ವಯನಾಡು (ಕೇರಳ):“ಅವರು ಈ ಕೃತ್ಯ ಎಸಗಿರುವುದಕ್ಕೆ ಕಾರಣ ಬಿಜೆಪಿ ಮತ್ತು ಆರ್​ಎಸ್​ಎಸ್. ದೇಶದಲ್ಲಿ ಅರಾಜಕತೆ ಉಂಟು ಮಾಡಿದ್ದಾರೆ. ಪಾಪ ಅವರು ಮಕ್ಕಳು, ಈ ರೀತಿ ಮಾಡಿರುವುದಕ್ಕೆ ಕೋಮುದ್ವೇಷ ಹರಡಿರುವುದೇ ಕಾರಣವೇ ವಿನಾ ಅವರ ತಪ್ಪು ಏನೂ ಇಲ್ಲ, ಅವರನ್ನು ಕ್ಷಮಿಸಿಬಿಡೋಣ…”– ಸಂಸದ ರಾಹುಲ್​ ಗಾಂಧಿ ಹೇಳಿರುವ ಇಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗುತ್ತಿದೆ. ಮಾಧ್ಯಮಗಳ ಮುಂದೆ ರಾಹುಲ್​ ಗಾಂಧಿ ಈ ರೀತಿ ಹೇಳಿಕೆ ನೀಡಿರುವ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿರುವುದೂ ಅಲ್ಲದೇ, ಇವರ ವಿರುದ್ಧ ಥಹರೇವಾರಿ ಕಮೆಂಟ್​ಗಳು ಬರುತ್ತಿವೆ. ಇದಕ್ಕೆ ಕಾರಣ, ರಾಜಸ್ಥಾನದ ಟೈರಲ್​ ಕನ್ಹಯ್ಯಾಲಾಲ್​ ಅವರ ರುಂಡವನ್ನು ಕತ್ತರಿಸಿ ಬರ್ಬರ ಹತ್ಯೆ ಮಾಡಿದವರ ಪರವಾಗಿ ಇವರು ಈ ಹೇಳಿಕೆ ನೀಡಿದ್ದಾರೆ ಎನ್ನುವುದು.
ಆದರೆ ಅಸಲಿಗೆ ಇದು ನಿಜವೆ ಎಂದು ಫ್ಯಾಕ್ಟ್​ಚೆಕ್​ ಮಾಡಿದಾಗ ಕಂಡುಬಂದದ್ದು ಏನೆಂದರೆ, ರಾಹುಲ್​ ಗಾಂಧಿಯವರು ಈ ಹೇಳಿಕೆ ನೀಡಿರುವುದು ನಿಜವೇ. “ಅವರು ಮಕ್ಕಳು, ಅವರನ್ನು ಕ್ಷಮಿಸಿಬಿಡೋಣ, ಇದಕ್ಕೆಲ್ಲಾ ಕಾರಣ ಬಿಜೆಪಿ ಮತ್ತು ಆರ್​ಎಸ್​ಎಸ್​” ಎಂದು ವಿಡಿಯೋದಲ್ಲಿ ಕೇಳಿಸಿರುವುದೂ ನಿಜವೇ. ಆದರೆ ಅಸಲಿಗೆ ರಾಹುಲ್​ ಗಾಂಧಿಯವರು ಹೇಳಿರುವುದು ಕನ್ಹಯ್ಯಾಲಾಲ್​ ಅವರ ಭೀಕರ ಹತ್ಯೆಯನ್ನು ಉದ್ದೇಶಿಸಿ ಅಲ್ಲ, ಬದಲಿಗೆ ಈಚೆಗೆ ಕೇರಳದ ವಯನಾಡಿನಲ್ಲಿರುವ ತಮ್ಮ ಕಚೇರಿಗೆ ಮೇಲೆ ನಡೆದಿರುವ ಆಕ್ರಮಣದ ಕುರಿತು!
ಇದರ ಅರ್ಥ ತಮ್ಮ ಕಚೇರಿ ಮೇಲೆ ದಾಳಿ ನಡೆಸಿದವರು ಮಕ್ಕಳು. ಅವರನ್ನು ಕ್ಷಮಿಸೋಣ. ಈ ರೀತಿ ಈ ಮಕ್ಕಳೆಲ್ಲಾ ಮಾಡಿರುವುದಕ್ಕೆ ಕಾರಣ ಆರ್​ಎಸ್​ಎಸ್​ ಮತ್ತು ಬಿಜೆಪಿ ಹರಡುತ್ತಿರುವ ದ್ವೇಷ ಎಂದು ರಾಹುಲ್​ ಗಾಂಧಿ ಹೇಳಿದ್ದಾರೆ. ಎಸ್ಎಫ್ಐ ಕಾರ್ಯಕರ್ತರು ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ದೇಶಾದ್ಯಂತ ಕಾಂಗ್ರೆಸ್​ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಕಚೇರಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಸಿಪಿಐ(ಎಂ)ನ ವಿದ್ಯಾರ್ಥಿ ಘಟಕವಾದ ಭಾರತೀಯ ವಿದ್ಯಾರ್ಥಿ ಸಂಘಟನೆಯ (ಎಸ್‌ಎಫ್‌ಐ) 19 ಕಾರ್ಯಕರ್ತರನ್ನು ಇದಾಗಲೇ ಬಂಧಿಸಲಾಗಿದೆ.
ವೈರಲ್​ ಆಗಿರುವ ವಿಡಿಯೋ ಹೀಗಿದೆ ನೋಡಿ (ಕೃಪೆ ಝೀ ನ್ಯೂಸ್​)
ಕೇರಳದ ವಯಾನಾಡಿನ ತಮ್ಮ ಕಚೇರಿಯನ್ನು ಧ್ವಂಸಗೊಳಿಸಿರುವುದರ ಕುರಿತು ಸಂಸದ ರಾಹುಲ್​ಗಾಂಧಿ ಹೀಗೆ ಹೇಳಿದರು.pic.twitter.com/CfAr6BU64B— Vijayavani (@VVani4U)July 3, 2022
ಕೇರಳದ ವಯಾನಾಡಿನ ತಮ್ಮ ಕಚೇರಿಯನ್ನು ಧ್ವಂಸಗೊಳಿಸಿರುವುದರ ಕುರಿತು ಸಂಸದ ರಾಹುಲ್​ಗಾಂಧಿ ಹೀಗೆ ಹೇಳಿದರು.pic.twitter.com/CfAr6BU64B
ಟೈಲರ್​ ರುಂಡ ಕಡಿದವನ ಬೈಕ್​​ ನಂಬರ್​ ಬಿಚ್ಚಿಟ್ಟ ಭಯಾನಕ ಕಥೆ! ಈ ಸಂಖ್ಯೆ ಪಡೆಯಲು ಲಕ್ಷ ಲಕ್ಷ ನೀಡಿದ್ದ…
ಟೈಲರ್ ರುಂಡ ಕಡಿದು ತುಂಬಾ ಒಳ್ಳೆಯ ಕೆಲ್ಸ ಮಾಡಿದ್ದೀರಿ ಸಹೋದರರೇ… ​ ಭೇಷ್​ ಎಂದು ಪೋಸ್ಟ್​​: ಅರೆಸ್ಟ್​​
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 20 =
Remember me
