ನವದೆಹಲಿ:ಕರೊನಾದ ಒಂದನೆಯ ಅಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಳೆದ ವರ್ಷ ಸಂಪೂರ್ಣ ಲಾಕ್‌ಡೌನ್‌ ಮಾಡಿದ್ದಾದ ಸರ್ಕಾರವನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದ ಕಾಂಗ್ರೆಸ್‌ ನಾಯಕ, ಸಂಸದ ರಾಹುಲ್‌ ಗಾಂಧಿ, ಹೀಗೆ ಲಾಕ್‌ಡೌನ್‌ ಮಾಡುವ ಮೂಲಕ ಅಮಾಯಕರನ್ನು ಬೀದಿಗೆ ತರಲಾಗಿದೆ, ಅಮಾಯಕರ ಹೊಟ್ಟೆಯ ಮೇಲೆ ಬರೆ ಹಾಕಲಾಗಿದೆ, ಲಾಕ್‌ಡೌನ್‌ನಿಂದ ಬಡವರಿಗೆ ಅನ್ಯಾಯವಾಗಿದೆ ಎಂದು ಆಕ್ರೋಶ ಹೊರಹಾಕಿದ್ದರು.
ಇದೀಗ ಕೆಲ ರಾಜ್ಯಗಳು ಮಾತ್ರ ಲಾಕ್‌ಡೌನ್‌ ಮಾಡಿರುವುದಕ್ಕೆ ಪುನಃ ಗರಂ ಆಗಿರುವ ರಾಹುಲ್‌ ಗಾಂಧಿ, ದೇಶವನ್ನು ಸಂಪೂರ್ಣ ಲಾಕ್‌ಡೌನ್‌ ಮಾಡಿ, ಹೀಗೆ ಮಾಡದೇ ಕೇಂದ್ರ ಸರ್ಕಾರ ಮುಗ್ಧ ಜನರನ್ನು ಬಲಿ ಪಡೆಯುತ್ತಿದೆ, ಅಮಾಯಕರ ಕೊಲೆ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಭಾರತದಲ್ಲಿ ಕೋವಿಡ್ ಸೋಂಕನ್ನು ತೊಲಗಿಸಬೇಕು ಎಂದರೆ ದೇಶವನ್ನು ಸಂಪೂರ್ಣ ಲಾಕ್‌ಡೌನ್‌ ಮಾಡಬೇಕು. ಇಲ್ಲದಿದ್ದರೆ ಜನರ ಮಾರಣ ಹೋಮವಾಗುತ್ತದೆ. ಲಾಕ್‌ಡೌನ್‌ ಸಮಯದಲ್ಲಿ ಬಡವರಿಗೆ ಆರ್ಥಿಕ ನೆರವು ನೀಡಬೇಕು ಎಂದು ಸಲಹೆ ಇತ್ತಿದ್ದಾರೆ.
ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ ನ್ಯಾಯ್ ಯೋಜನೆಯನ್ನು ಸರ್ಕಾರ ಜಾರಿಗೆ ತರಬೇಕು. ಬಡವರಿಗೆ ಕನಿಷ್ಠ ಆದಾಯವನ್ನು ಖಾತ್ರಿ ಪಡಿಸಬೇಕು. ತೀರಾ ಬಡ ಕುಟುಂಬಗಳಿಗೆ ವರ್ಷಕ್ಕೆ 72 ಸಾವಿರ ರೂಪಾಯಿ ನೀಡಬೇಕು ಎಂದಿದ್ದಾರೆ ರಾಹುಲ್‌ ಗಾಂಧಿ.
ಕೋವಿಡ್‌ ಹೆಸರಿನಲ್ಲಿ ನಟ ಸೋನು ಸೂದ್‌ ಮೋಸದಾಟ- ಟ್ವೀಟ್‌ಗೆ ಲೈಕ್‌ ಮಾಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಕಂಗನಾ!

ನಾಯಿ ಬೇಡ ಎಂದ್ರೂ ಕೇಳದೇ ಕೊಡೆ ಹಿಡಿದು ಮಳೆಯಿಂದ ರಕ್ಷಿಸಿದ ಪುಟಾಣಿ- ವಿಡಿಯೋ ವೈರಲ್‌

ಕೋರ್ಟ್‌ನಲ್ಲಿ ಕೇಸ್‌ ಇರುವಾಗ ಆಸ್ತಿ ಮಾರಾಟ ಮಾಡಲೇಬಾರದು ಎಂದೇನೂ ಕಾನೂನಿನಲ್ಲ… ಆದರೆ…

ಸೋಂಕಿತನನ್ನು ಸಾಗಿಸಲು ಹಿಂದೇಟು- ಆಂಬುಲೆನ್ಸ್‌ ಚಲಾಯಿಸಿ ಆಸ್ಪತ್ರೆಗೆ ಸಾಗಿಸಿದ ಸಚಿವ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
