ನವದೆಹಲಿ:ಕುಟುಂಬ ರಾಜಕಾರಣ ಮಾಡ್ತಿದ್ದೇವೆ, ವಂಶ ರಾಜಕೀಯ ಮಾಡುತ್ತಿದ್ದೇವೆ ಎಂದು ಪದೇ ಪದೇ ಕೆಲವರು ಹೇಳುತ್ತಿದ್ದಾರೆ. ನಾವೇನು ಕುಟುಂಬ ರಾಜಕಾರಣ ಮಾಡುತ್ತಿದ್ದೇವಾ? ಹಾಗಂತ ವಿನಾಕಾರಣ ಆರೋಪ ಏಕೆ ಮಾಡುವಿರಿ? ಇಂಥ ಟೀಕೆಗಳಿಗೆ ನಾವು ಬೆದರಲ್ಲ. ನಮ್ಮ ಕುಟುಂಬದವರು ಪ್ರಧಾನಿಯಾಗಿ 30 ವರ್ಷವಾಗಿದೆ. ಆದರೂ ಕುಟುಂಬ ರಾಜಕಾರಣ ಎಂದು ಟೀಕಿಸುತ್ತಾರೆ ಎಂದು ಸಂಸದ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕಿಡಿಕಿಡಿಯಾಗಿ ನುಡಿದರು.
ಮಾಜಿ ಪ್ರಧಾನಿ ರಾಜೀವ ಗಾಂಧಿ ಅವರ ಕುಟುಂಬದ ಕುಡಿಯಾಗಿರುವ ನಾನು ಇಂಥ ಟೀಕೆಗಳಿಗೆ ಕಿವಿಗೊಡುವುದಿಲ್ಲ. ಯಾರು ಎಷ್ಟೇ ನಮ್ಮ ಮೇಲೆ ಸುಳ್ಳು ಆರೋಪ ಮಾಡಿದರೂ ಮಾಜಿ ಪ್ರಧಾನಿಯ ಮಗನಾಗಿ ತಾತ್ವಿಕ ಸಿದ್ಧಾಂತಗಳಿಗೆ ನನ್ನ ಹೋರಾಟ ನಿಲ್ಲಿಸುವುದಿಲ್ಲ, ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ಹೇಳಿದ್ದಾರೆ.
ಚಿಕಾಗೊ ವಿಶ್ವವಿದ್ಯಾಲಯದ ಪ್ರೊಫೆಸರ್ ದೀಪೇಶ್ ಚಕ್ರವರ್ತಿ ಅವರ ಜತೆ ನಡೆಸಿದ ಮುಕ್ತ ಸಂವಾದದ ವೇಳೆ ರಾಹುಲ್‌ ಗಾಂಧಿ ಆಕ್ರೋಶಭರಿತವಾಗಿ ವಾಗ್ದಾಳಿ ಮಾಡಿದರು. ನನ್ನ ಅಜ್ಜಿ, ಮುತ್ತಜ್ಜ ಯಾರು ಎಂದು ನನಗೆ ಬೇಕಾಗಿಲ್ಲ, ಸದ್ಯದ ಭಾರತದ ಪರಿಸ್ಥಿತಿಯಲ್ಲಿ ತತ್ವ, ಸಿದ್ಧಾಂತಗಳ ಬಗ್ಗೆ ನನ್ನ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.
ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನವನ್ನು ತಿರುತಿರುಗಿ ತಾಯಿ-ಮಗನಿಗೇ ಕೊಡುತ್ತಿರುವ ಬಗ್ಗೆ ರಾಜಕೀಯದಲ್ಲಿ ಭಾರಿ ಚರ್ಚೆಯಾಗುತ್ತಿರುವುದು ಮಾತ್ರವಲ್ಲದೇ, ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿಯೂ ಟ್ರೋಲ್‌ ಆಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ರಾಹುಲ್‌ಗಾಂಧಿ ಈ ಮಾತನಾಡಿದರು.
ಇದರ ಜತೆಗೆ, ರಾಹುಲ್‌ ಗಾಂಧಿಯವರು ಸದ್ಯದ ಪರಿಸ್ಥಿತಿಯಲ್ಲಿ ಟ್ರೋಲ್‌ಗೆ ಒಳಗಾಗುತ್ತಿರುವ ಬಗ್ಗೆ, ಕೆಲವೊಮ್ಮೆ ಹಿಂದೆ ಮುಂದೆ ಯೋಚಿಸಿದೇ ಅವರು ಆಡುತ್ತಿರುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಸಕತ್‌ ಟ್ರೋಲ್‌ ಆಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ರಾಹುಲ್‌ ಗಾಂಧಿ, ’ಟ್ರೋಲ್‌ಗಳ ಬಗ್ಗೆ ಎಂದಿಗೂ ತಲೆ ಕೆಡಿಸಿಕೊಂಡೇ ಇಲ್ಲ. ಯಾವುದರ ಪರ ನಿಲ್ಲಬೇಕು, ಏನು ಮಾಡಬೇಕು, ಏನು ಮಾತನಾಡಬೇಕು ಎಂಬ ಸಂಪೂರ್ಣ ಅರಿವು ನನಗೆ ಇದೆ. ಕೆಲವೊಮ್ಮೆ ಟ್ರೋಲ್‌ಗಳು ನನಗೆ ಮಾರ್ಗದರ್ಶನಂತೆ ದಾರಿ ತೋರುತ್ತವೆ ಎಂದರು.
ಟ್ರೋಲ್ ಗಳು ನನ್ನನ್ನು ನಾನು ಅರ್ಥ ಮಾಡಿಕೊಳ್ಳಲು, ನನ್ನ ಸ್ಥಾನ ಏನು, ನಾನು ಏನು ಮಾಡಬೇಕು ಎಂಬುದನ್ನು ಸೂಚಿಸುತ್ತದೆ. ನನಗೆ ಯಾವುದೇ ಬೇಸರ, ವಿಷಾದಗಳಿಲ್ಲ. ನಾನು ಏನು ಮಾಡಬೇಕು ಎಂಬುದಕ್ಕೆ ನನ್ನನ್ನು ಎಚ್ಚೆತ್ತುಕೊಳ್ಳುವಂತೆ ಮಾಡುತ್ತದೆ, ನನ್ನನ್ನು ನಾನು ತಿದ್ದಿಕೊಳ್ಳಲು, ಬೆಳೆಯಲು ಸಹಾಯ ಮಾಡುತ್ತದೆ ಎಂದು ನುಡಿದರು.
ನಂತರ ವಂಶ ರಾಜಕೀಯದ ಕುರಿತಂತೆ ಬಿಜೆಪಿ ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ನಮ್ಮ ವಂಶಸ್ಥರು ಪ್ರಧಾನಿಯಾಗಿ 30 ವರ್ಷವಾಗಿದೆ (ರಾಜೀವ್‌ ಗಾಂಧಿಯವರು ಪ್ರಧಾನಿಯಾಗಿದ್ದು 1984ರಿಂದ 1989ರವರೆಗೆ). ಕಳೆದ ಯುಪಿಎ ಸರ್ಕಾರ ಅವಧಿಯಲ್ಲಿ ಕೂಡ ಬೇರೆಯವರೇ ಪ್ರಧಾನಿಯಾದರು ಹೊರತು ನಮ್ಮ ಕುಟುಂಬದವರು ಯಾರೂ ಪ್ರಧಾನಿಯಾಗಿರಲಿಲ್ಲ. ಹೀಗಿದ್ದ ಮೇಲೆ ವಂಶ ರಾಜಕೀಯ ಎಂದು ಹೇಳುವ ಮಾತಿನಲ್ಲಿ ಅರ್ಥವೇನಿದೆ ಎಂದು ಪ್ರಶ್ನಿಸಿದರು.
ಯುಪಿಎ ಮೈತ್ರಿಕೂಟ ಜನಪ್ರಿಯತೆ ಕಳೆದುಕೊಳ್ಳುತ್ತಿದೆ ಎಂಬ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಇದನ್ನು ನಾನು ಒಪ್ಪುವುದಿಲ್ಲ.2004ರಲ್ಲಿ 1990ರ ದಶಕದ ದೃಷ್ಟಿಕೋನಕ್ಕೆ ಹೊಸ ರೂಪವನ್ನು ನೀಡಿದೆವು. ದೇಶದ ಬಹಳಷ್ಟು ಮಂದಿಯನ್ನು ಬಡತನದಿಂದ ಹೊರಗೆ ತರಲು ಸಹಾಯವಾಯಿತು. ಇನ್ನೊಮ್ಮೆ ಅಧಿಕಾರಕ್ಕೆ ಬಂದರೆ ನಾವೇನು ಎನ್ನುವುದನ್ನು ತೋರಿಸುತ್ತೇವೆ ಎಂದರು.
ಮನೆ ಮನೆಗೆ ಆಹಾರ ವಿತರಿಸಿದ ಮುದ್ದು‌ ಪಾಂಡಾ: ಫೋಟೋ ನೋಡಿ ಖುಷಿಪಟ್ಟರು, ಪೂರ್ತಿ ಓದಿ ಪೆಚ್ಚಾದರು!

ಮೈಸೂರಿನಲ್ಲಿ ನಡುರಾತ್ರಿ ದರೋಡೆ- ವ್ಯಾಪಾರಿಯನ್ನು ಅಡ್ಡಗಟ್ಟಿ 1.8 ಲಕ್ಷ ಕಿತ್ತುಕೊಂಡ ದುಷ್ಕರ್ಮಿಗಳು

ತಾನು ಲವರ್‌ ಜತೆ ಮದುವೆಯಾಗಲು ಪತ್ನಿಯ ಸ್ಕೂಟಿಗೆ ಟ್ರ್ಯಾಕರ್‌ ಫಿಕ್ಸ್‌ ಮಾಡಿದ ಪತಿರಾಯ!

ಪ್ಯಾಂಟ್‌ ಜಿಪ್‌ ತೆಗೆಯುವುದು, ಬಟ್ಟೆಯ ಮೇಲಿನಿಂದ ಅಂಗ ಮುಟ್ಟುವುದು… ವಿವಾದಿತ ಲೇಡಿ ಜಡ್ಜ್‌ಗೆ ಬಡ್ತಿ ಕಟ್‌!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 4 =
Remember me
