ನವದೆಹಲಿ:ಭಾರತದ ಸ್ವಾತಂತ್ರ್ಯೋತ್ಸವದ ಅಮೃತ ವರ್ಷದ ಹಿನ್ನೆಲೆಯಲ್ಲಿ ರಾಷ್ಟ್ರದ ಜನತೆಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿಯವರು ಕೆಂಪುಕೋಟೆಯಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ನಿರರ್ಗಳ ಭಾಷಣ ಮಾಡಿ ಹಲವಾರು ವಿಷಯಗಳನ್ನು ಹಂಚಿಕೊಂಡರು.
ತಮ್ಮ ಮಾತಿನಲ್ಲಿ ಅವರು ಕಾಂಗ್ರೆಸ್​ ಪಕ್ಷವನ್ನು ಪರೋಕ್ಷವಾಗಿ ಟೀಕಿಸುತ್ತಾ, ಭಾರತವು ಭ್ರಷ್ಟಾಚಾರ ಮತ್ತು ವಂಶ ಪಾರಂಪರ್ಯ ರಾಜಕೀಯ ಎಂಬೆರಡು ದೊಡ್ಡ ಸವಾಲುಗಳನ್ನು ಎದುರಿಸುತ್ತಿದೆ ಎಂದು ಹೇಳಿದರು.
ಭ್ರಷ್ಟಾಚಾರವು ಗೆದ್ದಲಿನ ಹಾಗೆ ದೇಶವನ್ನು ಹಾಳು ಮಾಡುತ್ತಿದೆ. ದೇಶ ಇದರ ವಿರುದ್ಧ ಹೋರಾಡಬೇಕು. ಭ್ರಷ್ಟಾಚಾರವನ್ನು ಕಿತ್ತೊಗೆಯಬೇಕು ಎಂದು ಪ್ರಧಾನಿ ಹೇಳಿದ್ದರು. ಇದೇ ಸಂದರ್ಭದಲ್ಲಿ ಕುಟುಂಬ ರಾಜಕಾರಣವನ್ನೂ ಟೀಕಿಸಿದ್ದ ಅವರು, ಪರಿವಾರವಾದವು ಕೇವಲ ರಾಜಕೀಯಕ್ಕೆ ಮಾತ್ರವೇ ಸೀಮಿತವಾಗಿಲ್ಲ. ನಮ್ಮ ಅನೇಕ ಸಂಸ್ಥೆಗಳು ಕೂಡ ಕುಟುಂಬ ರಾಜಕೀಯದ ಪರಿಣಾಮ ಎದುರಿಸುತ್ತಿವೆ. ಪರಿವಾರವಾದವು ನಿಜವಾದ ಪ್ರತಿಭೆಗಳು ಮತ್ತ ರಾಷ್ಟ್ರದ ಸಾಮರ್ಥ್ಯಕ್ಕೆ ಹಾನಿ ಮಾಡುತ್ತಿವೆ. ಇದು ಭ್ರಷ್ಟಾಚಾರ ಹೆಚ್ಚಳಕ್ಕೂ ಕಾರಣವಾಗಿದೆ ಎಂದಿದ್ದರು.
ಸಂಸದ ರಾಹುಲ್​ ಗಾಂಧಿಯವರು ಕಾರ್ಯಕ್ರಮವೊಂದಕ್ಕೆ ಆಗಮಿಸಿದಾಗ ಪತ್ರಕರ್ತರು ಇದೇ ಪ್ರಶ್ನೆಯನ್ನು ರಾಹುಲ್​ ಮುಂದಿಟ್ಟರು. ಭಾರತವು ಭ್ರಷ್ಟಾಚಾರ ಮತ್ತು ವಂಶ ಪಾರಂಪರ್ಯ ರಾಜಕೀಯ ಎಂಬೆರಡು ದೊಡ್ಡ ಸವಾಲುಗಳನ್ನು ಎದುರಿಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ, ಅದಕ್ಕೆ ನೀವೇನು ಹೇಳುತ್ತೀರಿ ಎಂದು ಪ್ರಶ್ನಿಸಿದರು.
ಅಚಾನಕ್​ ಆಗಿ ಎದುರಾದ ಈ ವಿಭಿನ್ನ ಪ್ರಶ್ನೆಗಳಿಗೆ ಏನು ಉತ್ತರಿಸಬೇಕು ಎಂದು ತಿಳಿಯದೇ ಅರೆಕ್ಷಣ ರಾಹುಲ್​ ಗಾಂಧಿ ಕಕ್ಕಾಬಿಕ್ಕಿಯಾದರು. ನಂತರ ತಮ್ಮ ಮಾಸ್ಕ್​ ಸರಿಪಡಿಸಿಕೊಳ್ಳುತ್ತಾ, “ನಾನು ಇಂತಹ ವಿಷಯಗಳ ಕುರಿತು ಪ್ರತಿಕ್ರಿಯಿಸಲು ಇಚ್ಛಿಸುವುದಿಲ್ಲ. ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು” ಎಂದು ಹೇಳಿ ಕಾರನ್ನು ಹತ್ತಿಯೇ ಬಿಟ್ಟರು. ಇತ್ತ ಮಾಧ್ಯಮದವರು ಪ್ರಶ್ನೆ ಕೇಳುತ್ತಲೇ ಇದ್ದರು, ಅತ್ತ ರಾಹುಲ್​ ಗಾಂಧಿ ಕಾರನ್ನು ಆರಂಭಿಸುವಂತೆ ಡ್ರೈವರ್​ಗೆ ಸೂಚಿಸಿ ನಡೆದೇ ಬಿಟ್ಟರು.
ಅದರ ವಿಡಿಯೋ ಇದೀಗ ಭಾರಿ ವೈರಲ್​ ಆಗಿದ್ದು, ಥಹರೇವಾರಿ ಕಮೆಂಟ್​ಗಳು ಬರುತ್ತಿವೆ. ಮೊದಲೇ ಇಂಥದ್ದೊಂದು ಪ್ರಶ್ನೆ ಕೇಳುವುದು ತಿಳಿದಿದ್ದರೆ ತಾಯಿಯಿಂದಲೋ ಇಲ್ಲವೇ ಪಕ್ಷದ ಬಗ್ಗೆ ತಿಳಿದುಕೊಂಡವರಿಂದಲೇ ಉತ್ತರ ಬಾಯಿಪಾಠ ಮಾಡಿಕೊಂಡು ಬರುತ್ತಿದ್ದರು. ಆದರೆ ಪತ್ರಕರ್ತರು ಏಕಾಏಕಿ ಹೀಗೆ ಪ್ರಶ್ನೆ ಕೇಳಿದ್ದು ಸರಿಯಲ್ಲ ಎಂದು ಹಲವರು ತಮಾಷೆ ಮಾಡಿದ್ದರೆ, ರಾಹುಲ್​ ಗಾಂಧಿ ಅಭಿಮಾನಿಗಳು ಇಂಥ ಪ್ರಶ್ನೆಗಳಿಗೆ ಅವರು ಉತ್ತರಿಸಬೇಕೆಂದೇನಿಲ್ಲ ಎಂದು ಕಮೆಂಟ್​ ಮಾಡಿದ್ದಾರೆ.(ಏಜೆನ್ಸೀಸ್​)
ವಿಡಿಯೋ ಇಲ್ಲಿದೆ ನೋಡಿ…
#WATCH| Congress MP Rahul Gandhi says, "I won't make a comment on these things. Happy Independence to everyone," when asked about Prime Minister Narendra Modi's 'Two big challenges we face today – corruption & Parivaarvaad or nepotism' remark, today.pic.twitter.com/XAw1QC47j0— ANI (@ANI)August 15, 2022
#WATCH| Congress MP Rahul Gandhi says, "I won't make a comment on these things. Happy Independence to everyone," when asked about Prime Minister Narendra Modi's 'Two big challenges we face today – corruption & Parivaarvaad or nepotism' remark, today.pic.twitter.com/XAw1QC47j0
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
