ನವದೆಹಲಿ:ಕಾಂಗ್ರೆಸ್‌ ನಾಯಕ, ಸಂಸದ ರಾಹುಲ್‌ ಗಾಂಧಿ ತಮ್ಮ ಮಾತುಗಳಿಂದ ಸದಾ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡುತ್ತಲೇ ಇರುತ್ತಾರೆ. ಇದೀಗ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರನ್ನು ಟೀಕಿಸುವ ಭರದಲ್ಲಿ ಆವೇಶಭರಿತವಾಗಿ ಮಾತನಾಡಿ ಸುದ್ದಿಯಾಗಿದ್ದಾರೆ. ಅದೇನೆಂದರೆ ಕಾಂಗ್ರೆಸ್‌ ಪಕ್ಷಕ್ಕೆ ಮಹಿಳೆಯರ ಮೇಲೆ ಅಪಾರ ಪ್ರೀತಿ, ವಿಶ್ವಾಸ, ಕಾಳಜಿ ಇದೆ ಎಂದು ಸಾಬೀತು ಮಾಡಲು ಹೋಗಿ ಮಾಡಿರುವ ಭಾಷಣದ ತುಣುಕು ಇದೀಗ ಜಾಲತಾಣದಲ್ಲಿ ಟ್ರೋಲ್‌ ರೂಪದಲ್ಲಿ ಹರಿದಾಡುತ್ತಿದೆ.ಅಷ್ಟಕ್ಕೂ ರಾಹುಲ್‌ ಗಾಂಧಿ ಹೇಳಿದ್ದೇನೆಂದರೆ, ‘ನೀವು ನೋಡಿರುತ್ತೀರಾ… ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಸುತ್ತಲೂ ಸದಾ ಮೂರ್ನಾಲ್ಕು ಮಹಿಳೆಯರು ಇರುತ್ತಿದ್ದರು. ಆದರೆ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಅವರ ಸುತ್ತಲೂ ಯಾವಾಗಲಾದರೂ ಮಹಿಳೆಯರನ್ನು ನೋಡಿದ್ದೀರಾ’ ಎಂದು ಪ್ರಶ್ನಿಸಿದರು.ಈ ಪ್ರಶ್ನೆಗೆ ಅವರ ಅಕ್ಕಪಕ್ಕ ಸೇರಿದ್ದ ಮಹಿಳೆಯರೂ ಸೇರಿದಂತೆ ಸೇರಿದ್ದ ರಾಹುಲ್‌ ಅಭಿಮಾನಿಗಳು ಇಲ್ಲ ಇಲ್ಲ ಎಂದು ಉತ್ತರಿಸಿದರು. ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಆಯೋಜಿಸಿದ್ದ ಸಭೆಯನ್ನುದ್ದೇಶಿಸಿ ರಾಹುಲ್ ಗಾಂಧಿ ಮಾತನಾಡುತ್ತಿದ್ದರು.ಕಾಂಗ್ರೆಸ್ ಪಕ್ಷ ಮಹಿಳಾ ಸಬಲೀಕರಣದತ್ತ ಕೆಲಸ ಮಾಡುತ್ತಿದೆ. ಪಕ್ಷಕ್ಕೆ ಮಹಿಳೆಯರ ಬಗ್ಗೆ ಕಾಳಜಿ ಇದೆ ಎಂದು ಹೇಳುವುದು ಅವರ ಉದ್ದೇಶವಾಗಿದ್ದರೂ ಇದೀಗ ಮೋಹನ್‌ ಭಾಗ್ವತ್‌ ಅವರನ್ನು ಗಾಂಧಿ ಜತೆ ಹೋಲಿಕೆ ಮಾಡಿ ಅಲ್ಲಿ ಮಹಿಳೆಯರ ವಿಷಯ ತಂದು ಮಾಡಿರುವ ಎಡವಟ್ಟಿನಿಂದ ರಾಹುಲ್‌ ಗಾಂಧಿ ಇದೀಗ ವಿರೋಧಿಗಳ ಬಾಯಲ್ಲಿ ಆಹಾರವಾಗಿದ್ದಾರೆ.ನೀವು ಮೋಹನ್‌ ಭಾಗ್ವತ್‌ ಅವರನ್ನು ಹೊಗಳಿ ಗಾಂಧಿಯವರ ವಿರುದ್ಧ ಮಾತನಾಡಲು ಬಯಸಿರುವಿರಾ, ಏನು ಎಂದು ಅರ್ಥವಾಗುತ್ತಿಲ್ಲ ಎಂದು ಹಲವರು ಪ್ರಶ್ನಿಸಿದ್ದರೆ, ನಿಮ್ಮಂಥ ಸತ್ಯವಾದಿಗಳು ಸಿಗುವುದು ತೀರಾ ಅಪರೂಪ, ನಿಮ್ಮ ಪಕ್ಷಕ್ಕೆ ಇಂಥ ಸತ್ಯವಾದಿಗಳ ಅಗತ್ಯವಿದೆ ಎಂದು ಇನ್ನು ಹಲವರು ಕಾಲೆಳೆದಿದ್ದಾರೆ.ಇಲ್ಲಿದೆ ನೋಡಿ ರಾಹುಲ್‌ ಗಾಂಧಿ ಭಾಷಣದ ತುಣುಕು:
Pappu Dabbajaan NEW C******panti 😂😂 "When you see Mahatma Gandhi's picture, you'll see 2-3 women around him. Have you seen a picture of Mohan Bhagwat with any woman??" 🤦‍♀️🤦‍♀️#Dabbajaan#mohanbhagwatpic.twitter.com/72pvYXOkWt— Rosy (@rose_k01)September 15, 2021
Pappu Dabbajaan NEW C******panti 😂😂 "When you see Mahatma Gandhi's picture, you'll see 2-3 women around him. Have you seen a picture of Mohan Bhagwat with any woman??" 🤦‍♀️🤦‍♀️#Dabbajaan#mohanbhagwatpic.twitter.com/72pvYXOkWt
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − 6 =
Remember me
