ನವದೆಹಲಿ:ಎಲ್ಲಾ ತೊಡಕುಗಳನ್ನು ಮೀರಿ ಇನ್ನೇನು ರಾಮಮಂದಿರದ ಭೂಮಿಪೂಜೆ ನೆರವೇರಿಲಿದೆ ಎನ್ನುವಾಗಲೇ ನಿನ್ನೆಯಷ್ಟೇ ಟ್ವೀಟ್‌ ಮಾಡಿದ್ದ ಪ್ರಿಯಾಂಕಾ ಗಾಂಧಿ ರಾಮನನ್ನು ಹಾಡಿ ಹೊಗಳಿದ್ದು. ರಾಮ ಎಲ್ಲೆಲ್ಲೂ ಇದ್ದಾನೆ, ಎಲ್ಲರೊಂದಿಗೂ ಇದ್ದಾನೆ ಎಂದು ಹೇಳಿದ್ದರು. ಅಯೋಧ್ಯೆಯ ನಿಧಿಯಾಗಿದ್ದ ರಾಮಮಂದಿರ ಭೂಮಿ ಪೂಜೆ ಸಮಾರಂಭ, ರಾಮನ ಸಂದೇಶಕ್ಕೆ ಅನುಗುಣವಾಗಿ ರಾಷ್ಟ್ರೀಯ ಏಕತೆ, ಸಹೋದರತ್ವ ಮತ್ತು ಸಾಂಸ್ಕೃತಿಕ ಸಾಮರಸ್ಯದ ಆಚರಣೆಯಾಗಲಿದೆ ಎಂದು ಹೇಳಿದ್ದರು.
ಇದರ ಬೆನ್ನಲ್ಲೇ ಇದೀಗ ರಾಹುಲ್‌ ಗಾಂಧಿ, ಭೂಮಿಪೂಜೆ ಮುಗಿದ ಮೇಲೆ ಟ್ವೀಟ್‌ ಮಾಡಿದ್ದು, ರಾಮನ ಬಗ್ಗೆ ಹಾಡಿ ಹೊಗಳಿದ್ದಾರೆ. “ಮರ್ಯಾದಾ ಪುರುಷೋತ್ತಮ ಶ್ರೀರಾಮ ಪ್ರೀತಿಯ ಪ್ರತೀಕ, ದ್ವೇಷ ಇರುವಲ್ಲಿ ಇರನು. ರಾಮ ಸಹಾನುಭೂತಿ, ಅವನು ಎಂದಿಗೂ ಕ್ರೌರ್ಯಕ್ಕೆ ಆಸ್ಪದ ಕೊಡುವುದಿಲ್ಲ. ರಾಮ ನ್ಯಾಯ, ಅವನು ಎಂದಿಗೂ ಅನ್ಯಾಯದ ಜತೆ ಇರಲ್ಲ ಎಂದು ಹೇಳಿದ್ದಾರೆ.
मर्यादा पुरुषोत्तम भगवान राम सर्वोत्तम मानवीय गुणों का स्वरूप हैं। वे हमारे मन की गहराइयों में बसी मानवता की मूल भावना हैं।
राम प्रेम हैंवे कभी घृणा में प्रकट नहीं हो सकते
राम करुणा हैंवे कभी क्रूरता में प्रकट नहीं हो सकते
राम न्याय हैंवे कभी अन्याय में प्रकट नहीं हो सकते।
— Rahul Gandhi (@RahulGandhi)August 5, 2020

ಭಗವಾನ್ ರಾಮ ಅತ್ಯುತ್ತಮ ಮಾನವ ಗುಣಗಳ ಪ್ರತೀಕ. ಆ ಗುಣಗಳು ನಮ್ಮ ಮನಸ್ಸಿನ ಆಳದಲ್ಲಿ ಮಾನವೀಯತೆಯ ತಿರುಳನ್ನು ಬೆಳೆಸುತ್ತವೆ. ರಾಮ ಎಂದರೆ ಪ್ರೀತಿಯ ಸಂಕೇತ, ಅಲ್ಲಿ ಎಂದಿಗೂ ಕ್ರೂರತನ ಇರುವುದಿಲ್ಲ’ ಎಂದು ಹೇಳಿದ್ದಾರೆ.
ಈ ಟ್ವೀಟ್‌ ಅನ್ನು ಇದಾಗಲೇ 14 ಸಾವಿರಕ್ಕೂ ಅಧಿಕ ಮಂದಿ ರೀಟ್ವೀಟ್‌ ಮಾಡಿದ್ದು, 60 ಸಾವಿರಕ್ಕೂ ಅಧಿಕ ಲೈಕ್ಸ್‌ಗಳು ಬಂದಿವೆ.
ಅಲ್ಲಿ ಹಿಂದೆಯೂ ಬಾಬರಿ ಮಸೀದಿ ಇತ್ತು, ಮುಂದೆಯೂ ಇರಲಿದೆ- ಯಾವ ತೀರ್ಪೂ ಲೆಕ್ಕಕ್ಕಿಲ್ಲ ಎಂದು ಟ್ವೀಟ್‌

ರಾಮಮಂದಿರದ ‘ರಘುಪತಿ ಲಡ್ಡು’ವಿನಲ್ಲಿ ಕರ್ನಾಟಕದ ಘಮಲು..

ಮೂಲ ಸಂವಿಧಾನದಲ್ಲಿದೆ ಅಯೋಧ್ಯೆಯ ರಾಮ- ಸಚಿವರಿಂದ ಚಿತ್ರ ಟ್ವೀಟ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
