ನವದೆಹಲಿ:ಕರೊನಾ ಲಸಿಕೆಯನ್ನು ವಿದೇಶಕ್ಕೆ ನೀಡಿರುವುದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಹಣ ಪಡೆದು ದೆಹಲಿಯ ತುಂಬೆಲ್ಲಾ ಪೋಸ್ಟರ್‌ ಹಾಕಿಸಿರುವ ಕಿಂಗ್‌ಪಿನ್‌ ಯಾರು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿರುವ ಬೆನ್ನಲ್ಲೇ ಸಂಸದ ರಾಹುಲ್‌ ಗಾಂಧಿ ಟ್ವಿಟರ್‌ನಲ್ಲಿ ‘ನನ್ನನ್ನು ಬಂಧಿಸಿ’ ಎಂದು ಟ್ವೀಟ್‌ ಮಾಡಿದ್ದಾರೆ.
ಲಸಿಕೆಯನ್ನು ತಯಾರಿಸುವ ಪೂರ್ವದಲ್ಲಿ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಕೆಲವು ದೇಶಗಳಿಗೆ ಭಾರತವು ಇದಾಗಲೇ ಲಸಿಕೆಯನ್ನು ರಫ್ತು ಮಾಡಿದೆ. ಈ ಕುರಿತು ಕೇಂದ್ರ ಸರ್ಕಾರ ಇದಾಗಲೇ ಹಲವಾರು ಬಾರಿ ಸ್ಪಷ್ಟನೆಯನ್ನೂ ನೀಡಿದೆ. ಇದರ ಹೊರತಾಗಿಯೂ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸಿಗೆ ಧಕ್ಕೆ ಬರಲು ಉದ್ದೇಶಪೂರ್ವಕವಾಗಿ ಅವರ ವಿರುದ್ಧ ಗೋಡೆಗಳಿಗೆ ಪೋಸ್ಟರ್‌ ಅಂಟಿಸಲಾಗುತ್ತಿದೆ.
ಇದರ ಬೆನ್ನಟ್ಟಿ ಹೋಗಿರುವ ಪೊಲೀಸರಿಗೆ ಇದಾಗಲೇ ಕೆಲವು ಆರೋಪಿಗಳು ಸೆರೆ ಸಿಕ್ಕಿದ್ದು ಅವರು ತಾವು 500-1000 ರೂಪಾಯಿಗಳನ್ನು ಪಡೆದು ಪೋಸ್ಟರ್‌ ಅಂಟಿಸುತ್ತಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ‘ಮೋದಿಜಿ ಹಮಾರೆ ಬಚ್ಚೋಂಕಿ ವ್ಯಾಕ್ಸಿನ್‌ ವಿದೇಶ್ ಕ್ಯೂ ಭೇಜ್ ದಿಯಾ (ಮೋದಿಜಿ ನೀವು ನಮ್ಮ ಮಕ್ಕಳ ಲಸಿಕೆಗಳನ್ನು ವಿದೇಶಗಳಿಗೆ ಏಕೆ ಕಳುಹಿಸಿದ್ದೀರಿ?)’ ಎಂಬ ಭಿತ್ತಿಪತ್ರಗಳನ್ನು ನಗರದ ಹಲವಾರು ಭಾಗಗಳಲ್ಲಿ ಅಂಟಿಸಿದ್ದರು. ಇದರಲ್ಲಿ ಕೆಲವು ಟೀಕೆಗಳನ್ನೂ ಮಾಡಲಾಗಿದೆ. ದೆಹಲಿಯ ಹಲವು ಭಾಗಗಳಲ್ಲಿ ಈ ರೀತಿ ಪೋಸ್ಟರ್‌ ಅಂಟಿಸುವ ಮೂಲಕ ಜನರಿಗೆ ಲಸಿಕೆ ಕುರಿತು ಹಾಗೂ ಪ್ರಧಾನಿ ವಿರುದ್ಧ ಕೆಟ್ಟ ಸಂದೇಶ ಸಾರಿರುವ ಹಿನ್ನೆಲೆಯಲ್ಲಿ ಎಫ್‌ಐಆರ್‌ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
Arrest me too.
मुझे भी गिरफ़्तार करो।pic.twitter.com/eZWp2NYysZ
— Rahul Gandhi (@RahulGandhi)May 16, 2021

17 ಮಂದಿಯ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಾಗಿದೆ. ಮಧ್ಯವರ್ತಿಗಳ ಮೂಲಕ ಈ ಹಣ ಸಂದಾಯವಾಗಿದ್ದು, ಇದರ ಕಿಂಗ್‌ಪಿನ್‌ಗಳ ಬಗ್ಗೆ ಪೊಲೀಸರು ಹುಟುಕಾಟ ನಡೆಸುತ್ತಿದ್ದಾರೆ.
ಈ ನಡುವೆಯೇ ಇದೇ ಪೋಸ್ಟರ್‌ ಶೇರ್‌ ಮಾಡಿಕೊಂಡಿರುವ ರಾಹುಲ್‌ ಗಾಂಧಿ, ನನ್ನನ್ನೂ ಬಂಧಿಸಿ ಎಂದು ಹೇಳಿದ್ದಾರೆ. ’ಮೋದಿಜಿ ಹಮಾರೆ ಬಚ್ಚೋಂಕಿ ವ್ಯಾಕ್ಸಿನ್‌ ವಿದೇಶ್ ಕ್ಯೂ ಭೇಜ್ ದಿಯಾ’ ಎಂಬ ಬರಹವನ್ನು ಟ್ವೀಟ್‌ನಲ್ಲಿ ಹಾಕಿಕೊಂಡಿರುವ ಅವರು ತಮ್ಮನ್ನೂ ಬಂಧಿಸಿ ಎಂದು ಹೇಳುವ ಮೂಲಕ ಪೋಸ್ಟರ್‌ ಅಂಟಿಸಿದವರ ಪರವಾಗಿ ನಿಂತಿದ್ದಾರೆ.
ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದ್ದು, ಪರ- ವಿರೋಧಗಳ ಕಮೆಂಟ್‌ಗಳ ಸುರಿಮಳೆ ಶುರುವಾಗಿದೆ. ವಿದೇಶಕ್ಕೆ ಲಸಿಕೆ ಹಂಚಿದ್ದು ಏಕೆ? ಲಸಿಕೆಯನ್ನು ಬೇರೆ ದೇಶಗಳಲ್ಲಿ ಉತ್ಪಾದನೆ ಮಾಡಿಸುವ ಪೂರ್ವದಲ್ಲಿ ಮಾಡಿಕೊಂಡಿದ್ದ ಒಡಂಬಡಿಕೆ ಏನು? ಅದರ ಪ್ರಕಾರವೇ ಲಸಿಕೆ ನೀಡಿರುವ ಉದ್ದೇಶ ಇವೆಲ್ಲವುಗಳ ಕುರಿತಾಗಿ ಸ್ಪಷ್ಟವಾಗಿ ಹೇಳಿದ್ದರೂ ಕೇಂದ್ರ ಸರ್ಕಾರ ಮತ್ತು ಪ್ರಧಾನಿಗೆ ಕಳಂಕ ತರುವ ಉದ್ದೇಶದಿಂದ ಇಂಥದ್ದೊಂದು ಪೋಸ್ಟರ್‌ ಅಂಟಿಸಿ ಜನರಲ್ಲಿ ಕೆಟ್ಟ ಭಾವನೆ ತುಂಬುವ ಪ್ರಯತ್ನ ಮಾಡಲಾಗುತ್ತಿರುವುದು ಸರಿಯಲ್ಲ, ಬಂಧನ ಸರಿಯಾಗಿದೆ ಎಂದು ಹಲವರು ಕಮೆಂಟ್‌ ಮಾಡಿದ್ದರೆ, ಪೋಸ್ಟರ್‌ ಅಂಟಿಸಿರುವುದರ ಪರವಾಗಿ ಕೆಲವರು ಕಮೆಂಟ್‌ ಮಾಡಿದ್ದಾರೆ.
ಎರಡನೇ ವಿವಾಹವಾಗಿದ್ದ ವಿಚ್ಛೇದಿತೆಗೆ ಎಂಜಲು ನೆಕ್ಕುವ ಶಿಕ್ಷೆ! ಮಹಾರಾಷ್ಟ್ರದಲ್ಲಿ ಆಘಾತದ ಘಟನೆ

ಅವನ ದೇಹ ಬೇಕು ಎಂದು ವರದಕ್ಷಿಣೆ ಕೇಸ್‌ ಧಮ್ಕಿ ಹಾಕ್ತಾಳೆ: ಏನು ಮಾಡಲಿ?

ಓಕೆ ಅನ್ನದಿದ್ರೆ ಇರಲ್ಲ ವಾಟ್ಸ್‌ಆ್ಯಪ್‌! ಮುಗಿದಿದೆ ಡೆಡ್‌ಲೈನ್‌, ಎಲ್ಲಾ ಆಪ್ಷನ್ಸ್‌ ಆಗಲಿವೆ ಮಾಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
