಯೂ ಯಾವುದೇ ಪಕ್ಷ ಬಜೆಟ್​ ಮಂಡನೆ ಮಾಡಿದಾಗ ಅದರ ಪರ-ವಿರೋಧಗಳ ಚರ್ಚೆ ನಡೆದೇ ಇರುತ್ತದೆ.
Before Valentine Day After valentine daypic.twitter.com/341I7XjFuk
— Say My Name (@Its_Heisen_berg)February 1, 2021

ಇಂದು ಸಹಜವಾಗಿ ಆಡಳಿತ ಪಕ್ಷದ ವಿರುದ್ಧ ಟೀಕೆ ಮಾಡಲಿಕ್ಕೋಸ್ಕರವಾಗಿಯಾದರೂ ರಾಹುಲ್​ ಗಾಂಧಿ ಬಜೆಟ್​ ಅನ್ನು ಆಲಿಸಬೇಕಿತ್ತು. ಅದನ್ನು ಬಿಟ್ಟು ನಿದ್ದೆಗೆ ಜಾರಿದ್ದರು. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟ್ರೋಲ್​ ಆಗುತ್ತಿದೆ. ನೆಟ್ಟಿಗರ ಆಹಾರವಾಗಿದ್ದಾರೆ ರಾಹುಲ್​ ಗಾಂಧಿ.
In Biology class In Maths classpic.twitter.com/1nCN7tSE6Y
— Pakchikpak Raja Babu (@HaramiParindey)February 1, 2021

ಮಾಸ್ಕ್ ಧರಿಸಿದ್ದ ಅವರು ನಿದ್ದೆಗೆ ಜಾರಿರುವ ಫೋಟೋ ಕ್ಲಿಕ್ಕಿಸಲಾಗಿದೆ. ಈ ಫೋಟೋ ಇಟ್ಟುಕೊಂಡು ಅವರು ಈ ಹಿಂದೆ ಕಣ್ಣು ಕ್ಲಿಕ್ಕಿಸಿದ ಫೋಟೋದ ಜತೆಗೆ ಸೇರಿಸಿ ಮೀಮ್ಸ್ ಕ್ರಿಯೆಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಇನ್ನು ಕೆಲವರು ರಾಹುಲ್​ಗಾಂಧಿ ಬಯೋಲಾಜಿ ಕ್ಲಾಸ್​ ಮತ್ತು ಗಣಿತ ಕ್ಲಾಸ್​ ಎಂದು ತಮಾಷೆ ಮಾಡಿದ್ದರೆ, ಬಜೆಟ್​ ಅಂದರೆ ಏನು ಎಂದು ಅರ್ಥವಾಗದಿದ್ದರೆ ಹೀಗೇ ಆಗೋದು ಎಂದು ಕೆಲವರು ಕಾಲೆಳೆದಿದ್ದಾರೆ.
ಕಾಂಗ್ರೆಸ್​ನ ಭಾವಿ, ಕಾಯಂ ಅಧ್ಯಕ್ಷ ಹೀಗೇ ಮಾಡೋದಾ ಎಂದು ಕೆಲವರು ಟೀಕಿಸಿದ್ದರೆ, ಇನ್ನೇನು ಪ್ರೇಮಿಗಳ ದಿನ ಬಂದುಬಿಡ್ತು. ಅದಕ್ಕೆ ರಾಹುಲ್​ ಗಾಂಧಿ ಪ್ರೇಮಿಗಳ ದಿನಕ್ಕಿಂತ ಮೊದಲು ಚೆನ್ನಾಗಿದ್ದು, ಯಾರೂ ಪ್ರೇಮಿಗಳು ಇಲ್ಲ ಎಂದು ಈ ದಿನದ ನಂತರ ಹೀಗೆ ಸಪ್ಪೆ ಮೋರೆ ಹಾಕಿಕೊಳ್ಳಲಿದ್ದಾರೆ ಎಂದು ಟೀಕಿಸಿದ್ದಾರೆ.
ರಾಯ್ತ ತಯಾರಿಸಿ ಬಿರಿಯಾನಿ ಸವಿದ ರಾಹುಲ್​- ‘ನಲ್ಲ ಇರಕು’, ಅಮೆರಿಕಕ್ಕೂ ಕಳಿಸ್ತೇನೆ ಎಂದರು!

ಹುಡುಗರ ಜತೆ ಮಾತನಾಡಿದರೆ ಕೆಂಡಕಾರುತ್ತಾರೆ, ಜೀವನವೇ ಸಾಕಾಗಿ ಹೋಗಿದೆ ಮೇಡಂ…

ಕೆಜಿಎಫ್​-2 ಬಿಡುಗಡೆ ದಿನ ರಜಾ ಬೇಕು… ಅಭಿಮಾನಿಗಳಿಂದ ಪ್ರಧಾನಿ ಮೋದಿಗೆ ಹೀಗೊಂದು ಮನವಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two + 14 =
Remember me
