ನವದೆಹಲಿ:ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದಾಗಲೇ ಜಾರಿ ನಿರ್ದೇಶನಾಲಯ (ಇಡಿ) ಸಂಸದ ರಾಹುಲ್ ಗಾಂಧಿ ಅವರನ್ನು ಆರು ದಿನಗಳವರೆಗೆ 50 ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆದಿದೆ.
ಈ ವೇಳೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಎದುರು ಏನಾಯಿತು? ಇಷ್ಟು ಸುದೀರ್ಘ ಅವಧಿಯಲ್ಲಿ ತೊಂದರೆ ಆಗಲಿಲ್ಲವಾ? ಹೇಗೆಲ್ಲಾ ನಿಭಾಯಿಸಿದರೆ ಎಂದು ಕೇಳಿರುವ ಪ್ರಶ್ನೆಗೆ ರಾಹುಲ್​ ಗಾಂಧಿ ಉತ್ತರಿಸಿದ್ದು ಹೀಗೆ…
‘ಜಾರಿ ನಿರ್ದೇಶನಾಲಯದ ಸುದೀರ್ಘ ವಿಚಾರಣೆ ಎದುರಿಸಲು ನನಗೆ ಬಹಳ ಕಷ್ಟವಾಗಿರಬಹುದು ಎಂದು ಬಹುತೇಕ ಎಲ್ಲರೂ ಯೋಚಿಸುತ್ತಿದ್ದೀರಿ. ಅದರೆ ಇದು ತಪ್ಪು. ನನಗೆ ಸ್ವಲ್ಪವೂ ಕಷ್ಟವಾಗಲಿಲ್ಲ. ಏಕೆಂದರೆ ವಿಚಾರಣಾಧಿಕಾರಿಗಳ ಎದುರು ನಾನು ಒಬ್ಬನೇ ಕುಳಿತುಕೊಂಡಿರಲಿಲ್ಲ. ಬದಲಿಗೆ ಕಾಂಗ್ರೆಸ್‌ನ ಕೆಲವು ಮುಖಂಡರೂ ಇದ್ದರು. ನನಗೆ ಏನೂ ಭಯವಾಗಲಿಲ್ಲ.
‘ಅಷ್ಟಕ್ಕೂ ನನಗೆ ಏಕೆ ಭಯವಾಗಬೇಕು? ನಾನು ಸತ್ಯದ ಪರವಾಗಿ ಇದ್ದೇನೆ. ಐದು ದಿನಗಳಲ್ಲಿಯೇ 50 ಗಂಟೆಗೂ ಹೆಚ್ಚು ಸಮಯ ವಿಚಾರಣೆಗೆ ಒಳಪಡಿಸಲಾಗಿದೆ. ಚಿಕ್ಕದಾಗಿರುವ ಕತ್ತಲೆ ಕೋಣೆಯಲ್ಲಿ ನನ್ನನ್ನು ಕೂರಿಸಿ ವಿಚಾರಣೆ ನಡೆಸಲಾಗುತ್ತಿದೆ. ಅಲ್ಲಿ ಮೂವರು ಇ.ಡಿ ಅಧಿಕಾರಿಗಳು ಇದ್ದಾರೆ. ಅವರು ಸೂಚನೆಗಳನ್ನು ಪಡೆದುಕೊಳ್ಳಲು ಆಗಾಗ್ಗೆ ಕೊಠಡಿಯಿಂದ ಹೊರಗೆ ಹೋಗುತ್ತಿದ್ದರು. ನಾನು ಮಾತ್ರ ಒಳಗಡೆಯೇ ಇರುತ್ತಿದ್ದೇನೆ. ನನಗೆ ತುಂಬಾ ತಾಳ್ಮೆ ಇದೆ. ಆದ್ದರಿಂದ ಎಲ್ಲಾ ಪ್ರಶ್ನೆಗಳಿಗೂ ತಾಳ್ಮೆಯಿಂದ ಉತ್ತರ ನೀಡುತ್ತಿದ್ದೇನೆ.
‘ನನ್ನ ಈ ಪರಿಯ ತಾಳ್ಮೆ ಹಾಗೂ ಸಮಾಧಾನದಿಂದ ಉತ್ತರ ಕೊಡುವುದನ್ನು ನೋಡಿ ತನಿಖೆ ಮಾಡುತ್ತಿರುವ ಅಧಿಕಾರಿಗಳೇ ಅಚ್ಚರಿಗೆ ಒಳಗಾಗಿದ್ದಾರೆ. ನಾನು ಇಷ್ಟು ಶಾಂತವಾಗಿ ಇರಲು ಹೇಗೆ ಸಾಧ್ಯ ಎಂದು ಅವರು ಕೇಳಿದರು. ನಾನು ಅವರಿಗೆ ಸತ್ಯ ಹೇಳಲಿಲ್ಲ, ಏನೋ ಒಂದು ಕಾರಣ ಹೇಳಿದೆ. ನಿಜವಾಗಿಯೂ ಹೇಳಬೇಕು ಎಂದರೆ ನಾನು ವಿಪಾಸನಾ ಮಾಡುವ ಅಭ್ಯಾಸ ಹೊಂದಿದ್ದೇನೆ. ಆದ್ದರಿಂದ ಸುದೀರ್ಘ ಸಮಯ ಸುಲಭವಾಗಿ ಕೂರಬಲ್ಲೆ.
‘ಯಾವುದೇ ಕಾಂಗ್ರೆಸ್ ನಾಯಕರನ್ನು ಬೆದರಿಸಲು ಅಥವಾ ದಬ್ಬಾಳಿಕೆ ಮಾಡಲು ಸಾಧ್ಯವಿಲ್ಲ ಎಂಬುದನ್ನು ವಿಚಾರಣಾಧಿಕಾರಿಗಳು ಅರಿತುಕೊಂಡಂತೆ ತೋರುತ್ತಿದೆ. ನಾನು ಅದನ್ನು ಅವರಿಗೆ ತೋರಿಸಿಕೊಟ್ಟಿದ್ದೇನೆ. ನಾವು ಸತ್ಯದ ಪರವಾಗಿ ಇದ್ದೇವೆ. ವಿಚಾರಣೆಗೆ ಒಳಪಡಿಸಿದ ಅಷ್ಟೂ ದಿನವೂ ನನ್ನನ್ನು ಅಧಿಕಾರಿಗಳು ಪ್ರಶಂಸಿಸಿದ್ದಾರೆ’ ಎಂದು ರಾಹುಲ್​ ಗಾಂಧಿ ತಮ್ಮ ಬೆನ್ನನ್ನು ತಟ್ಟಿಕೊಂಡಿದ್ದಾರೆ. ಇಂಥ ವಿಚಾರಣೆಗಳನ್ನು ನಾನು ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ.(ಏಜೆನ್ಸೀಸ್​)
ವೈದ್ಯರು ಬೆಡ್​ರೆಸ್ಟ್​ ಹೇಳಿದ್ದಾರೆ ಎಂದ ಸೋನಿಯಾ: ವಿಚಾರಣೆಗೆ ಇನ್ನೂ ವೇಳೆ ಕೋರಿ ಇ.ಡಿಗೆ ಪತ್ರ

‘ಮಹಾ’ ಸರ್ಕಾರದ ಬಿಕ್ಕಟ್ಟಿನ ನಡುವೆಯೇ ಹಂಗಾಮಾ ಸೃಷ್ಟಿಸಿದ ಸಚಿವನ ‘ಪತ್ನಿ’: ಪರಪುರುಷನ ಜತೆ ಲಾಡ್ಜ್​ನಲ್ಲಿ ಅರೆಸ್ಟ್​!

ಇ.ಡಿ ಡ್ರಿಲ್​: ರಾಹುಲ್​ ಪರ ಟ್ವೀಟ್​ ಮಾಡಿ ಸಂಕಷ್ಟಕ್ಕೆ ಸಿಲುಕಿದ ನಟಿ ರಮ್ಯಾ: ಕಮೆಂಟಿಗರು ಮಾಡಿದರು ‘ಚಾರ್ಟ್’​ ಪಾಠ!

‘ಮಹಾ’ ಸರ್ಕಾರದ ಬಿಕ್ಕಟ್ಟಿನ ನಡುವೆಯೇ ಹಂಗಾಮಾ ಸೃಷ್ಟಿಸಿದ ಸಚಿವನ ‘ಪತ್ನಿ’: ಪರಪುರುಷನ ಜತೆ ಲಾಡ್ಜ್​ನಲ್ಲಿ ಅರೆಸ್ಟ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
